ಇಳಿಕೆಯಾಗುವುದು ಅಕ್ಕಿ ಗೋಧಿ ಬೆಲೆ ! 29 ರೂ.ಗೆ ಸಿಗುವುದು ಕೆ.ಜಿ ಅಕ್ಕಿ

Wheat-Rice Price:ಏರುತ್ತಿರುವ ಗೋಧಿ ಮತ್ತು ಅಕ್ಕಿ ಬೆಲೆಯನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರವು ಅದನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ನಿರ್ಧರಿಸಿದೆ.  

Wheat-Rice Price : ದೇಶಾದ್ಯಂತ ಅಕ್ಕಿ ಮತ್ತು ಗೋಧಿ ಬೆಲೆಗಳನ್ನು ನಿಯಂತ್ರಿಸಲು ಮತ್ತು ದೇಶೀಯ ಲಭ್ಯತೆಯನ್ನು ಹೆಚ್ಚಿಸಲು ಸರ್ಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಏರುತ್ತಿರುವ ಗೋಧಿ ಮತ್ತು ಅಕ್ಕಿ ಬೆಲೆಯನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರವು ಅದನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ನಿರ್ಧರಿಸಿದೆ. ಸರ್ಕಾರವು 50 ಲಕ್ಷ ಟನ್ ಗೋಧಿ ಮತ್ತು 25 ಲಕ್ಷ ಟನ್ ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತದೆ.

ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ-ಗೋಧಿ ಮಾರಾಟ : 
ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಯೋಜನೆ (ಒಎಂಎಸ್‌ಎಸ್) ಅಡಿಯಲ್ಲಿ ಅಕ್ಕಿಯ ಬೆಲೆಯನ್ನು ಇಳಿಸಿ ಕೆ.ಜಿಗೆ 29 ರೂಪಾಯಿಯಂತೆ ಅಕ್ಕಿ ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ. ಗೋಧಿ ಆಮದು ಸುಂಕವನ್ನು ಕಡಿತಗೊಳಿಸುವ ಸಾಧ್ಯತೆಯ ಕುರಿತು, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಸರ್ಕಾರ ಹೇಳಿದೆ.

ಸರ್ಕಾರದ ನಿರ್ಧಾರದ ಹಿಂದಿನ ಕಾರಣ : 
ಅಕ್ಕಿಯ ಬೆಲೆಯಲ್ಲಿನ ಬದಲಾವಣೆಯು ಉತ್ತಮ ಫಲಿತಾಂಶವನ್ನು ತರಬಹುದು ಎನ್ನುವುದು ಸರ್ಕಾರದ ಅಭಿಪ್ರಾಯ. ಒಎಂಎಸ್‌ಎಸ್ ಮೂಲಕ 50 ಲಕ್ಷ ಟನ್ ಗೋಧಿ ಮತ್ತು 25 ಲಕ್ಷ ಟನ್ ಅಕ್ಕಿಯನ್ನು ಮುಕ್ತ ಮಾರುಕಟ್ಟೆಗೆ ತರಲು ಸರ್ಕಾರ ನಿರ್ಧರಿಸಿದೆ. ಜೂನ್ 28 ರಂದು ಘೋಷಿಸಲಾದ OMSS ಅಡಿಯಲ್ಲಿ 1.5 ಮಿಲಿಯನ್ ಟನ್ ಗೋಧಿ ಮತ್ತು 5 ಮಿಲಿಯನ್ ಟನ್ ಅಕ್ಕಿ ಮಾರಾಟಕ್ಕೆ ಹೆಚ್ಚುವರಿಯಾಗಿದೆ.

ಇದಲ್ಲದೇ ಸರ್ಕಾರವು ಅಕ್ಕಿಯ ಬೆಲೆಯನ್ನು ಕೆಜಿಗೆ 2 ರೂ.ಯಂತೆ ಇಳಿಸಿ 31 ರೂ. ಬದಲು 29 ರೂ. ನಿಗದಿ ಪಡಿಸಲಾಗಿದೆ. ಆದರೆ, OMSS ಅಡಿಯಲ್ಲಿ ವ್ಯಾಪಾರಿಗಳಿಂದ ಉತ್ತಮ ಪ್ರತಿಕ್ರಿಯೆ ಇರುವುದರಿಂದ ಗೋಧಿಯ ಮೀಸಲು ಬೆಲೆಯನ್ನು ಯಥಾಸ್ಥಿತಿಯಲ್ಲಿ ಇರಿಸಲಾಗಿದೆ

ಈ ಕ್ರಮಗಳು ಮಾರುಕಟ್ಟೆಯಲ್ಲಿ ಲಭ್ಯತೆಯನ್ನು ಸುಧಾರಿಸುವುದಲ್ಲದೆ ಬೆಲೆಗಳನ್ನು ಕಡಿಮೆ ಮಾಡಲು ಮತ್ತು ಆಹಾರ ಹಣದುಬ್ಬರವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎನ್ನುವುದು ಸರ್ಕಾರದ ಆಶಯ.    “ಮುಂದಿನ ಕೆಲವು ವಾರಗಳಲ್ಲಿ ಪ್ರತಿಕ್ರಿಯೆಯನ್ನು ಆಧರಿಸಿ, ಬದಲಾವಣೆಗಳನ್ನು ಜಾರಿಗೆ ತರುವುದಾಗಿ ಸರ್ಕಾರ ಹೇಳುತ್ತಿದೆ. ಆಹಾರ ಹಣದುಬ್ಬರವನ್ನು ನಿಯಂತ್ರಣದಲ್ಲಿಡುವುದು ಇದರ ಅಂತಿಮ ಉದ್ದೇಶವಾಗಿದೆ. 

ಗೋಧಿ ಆಮದು ಸುಂಕವನ್ನು ಕಡಿತಗೊಳಿಸುವ ಸಾಧ್ಯತೆಯ ಕುರಿತು ಕೂಡಾ ಸರ್ಕಾರ ಮಾತನಾಡಿದೆ. ಭವಿಷ್ಯದಲ್ಲಿ ಅಗತ್ಯತೆಗಳ ಆಧಾರದ ಮೇಲೆ, ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದೆ. 

Source : https://zeenews.india.com/kannada/business/rice-wheat-price-will-fall-soon-govt-to-sell-these-in-open-market-151361

Leave a Reply

Your email address will not be published. Required fields are marked *