IPL 2023: RCB ಬಳಗದಲ್ಲಿದ್ದ ಆಟಗಾರ: ಇದೀಗ ಮುಂಬೈ ಇಂಡಿಯನ್ಸ್​ ತಂಡದ ಸ್ಟಾರ್ ಬೌಲರ್

IPL 2023: ಐಪಿಎಲ್​ನ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿ ಮುಂಬೈ ಇಂಡಿಯನ್ಸ್ 2ನೇ ಕ್ವಾಲಿಫೈಯರ್​ಗೆ ಪ್ರವೇಶಿಸಿದೆ. ಈ ಭರ್ಜರಿ ಗೆಲುವಿನ ರೂವಾರಿ ಆಕಾಶ್ ಮಧ್ವಾಲ್.ಈ ಪಂದ್ಯದಲ್ಲಿ 3.3 ಓವರ್ ಬೌಲಿಂಗ್ ಮಾಡಿದ್ದ ಆಕಾಶ್ ಕೇವಲ 5 ರನ್ ನೀಡಿ 5 ವಿಕೆಟ್ ಕಬಳಿಸಿದ್ದರು. ಪರಿಣಾಮ ಲಕ್ನೋ ಸೂಪರ್ ಜೈಂಟ್ಸ್ ತಂಡವು 101 ರನ್​ಗಳಿಗೆ ಆಲೌಟ್ ಆಗಿ 81 ರನ್​ಗಳಿಂದ ಸೋಲೊಪ್ಪಿಕೊಂಡಿತು.ವಿಶೇಷ ಎಂದರೆ ಇಂತಹದೊಂದು ಅಮೋಘ ಪ್ರದರ್ಶನ ನೀಡಿದ ಆಕಾಶ್ ಮಧ್ವಾಲ್ ಈ ಹಿಂದೆ ಆರ್​ಸಿಬಿ ಬಳಗದಲ್ಲಿ ಕಾಣಿಸಿಕೊಂಡಿದ್ದರು. ಅಂದರೆ 2019 ರಲ್ಲಿ ಮಧ್ವಾಲ್ ಆರ್​ಸಿಬಿ ತಂಡದ ನೆಟ್ ಬೌಲರ್ ಆಗಿದ್ದರು.ಆರ್​ಸಿಬಿ ಬಳಗದಲ್ಲಿರುವಾಗ ವಿರಾಟ್ ಕೊಹ್ಲಿ, ಎಬಿಡಿ ಸೇರಿದಂತೆ ಪ್ರಮುಖರಿಗೆ ಬೌಲಿಂಗ್ ಮಾಡಿ ಸೈ ಎನಿಸಿಕೊಂಡಿದ್ದ ಆಕಾಶ್ ಅವರನ್ನು ಮುಂಬೈ ಇಂಡಿಯನ್ಸ್ 2022 ರಲ್ಲಿ ಬದಲಿ ಆಟಗಾರನಾಗಿ ಆಯ್ಕೆ ಮಾಡಿದ್ದರು.2022 ರ ಐಪಿಎಲ್​ನ ವೇಳೆ ಗಾಯಗೊಂಡಿದ್ದ ಸೂರ್ಯಕುಮಾರ್ ಯಾದವ್ ಬದಲಿಗೆ ಆಕಾಶ್ ಮಧ್ವಾಲ್ ಅವರನ್ನು ಮುಂಬೈ ಇಂಡಿಯನ್ಸ್ ಆಯ್ಕೆ ಮಾಡಿತ್ತು. ಆದರೆ ಆ ಸೀಸನ್​ನಲ್ಲಿ ಯಾವುದೇ ಪಂದ್ಯವಾಡಲು ಚಾನ್ಸ್ ಸಿಕ್ಕಿರಲಿಲ್ಲ.ಆದರೆ ಅದಾಗಲೇ ಬಲಗೈ ವೇಗಿ ಮೇಲೆ ಕಣ್ಣಿಟ್ಟಿದ್ದ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ, ಐಪಿಎಲ್ 2023 ರ ಹರಾಜಿನಲ್ಲಿ ಕೇವಲ 20 ಲಕ್ಷ ರೂ. ಮೂಲಬೆಲೆಯೊಂದಿಗೆ ಆಕಾಶ್ ಮಧ್ವಾಲ್ ಅವರನ್ನು ಖರೀದಿಸಿತು. ಅಲ್ಲದೆ ಈ ಬಾರಿ ಜೋಫ್ರಾ ಆರ್ಚರ್ ಕೆಲ ಪಂದ್ಯಗಳಿಂದ ಹೊರಗುಳಿದಿದ್ದ ಕಾರಣ ರೋಹಿತ್ ಶರ್ಮಾ ಮಧ್ವಾಲ್ ಅವರನ್ನು ಕಣಕ್ಕಿಳಿಸಿದ್ದರು.ಅಂದರಂತೆ ಈ ಬಾರಿ ಒಟ್ಟು 7 ಪಂದ್ಯಗಳಲ್ಲಿ ಬೌಲಿಂಗ್ ಮಾಡಿರುವ ಆಕಾಶ್ ಒಟ್ಟು 129 ಎಸೆತಗಳನ್ನು ಎಸೆದಿದ್ದಾರೆ. ಈ ವೇಳೆ ನೀಡಿರುವುದು ಕೇವಲ 167 ರನ್ ಮಾತ್ರ. ಅಲ್ಲದೆ ಒಟ್ಟು 13 ವಿಕೆಟ್​ಗಳನ್ನು ಕಬಳಿಸಿ ಮಿಂಚಿದ್ದಾರೆ.
ಅಂದರೆ ಆರ್​ಸಿಬಿ ತಂಡದಲ್ಲಿ ನೆಟ್ ಬೌಲರ್​ ಆಗಿಯೇ ಕಾಲ ಕಳೆಯಬೇಕಿದ್ದ ಆಕಾಶ್ ಮಧ್ವಾಲ್ ಅವರ ಪ್ರತಿಭೆಯನ್ನು ಗುರುತಿಸಿ ಮುಂಬೈ ಇಂಡಿಯನ್ಸ್ ಇದೀಗ ಅತ್ಯುತ್ತಮ ಬೌಲರ್ ಆಗಿ ರೂಪಿಸಿದೆ. ಇದರ ಫಲವಾಗಿ ನಿರ್ಣಾಯಕವಾಗಿದ್ದ ಪಂದ್ಯದಲ್ಲಿ 5 ವಿಕೆಟ್ ಕಬಳಿಸುವ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟಿದ್ದಾರೆ.

source https://tv9kannada.com/photo-gallery/cricket-photos/who-is-akash-madhwal-a-net-bowler-for-rcb-now-mumbai-indians-player-kannada-news-zp-586708.html

Views: 0

Leave a Reply

Your email address will not be published. Required fields are marked *