ಪಾಕ್​ – ಭಾರತ ಸೂಪರ್​ ಫೋರ್​ ಪಂದ್ಯಕ್ಕೂ ಕಾಡಿದ ವರುಣ.. ಮೀಸಲು ದಿನಕ್ಕೆ ಮ್ಯಾಚ್​ ಮುಂದೂಡಿಕೆ

ಕೊಲಂಬೊ (ಶ್ರೀಲಂಕಾ): ನೀಲಾಕಾಶದ ಅಡಿಯಲ್ಲಿ ಆರಂಭವಾದ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಒಮ್ಮೆಗೆ ಮಳೆ ಕಾಡಿದೆ.ವಾರದ ಹಿಂದೆ ನಡೆದ ಲೀಗ್ ಹಂತದ ಪಂದ್ಯಕ್ಕೂ ಮಳೆ ಅಡ್ಡಿಪಡಿಸಿತ್ತು. ಈಗ ಸೂಪರ್​ ಫೋರ್​ ಹಂತದ ಪಂದ್ಯಕ್ಕೂ ವರುಣ ಅಡ್ಡಿಯಾಗಿದ್ದಾನೆ. ಮೀಸಲು ದಿನವಾದ ನಾಳೆ ಪಂದ್ಯ ನಡೆಯಲಿದೆ. ​

24.1ನೇ ಓವರ್​ ವೇಳೆ ಜೋರಾಗಿ ಆರಂಭವಾದ ಮಳೆ ಸುಮಾರು ಎರಡು ಗಂಟೆಗಳ ಕಾಲ ಎಡೆಬಿಡದೇ ಸುರಿದಿದೆ. ಇದರಿಂದ ಮೈದಾನ ಇನ್ನೂ ತೇವಾಂಶದಿಂದ ಕೂಡಿದ್ದು, ಪಂದ್ಯವನ್ನು ನಾಳಿನ ಮೀಸಲು ದಿನಕ್ಕೆ ಮುಂದೂಡಲಾಗಿದೆ.

ಭಾರತ ಮಳೆ ಆರಂಭಕ್ಕೂ ಮುನ್ನ ರೋಹಿತ್ ಶರ್ಮಾ (56) ಮತ್ತು ಶುಭಮನ್​ ಗಿಲ್ (58)​ ವಿಕೆಟ್​ ಕಳೆದುಕೊಂಡು 147 ರನ್​ ಕಲೆ ಹಾಕಿದೆ. ಕ್ರೀಸ್​ನಲ್ಲಿ ವಿರಾಟ್​ ಕೊಹ್ಲಿ(8) ಮತ್ತು ಕೆಎಲ್ ರಾಹುಲ್ (17)​ ಇದ್ದಾರೆ​. ನಾಳೆ (ಸೋಮವಾರ) ಇದೇ ಹಂತದಿಂದ ಪಂದ್ಯ ಆರಂಭವಾಗಲಿದ್ದು, ಭಾರತ ಬಾಕಿ 25 ಓವರ್​ ಬ್ಯಾಟಿಂಗ್​ ಮಾಡಬೇಕಿದೆ.

https://platform.twitter.com/embed/Tweet.html?dnt=false&embedId=twitter-widget-2&features=eyJ0ZndfdGltZWxpbmVfbGlzdCI6eyJidWNrZXQiOltdLCJ2ZXJzaW9uIjpudWxsfSwidGZ3X2ZvbGxvd2VyX2NvdW50X3N1bnNldCI6eyJidWNrZXQiOnRydWUsInZlcnNpb24iOm51bGx9LCJ0ZndfdHdlZXRfZWRpdF9iYWNrZW5kIjp7ImJ1Y2tldCI6Im9uIiwidmVyc2lvbiI6bnVsbH0sInRmd19yZWZzcmNfc2Vzc2lvbiI6eyJidWNrZXQiOiJvbiIsInZlcnNpb24iOm51bGx9LCJ0ZndfZm9zbnJfc29mdF9pbnRlcnZlbnRpb25zX2VuYWJsZWQiOnsiYnVja2V0Ijoib24iLCJ2ZXJzaW9uIjpudWxsfSwidGZ3X21peGVkX21lZGlhXzE1ODk3Ijp7ImJ1Y2tldCI6InRyZWF0bWVudCIsInZlcnNpb24iOm51bGx9LCJ0ZndfZXhwZXJpbWVudHNfY29va2llX2V4cGlyYXRpb24iOnsiYnVja2V0IjoxMjA5NjAwLCJ2ZXJzaW9uIjpudWxsfSwidGZ3X3Nob3dfYmlyZHdhdGNoX3Bpdm90c19lbmFibGVkIjp7ImJ1Y2tldCI6Im9uIiwidmVyc2lvbiI6bnVsbH0sInRmd19kdXBsaWNhdGVfc2NyaWJlc190b19zZXR0aW5ncyI6eyJidWNrZXQiOiJvbiIsInZlcnNpb24iOm51bGx9LCJ0ZndfdXNlX3Byb2ZpbGVfaW1hZ2Vfc2hhcGVfZW5hYmxlZCI6eyJidWNrZXQiOiJvbiIsInZlcnNpb24iOm51bGx9LCJ0ZndfdmlkZW9faGxzX2R5bmFtaWNfbWFuaWZlc3RzXzE1MDgyIjp7ImJ1Y2tldCI6InRydWVfYml0cmF0ZSIsInZlcnNpb24iOm51bGx9LCJ0ZndfbGVnYWN5X3RpbWVsaW5lX3N1bnNldCI6eyJidWNrZXQiOnRydWUsInZlcnNpb24iOm51bGx9LCJ0ZndfdHdlZXRfZWRpdF9mcm9udGVuZCI6eyJidWNrZXQiOiJvbiIsInZlcnNpb24iOm51bGx9fQ%3D%3D&frame=false&hideCard=false&hideThread=false&id=1700892569054687417&lang=en&origin=https%3A%2F%2Fm.dailyhunt.in%2Fnews%2Findia%2Fkannada%2Fetv%2Bbharat%2Bkannada-epaper-etvbhkn%2Fhomenews-updates-homenews%3Fmode%3Dpwa&sessionId=08827df0bf6b28db76ab7fa4c4739e952591f6eb&theme=light&widgetsVersion=aaf4084522e3a%3A1674595607486&width=550px

ಟಾಸ್​ ಸೋತು ಮೊದಲು ಬ್ಯಾಟಿಂಗ್​ಗಿಳಿದ ಭಾರತ ಉತ್ತಮ ಆರಂಭವನ್ನು ಪಡೆದುಕೊಂಡಿತ್ತು. ಏಷ್ಯಾಕಪ್​ನ ಲೀಗ್​ ಹಂತದ ಪಂದ್ಯದಲ್ಲಿ ಪಾಕ್​ ಬೌಲರ್​​ಗಳಿಗೆ ನಲುಗಿದ್ದ ಗಿಲ್ ಇಂದು ಹೆಚ್ಚು ಭರವಸೆಯಲ್ಲಿ ಕಂಡು ಬಂದರು. ಬೌಂಡರಿಗಳ ಸಹಾಯದಿಂದಲೇ ರನ್​ ಕಲೆಹಾಕಿದರು. ರೋಹಿತ್ ಶರ್ಮಾ ಇಂದು ಮೊದಲ ಕೆಲ ಓವರ್​ಗಳಲ್ಲಿ ಅಷ್ಟು ಉತ್ತಮ ಬ್ಯಾಟಿಂಗ್​ ಮಾಡಲಿಲ್ಲ. ನಂತರ ಪಾಕ್​ ವಿರುದ್ಧ ಲಯ ಕಂಡುಕೊಂಡರು.

ರೋಹಿತ್​ ಶರ್ಮಾ ಅವರನ್ನು ಪಾಕ್​ನ ಸ್ವಿಂಗ್​ ಸ್ಪೆಶಾಲಿಷ್ಟ್​​ ನಸೀಮ್​ ಕಾಡಿದರು. ಅವರ ಸ್ವಿಂಗ್​ ಬಾಲ್​ಗೆ ನಾಯಕ ರೋಹಿತ್​ ವಿಕೆಟ್​ ಕಾಯ್ದುಕೊಳ್ಳಲು ಪರದಾಡಿಸರು. ಇದರಿಂದ 20 ಬಾಲ್​ ಅಡಿದ ರೋಹಿತ್​ ಕೇವಲ 10 ರನ್​ ಗಳಿಸಿದ್ದರು. ಆದರೆ ಪವರ್​ ಪ್ಲೇ ನಂತರ ಸ್ಪಿನ್ನರ್​ಗಳಿಗೆ ಚಳಿ ಬಿಡಿಸಿದರು. ಒಂದೇ ಓವರ್​ನಲ್ಲಿ 15ಕ್ಕೂ ಹೆಚ್ಚು ರನ್​ ಗಳಿಸಿ ಕಮ್​ಬ್ಯಾಕ್​ ಮಾಡಿದರು.

ಗಿಲ್​ ಆರಂಭದಿಂದಲೇ ಅಬ್ಬರಿಸುತ್ತಾ ಬ್ಯಾಟಿಂಗ್​ ಮಾಡಿದರು. ಶಾಹೀನ್​ ಅಫ್ರಿದಿಯ ಬೌಲಿಂಗ್​ನ್ನು ಸರಿಯಾಗಿ ಅರಿತ ಗಿಲ್​ ಕಟ್​, ಪುಲ್​ ಶಾಟ್​ಗಳನ್ನು ಲೀಲಾಜಾಲವಾಗಿ ಆಡಿದರು. ಇದರಿಂದ ಭಾರತ 10 ಓವರ್​ಗೆ ವಿಕೆಟ್ ನಷ್ಟವಿಲ್ಲದೇ 61 ರನ್​ ಗಳಿಸಿತ್ತು. 13ನೇ ಓವರ್​ನ್ನು ಶಾಬಾದ್​ ಖಾನ್​ ಮಾಡಿದರು. ಇಲ್ಲಿ ರೋಹಿತ್​ ಸ್ಕೋರ್​ಗೆ ಸ್ವಲ್ಪ ಆಕ್ಸಿಲರೇಟ್​ ಮಾಡಿದರು. ಖಾನ್​ ಓವರ್​ನಲ್ಲಿ 2 ಸಿಕ್ಸ್​ ಮತ್ತು ಒಂದು ಬೌಂಡರಿ ಗಳಿಸಿ 19 ರನ್​ ಕಲೆಹಾಕಿದರು.

https://platform.twitter.com/embed/Tweet.html?dnt=false&embedId=twitter-widget-3&features=eyJ0ZndfdGltZWxpbmVfbGlzdCI6eyJidWNrZXQiOltdLCJ2ZXJzaW9uIjpudWxsfSwidGZ3X2ZvbGxvd2VyX2NvdW50X3N1bnNldCI6eyJidWNrZXQiOnRydWUsInZlcnNpb24iOm51bGx9LCJ0ZndfdHdlZXRfZWRpdF9iYWNrZW5kIjp7ImJ1Y2tldCI6Im9uIiwidmVyc2lvbiI6bnVsbH0sInRmd19yZWZzcmNfc2Vzc2lvbiI6eyJidWNrZXQiOiJvbiIsInZlcnNpb24iOm51bGx9LCJ0ZndfZm9zbnJfc29mdF9pbnRlcnZlbnRpb25zX2VuYWJsZWQiOnsiYnVja2V0Ijoib24iLCJ2ZXJzaW9uIjpudWxsfSwidGZ3X21peGVkX21lZGlhXzE1ODk3Ijp7ImJ1Y2tldCI6InRyZWF0bWVudCIsInZlcnNpb24iOm51bGx9LCJ0ZndfZXhwZXJpbWVudHNfY29va2llX2V4cGlyYXRpb24iOnsiYnVja2V0IjoxMjA5NjAwLCJ2ZXJzaW9uIjpudWxsfSwidGZ3X3Nob3dfYmlyZHdhdGNoX3Bpdm90c19lbmFibGVkIjp7ImJ1Y2tldCI6Im9uIiwidmVyc2lvbiI6bnVsbH0sInRmd19kdXBsaWNhdGVfc2NyaWJlc190b19zZXR0aW5ncyI6eyJidWNrZXQiOiJvbiIsInZlcnNpb24iOm51bGx9LCJ0ZndfdXNlX3Byb2ZpbGVfaW1hZ2Vfc2hhcGVfZW5hYmxlZCI6eyJidWNrZXQiOiJvbiIsInZlcnNpb24iOm51bGx9LCJ0ZndfdmlkZW9faGxzX2R5bmFtaWNfbWFuaWZlc3RzXzE1MDgyIjp7ImJ1Y2tldCI6InRydWVfYml0cmF0ZSIsInZlcnNpb24iOm51bGx9LCJ0ZndfbGVnYWN5X3RpbWVsaW5lX3N1bnNldCI6eyJidWNrZXQiOnRydWUsInZlcnNpb24iOm51bGx9LCJ0ZndfdHdlZXRfZWRpdF9mcm9udGVuZCI6eyJidWNrZXQiOiJvbiIsInZlcnNpb24iOm51bGx9fQ%3D%3D&frame=false&hideCard=false&hideThread=false&id=1700894386211754385&lang=en&origin=https%3A%2F%2Fm.dailyhunt.in%2Fnews%2Findia%2Fkannada%2Fetv%2Bbharat%2Bkannada-epaper-etvbhkn%2Fhomenews-updates-homenews%3Fmode%3Dpwa&sessionId=08827df0bf6b28db76ab7fa4c4739e952591f6eb&theme=light&widgetsVersion=aaf4084522e3a%3A1674595607486&width=550px

ಶತಕದ ಜೊತೆಯಾಟ: ಗಿಲ್​ ಮತ್ತು ರೋಹಿತ್​ ಶರ್ಮಾ 14ನೇ ಓವರ್​ನಲ್ಲಿ ತಂಡದ ಮೊತ್ತವನ್ನು ನೂರರ ಗಡಿ ದಾಟಿಸುವ ಮೂಲಕ ಶತಕದ ಜೊತೆಯಾಟ ಆಡಿದರು. ಇಬ್ಬರು 121 ರನ್​ನ ಜೊತೆಯಾಟವನ್ನು ಶಾಬಾದ್​ ಖಾನ್​ ಬ್ರೇಕ್​ ಮಾಡಿದರು. 56 ರನ್​ ಗಳಿಸಿ ಆಡುತ್ತಿದ್ದ ರೋಹಿತ್​ ಶರ್ಮಾ ಶಾಬಾದ್​ ಬೌಲ್​ನಲ್ಲಿ ಸಿಕ್ಸ್​ಗೆ ಕಳಿಸುವ ಭರದಲ್ಲಿ ಕ್ಯಾಚಿತ್ತು ಪೆವಿಲಿಯನ್​ಗೆ ಮರಳಿದರು. ಅವರ ಬೆನ್ನಲ್ಲೇ ಯುವ ಆಟಗಾರ ಶುಭಮನ್​ ಗಿಲ್​ 58 ರನ್​​ ಗಳಿಸಿ ವಿಕೆಟ್​ ಒಪ್ಪಿಸಿದರು.

ಭಾರತ ಮಳೆ ಆರಂಭಕ್ಕೂ ಮುನ್ನ ಎರಡು ವಿಕೆಟ್​ ನಷ್ಟಕ್ಕೆ 147 ರನ್​ ಗಳಿಸಿದೆ. ವಿರಾಟ್​ 8 ಮತ್ತು ಕೆಎಲ್​ ರಾಹುಲ್​ 17 ರನ್​ ಗಳಿಸಿ ಕ್ರೀಸ್​ನಲ್ಲಿದ್ದಾರೆ. ಪಾಕಿಸ್ತಾನದ ಶಾಬಾದ್ ಖಾನ್​ ಮತ್ತು ಶಾಹೀನ್​ ಅಫ್ರಿದಿ ತಲಾ ಒಂದು ವಿಕೆಟ್​ ಪಡೆಯುವಲ್ಲಿ ಯಶಸ್ವಿ ಆಗಿದ್ದಾರೆ.

ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshkನಮ್ಮ Facebook page: https://www.facebook.com/samagrasudii

Source: https://m.dailyhunt.in/news/india/kannada/etvbhar9348944527258-epaper-etvbhkn/paak+bhaarata+supar+for+pandyakku+kaadidha+varuna+misalu+dinakke+myaach+mundudike-newsid-n536481876?listname=newspaperLanding&topic=sports&index=1&topicIndex=4&mode=pwa&action=click

Leave a Reply

Your email address will not be published. Required fields are marked *