ಸ್ಕೂಟರ್​ ಡಿಕ್ಕಿಯೊಳಗೆ ಹೆಬ್ಬಾವು ಪ್ರತ್ಯಕ್ಷ! ಬೆಚ್ಚಿಬಿದ್ದ ವಾಹನದ ಮಾಲೀಕ.

ನವದೆಹಲಿ: ಮಳೆಗಾಲ ಬಂತೆಂದರೆ ಸಾಕು ಹಾವುಗಳು ಬೆಚ್ಚನೆಯ ಪ್ರದೇಶವನ್ನು ಹುಡುಕಿಕೊಂಡು ಬರುತ್ತವೆ. ಈ ವೇಳೆ ಶೂ, ಹೆಲ್ಮೆಟ್​, ಬೈಕ್​ಗಳಲ್ಲಿ ಅಷ್ಟೇ ಯಾಕೆ ಮನೆಗಳಲ್ಲಿನ ಇಕ್ಕಾಟದ ಪ್ರದೇಶಗಳಲ್ಲಿ ಹಾವುಗಳು ಅಡಗಿಕೊಳ್ಳುವುದನ್ನು ನಾವು ನೋಡಿದ್ದೇವೆ. ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ.

ಹೀಗಾಗಿ ತುಂಬಾ ಎಚ್ಚರಿಕೆ ವಹಿಸುವುದು ತುಂಬಾ ಅಗತ್ಯ. ಅದೇ ರೀತಿ ಸ್ಕೂಟರ್​​ನ ಡಿಕ್ಕಿಯ ಒಳಗೆ ದೈತ್ಯಾಕಾರದ ಹೆಬ್ಬಾವು ಪ್ರತ್ಯಕ್ಷವಾಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್​ ಆಗುತ್ತಿದೆ.

ಸ್ಕೂಟರ್​ನ ಡಿಕ್ಕಿಯೊಳಗೆ ಬುಸ್​… ಬುಸ್​… ಎಂಬ ಶಬ್ದವನ್ನು ಕೇಳಿ ಭಯಗೊಂಡ ವಾಹನದ ಮಾಲೀಕ ಕೋಲಿನ ಸಹಾಯದಿಂದ ಡಿಕ್ಕಿಯನ್ನು ಓಪನ್​ ಮಾಡಿದಾಗ ಅದರೊಳಗೆ ಹೆಬ್ಬಾವು ಬೆಚ್ಚನೆ ಮಲಗಿರುವ ದೃಶ್ಯ ವಿಡಿಯೋದಲ್ಲಿದೆ. ಹೆಬ್ಬಾವನ್ನು ನೋಡಿ ಒಂದು ಕ್ಷಣ ಸ್ಕೂಟರ್​ ಮಾಲೀಕನೇ ಶಾಕ್​ ಆಗಿದ್ದಾರೆ.

ಅಂದಹಾಗೆ ಸರೀಸೃಪಗಳಲ್ಲಿ ಹೆಬ್ಬಾವುಗಳು ತುಂಬಾ ಅಪರೂಪ. ಮಳೆಗಾಲದಲ್ಲಿ ಬೆಚ್ಚಗಿನ ಪ್ರದೇಶದಲ್ಲಿ ಆಶ್ರಯ ಪಡೆಯಲು ಹೆಬ್ಬಾವು ದ್ವಿಚಕ್ರ ವಾಹನದ ಡಿಕ್ಕಿಯನ್ನು ಆರಿಸಿದೆ. ಈ ವಿಡಿಯೋವನ್ನು ವ್ಯಕ್ತಿಯೊಬ್ಬರು ತಮ್ಮ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸ್ಕೂಟರ್​ ಡಿಕ್ಕಿ ತೆರೆದಾಗ ಪೆಟ್ರೋಲ್​ ಕ್ಯಾಪ್ ಜಾಗದಲ್ಲಿ ಅಪಾಯಕಾರಿ ಹೆಬ್ಬಾವು ಕಂಡುಬಂದಿದೆ.

ಸದ್ಯ ಈ ವಿಡಿಯೋ ವೈರಲ್ ಆಗಿದೆ. ಇದು ಮರಿ ಹೆಬ್ಬಾವು ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ, ಇದನ್ನು ಇಂಡಿಯನ್ ರಾಕ್ ಪೈಥಾನ್ ಎಂದು ಕರೆಯಲಾಗುತ್ತದೆ. ಆದರೆ ಈ ವಿಡಿಯೋ ಎಲ್ಲಿಯದ್ದು ಎಂಬ ಮಾಹಿತಿ ಇಲ್ಲ. ಈ ಮಳೆಗಾಲದಲ್ಲಿ ವಾಹನ ಸವಾರರು ತುಂಬಾ ಎಚ್ಚರಿಕೆ ವಹಿಸಬೇಕು. ಬೈಕನ್ನು ಹೊರತೆಗೆಯುವ ಮೊದಲು ಎರಡು ಬಾರಿ ಪರಿಶೀಲಿಸುವುದು ಒಳ್ಳೆಯದು.

Source: https://m.dailyhunt.in/news/india/kannada/vijayvani-epaper-vijaykan/skutar+dikkiyolage+hebbaavu+pratyaksha+bechhibiddha+vaahanadha+maalika+vidiyo+vairal+-newsid-n619104380?listname=topicsList&topic=for%20you&index=1&topicIndex=0&mode=pwa&action=click

Leave a Reply

Your email address will not be published. Required fields are marked *