ಕೇವಲ 19 ರನ್ ಟಾರ್ಗೆಟ್ ನೀಡಿ ಮುಗ್ಗರಿಸಿದ ಭಾರತ,ಕಣ್ಣು ಕೆಂಪಾಗಿಸಿದ ಪಿಂಕ್ ಬಾಲ್ ಟೆಸ್ಟ್ ಫಲಿತಾಂಶ!

ಆಡಿಲೇಡ್(ಡಿ.8) ಆಸ್ಟ್ರೇಲಿಯಾ ಪ್ರವಾಸದಲ್ಲಿ ಮೊದಲ ಪಂದ್ಯ ಗೆದ್ದು ಬೀಗಿದ ಟೀಂ ಇಂಡಿಯಾ ಇದೀಗ ಎರಡನೇ ಪಂದ್ಯದಲ್ಲಿ ಮುಗ್ಗರಿಸಿದೆ. ಆಸ್ಟ್ರೇಲಿಯಾ ಬೌಲಿಂಗ್ ದಾಳಿಯಲ್ಲಿ ಮುಗ್ಗರಿಸಿದ ಟೀಂ ಇಂಡಿಯಾ ಕೇವಲ 19 ರನ್ ಟಾರ್ಗೆಟ್ ನೀಡಿತ್ತು. ಆಸ್ಟ್ರೇಲಿಯಾ ತನ್ನ 2ನೇ ಇನ್ನಿಂಗ್ಸ್‌ನಲ್ಲಿ ಈ ಸುಲಭ ಮೊತ್ತವನ್ನು ಯಾವುದೇ ವಿಕೆಟ್ ನಷ್ಟವಿಲ್ಲದೆ ಗುರಿ ಸಾಧಿಸಿತು. ಈ ಮೂಲಕ 5 ಪಂದ್ಯಗಳ ಟೆಸ್ಟ್ ಪಂದ್ಯದಲ್ಲಿ ಇದೀಗ 1-1 ಸಮಬಲಗೊಂಡಿದೆ.

ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇದೀಗ ಮುಗ್ಗರಿಸಿದೆ. ಮೂರೇ ದಿನಕ್ಕೆ ಪಿಂಕ್ ಬಾಲ್ ಟೆಸ್ಟ್ ಪಂದ್ಯ ಅಂತ್ಯಗೊಂಡಿದೆ. ಟೀಂ ಇಂಡಿಯಾ ಬ್ಯಾಟಿಂಗ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಕಾರಣ ದ್ವಿತೀಯ ಇನ್ನಿಂಗ್ಸ್‌ನಲ್ಲೂ ಟೀಂ ಇಂಡಿಯಾ ಚೇತರಿಸಿಕೊಳ್ಳಲಿಲ್ಲ. ಟಾಸ್ ಗೆದ್ದ ಅಡ್ವಾಂಟೇಟ್ ಭಾರತಕ್ಕಿತ್ತು. ಆದರೆ ಸ್ಕೋರ್ ಮಾತ್ರ ಟೀಂ ಇಂಡಿಯಾ ಪರವಾಗಿರಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ 180 ರನ್‌ಗೆ ಆಲೌಟ್ ಆಗಿದ್ದರೆ, 2ನೇ ಇನ್ನಿಂಗ್ಸ್‌ನಲ್ಲಿ 175 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಕೇವಲ 18 ರನ್‌ಗಳ ಮುನ್ನಡೆ ಪಡೆದುಕೊಂಡಿತ್ತು.  19 ರನ್ ಸುಲಭ ಟಾರ್ಗೆಟ್ ಚೇಸ್ ಮಾಡಿದ ಆಸ್ಟ್ರೇಲಿಯಾ 3.2 ಓವರ್‌ಗಳಲ್ಲೇ ಪಂದ್ಯ ಮುಗಿಸಿತು.

ದ್ವಿತೀಯ ಇನ್ನಿಂಗ್ಸ್‌ನಲ್ಲೂ ಭಾರತದ ಮಾನ ಕಾಪಾಡಿದ್ದು ನಿತೀಶ್ ರೆಡ್ಡಿ. 2ನೇ ಇನ್ನಿಂಗ್ಸ್‌ನಲ್ಲಿ ನಿತೀಶ್ ರೆಡ್ಡಿ 42 ರನ್ ಸಿಡಿಸಿದರು. ಇತರರಿಂದ ನಿರೀಕ್ಷಿತ ರನ್ ಹರಿದು ಬರಲಿಲ್ಲ. ವಿಕೆಟ್ ಪತನದ ನಡುವೆ ನಿತೀಶ್ ರೆಡ್ಡಿ 6 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 42 ರನ್ ಸಿಡಿಸಿ ಔಟಾದರು. ನಿಕೀಶ್ ರೆಡ್ಡಿ ಇನ್ನಿಂಗ್ಸ್‌ನಲ್ಲಿ ಭಾರತ ಮುನ್ನಡೆ ಸಾಧಿಸಿತು. ಆದರೆ ಉತ್ತಮ ಟಾರ್ಗೆಟ್ ನೀಡಲು ಸಾಧ್ಯವಾಗಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲೂ ನಿತೀಶ್ ರೆಡ್ಡಿ 42 ರನ್ ಸಿಡಿಸಿದ್ದರು. ಎರಡೂ ಇನ್ನಿಂಗ್ಸ್‌ನಲ್ಲಿ ಭಾರತದ ಪರ ಗರಿಷ್ಠ ರನ್ ಸಿಡಿಸಿದ ಏಕೈಕ ಆಟದಾರ ನಿತೀಶ್ ರೆಡ್ಡಿ. 

2ನೇ ಇನ್ನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್ 24 ರನ್, ಶುಭಮನ್ ಗಿಲ್ 28 ರನ್, ರಿಷಬ್ ಪಂತ್ 28 ರನ್ ಸಿಡಿಸಿದ್ದರು. ಇನ್ನು ಕೊಹ್ಲಿ 11, ನಾಯಕ ರೋಹಿತ್ ಶರ್ಮಾ 6, ಕೆಎಲ್ ರಾಹುಲ್ 7 ರನ್ ಸಿಡಿಸಿ ನಿರಾಸೆ ಅನಭವಿಸಿದರು.

ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಸೋಲಿನಿಂದ ಭಾರತ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟೂರ್ನಿ ಅಂಕ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಕುಸಿತಿದೆ. ಆರಂಭಿಕ 2 ತಂಡಗಳು ಮಾತ್ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟೂರ್ನಿ ಫೈನಲ್ ಪಂದ್ಯ ಆಡಲು ಅರ್ಹತೆ ಪಡೆಯುತ್ತದೆ. ಆದರೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಇನ್ನು 3 ಟಸ್ಟ್ ಪಂದ್ಯಗಳು ಭಾಕಿ ಇದೆ. ಈ ಪಂದ್ಯದಲ್ಲಿ ದಿಟ್ಟ ಹೋರಾಟದ ಮೂಲಕ ಗೆಲವು ಸಾಧಿಸಿದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟೂರ್ನಿ ಫೈನಲ್ ಪಂದ್ಯಕ್ಕೆ ಅವಕಾಶ ಸಿಗಲಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟೂರ್ನಿ ಅಂಕ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿದ್ದ ಟೀಂ ಇಂಡಿಯಾ ಪಿಂಕ್ ಬಾಲ್ ಟೆಸ್ಟ್ ಸೋಲಿನಿಂದ 3ನೇ ಸ್ಥಾನಕ್ಕೆ ಕುಸಿದರೆ, 3ನೇ ಸ್ಥಾನದಲ್ಲಿದ್ದ ಸೌತ್ ಆಫ್ರಿಕಾ ಇದೀಗ 2ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. 

ಭಾರತ ಆಸ್ಟ್ರೇಲಿಯಾ ಇನ್ನುಳಿದ 3 ಪಂದ್ಯದ ವೇಳಾಪಟ್ಟಿ

3ನೇ ಟೆಸ್ಟ್ ಪಂದ್ಯ, ಡಿ.14 ರಿಂದ 18 (ಬ್ರಿಸ್ಬೇನ್)
4ನೇ ಟೆಸ್ಟ್ ಪಂದ್ಯ, ಡಿ.26 ರಿಂದ 30 (ಮೆಲ್ಬೊರ್ನ್)
5ನೇ ಟೆಸ್ಟ್ ಪಂದ್ಯ. ಜ.3 ರಿಂದ 7 (ಸಿಡ್ನಿ)

Source : https://kannada.asianetnews.com/cricket-sports/australia-thrash-team-india-with-10-wickets-victory-pink-ball-test-adelaide-ckm-so5vju

Leave a Reply

Your email address will not be published. Required fields are marked *