Gold-Silver Price Down :ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿರುವುದೇ ಬಂಗಾರದ ಬೆಲೆ ದಿನೇ ದಿನೇ ಅಗ್ಗವಾಗುತ್ತಿರುವುದಕ್ಕೆ ಕಾರಣ ಎನ್ನಲಾಗಿದೆ.
Gold-Silver Price Down : ಚಿನ್ನ-ಬೆಳ್ಳಿ ಖರೀದಿಸುವವರಿಗೆ ಸಮಾಧಾನಕರ ಸುದ್ದಿ ಇದು. ವರಮಹಾಲಕ್ಷ್ಮೀ ಹಬ್ಬ ಕೂಡಾ ಸಮೀಪಿಸುತ್ತಿದೆ. ಹಬ್ಬದ ವೇಳೆಯಲ್ಲಿ ಬಂಗಾರದ ಬೆಲೆಯಲ್ಲಿ ಇಳಿಕೆ ಕಾಣುತ್ತಿದೆ. ಬೆಳ್ಳಿ ಕೂಡಾ ಅಗ್ಗವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿರುವುದೇ ಬಂಗಾರದ ಬೆಲೆ ದಿನೇ ದಿನೇ ಅಗ್ಗವಾಗುತ್ತಿರುವುದಕ್ಕೆ ಕಾರಣ ಎನ್ನಲಾಗಿದೆ.
ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಎಷ್ಟು ಅಗ್ಗ :
ಗುರುವಾರ 250 ರೂಪಾಯಿ ಇಳಿಕೆಯೊಂದಿಗೆ 10 ಗ್ರಾಂ ಚಿನ್ನದ ಬೆಲೆಗೆ 59,800 ರೂ. ಆಗಿದೆ. ಹಿಂದಿನ ವಹಿವಾಟಿನಲ್ಲಿ, ಚಿನ್ನದ ಬೆಲೆ 10 ಗ್ರಾಂಗೆ 60,050 ರೂ. ಆಗಿತ್ತು. ಇದಲ್ಲದೇ ಬೆಳ್ಳಿಯ ಬೆಲೆಯೂ ಪ್ರತಿ ಕೆಜಿಗೆ 300 ರೂಪಾಯಿ ಇಳಿಕೆಯಾಗಿ 73,300 ರೂಪಾಯಿಗಳಿಗೆ ತಲುಪಿದೆ.
ಜಾಗತಿಕ ಮಾರುಕಟ್ಟೆಯಲ್ಲಿಯೂ ಕುಸಿತ :
ಜಾಗತಿಕ ಮಾರುಕಟ್ಟೆಯ ಬಗ್ಗೆ ಮಾತನಾಡುವುದಾದರೆ, ಇಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ 1,919 ಡಾಲರ್ ನಷ್ಟು ಇಳಿದಿದೆ. ಬೆಳ್ಳಿ ಪ್ರತಿ ಔನ್ಸ್‌ಗೆ 22. 80 ಡಾಲರ್ ನಷ್ಟು ಕುಸಿದಿದೆ.
ಈ ರೀತಿಯಲ್ಲಿ ಬೆಲೆಯನ್ನು ಪರಿಶೀಲಿಸಿ :
ನಿಮ್ಮ ಮನೆಯಲ್ಲಿಯೇ ಕುಳಿತು ಚಿನ್ನದ ಬೆಲೆಯನ್ನು ಪರಿಶೀಲಿಸಬಹುದು. ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲರ್ಸ್ ಅಸೋಸಿಯೇಷನ್ ಪ್ರಕಾರ, ನೀವು 8955664433 ಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬೆಲೆಯನ್ನು ಪರಿಶೀಲಿಸಬಹುದು. ನೀವು ಯಾವ ಸಂಖ್ಯೆಯಿಂದ ಮಿಸ್ಡ್ ಕಾಲ್ ನೀಡುರುತ್ತಿರೋ ಅದೇ ಸಂಖ್ಯೆಗೆ ಮೆಸೇಜ್ ಕಳುಹಿಸಲಾಗುತ್ತದೆ.