ಸಂಸದರೊಂದಿಗೆ ಪ್ರಧಾನಿ ವೀಕ್ಷಿಸಲಿದ್ದಾರೆ ‘ಛಾವಾ’! ಸಂಸತ್‌ ಭವನದಲ್ಲೇ ಸ್ಕ್ರೀನಿಂಗ್‌ಗೆ ಸಿದ್ಧತೆ!

Chhaava: ದೇಶದಾದ್ಯಂತ ಗಲ್ಲಾ ಪೆಟ್ಟಿಗೆಯಲ್ಲಿ ಭಾರೀ ಸದ್ದು ಮಾಡುತ್ತಿರುವ, ಮರಾಠಾ ದೊರೆ ಛತ್ರಪತಿ ಸಂಭಾಜಿ ಮಹಾರಾಜ್ ಅವರ ಕುರಿತಾದ ಹಿಂದಿ ಚಲನಚಿತ್ರವಾದ ಛಾವಾ ಚಿತ್ರವನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಂಸದರು ಗುರುವಾರ ವೀಕ್ಷಿಸಲಿದ್ದಾರೆ.

ನವದೆಹಲಿ: ದೇಶದಾದ್ಯಂತ ಗಲ್ಲಾ ಪೆಟ್ಟಿಗೆಯಲ್ಲಿ ಭಾರೀ ಸದ್ದು ಮಾಡುತ್ತಿರುವ, ಮರಾಠಾ ದೊರೆ ಛತ್ರಪತಿ ಸಂಭಾಜಿ ಮಹಾರಾಜ್ (Chhatrapati Sambhaji Maharaj) ಅವರ ಕುರಿತಾದ ಹಿಂದಿ ಚಲನಚಿತ್ರವಾದ ಛಾವಾ (Chhaava) ಚಿತ್ರವನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಸೇರಿದಂತೆ ಸಂಸದರು ಗುರುವಾರ ಬಾಲಯೋಗಿ ಸಭಾಂಗಣದಲ್ಲಿರುವ ಸಂಸತ್ತಿನ ಗ್ರಂಥಾಲಯ ಕಟ್ಟಡದಲ್ಲಿ ವೀಕ್ಷಿಸಲಿದ್ದಾರೆ ಎನ್ನಲಾಗಿದೆ.


ನಟ ವಿಕ್ಕಿ ಕೌಶಲ್, ನಟಿ ರಶ್ಮಿಕಾ ಮಂದಣ್ಣ ಅವರು ನಟಿಸಿರುವ ಛಾವ ಚಿತ್ರದ ಕುರಿತು, ಪ್ರಧಾನಿ ಮೋದಿ ಅವರು ಇತ್ತಿಚೆಗೆ ಪ್ರಶಂಸೆ ವ್ಯಕ್ತಪಡಿಸಿದರು. ಇದಾದ ಒಂದು ತಿಂಗಳ ನಂತರ ಪ್ರಧಾನಿ ಮೋದಿ ಅವರು ಸಂಸದರೊಂದಿಗೆ ಸೇರಿ ವಿಕ್ಷಿಸಲಿದ್ದಾರೆ. ಈ ವೇಳೆ ಕೇಂದ್ರ ಸಚಿವರಾದ ಅಮಿತ್​ ಶಾ, ರಾಜನಾಥ ಸಿಂಗ್​, ನಿರ್ಮಲಾ ಸೀತಾರಾಮನ್, ಡಾ. ಜೈಶಂಕರ್ ಮತ್ತು ಛಾವ ಚಿತ್ರ ತಂಡ ಉಪಸ್ಥಿತರಿರಲಿದ್ದಾರೆ.

ಇನ್ನೂ ಇದಕ್ಕೂ ಹುನ್ನ ಫೆಬ್ರವರಿ 21ರಂದು ರಾಷ್ಟ್ರ ರಾಜಧಾನಿಯಲ್ಲಿ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ ಅವರು ಈ ಚಿತ್ರವು ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ನಿರ್ಮಾಣವಾಗಿರುವುದನ್ನು ಅವರ ಶ್ಲಾಘಿಸಿದ್ದಾರೆ ಛತ್ರಪತಿ ಸಾಂಭಾಜಿ ಮಹಾರಾಜರಂತಹ ಐತಿಹಾಸಿಕ ವ್ಯಕ್ತಿಗಳ ಜೀವನವನ್ನು ಜನರಿಗೆ ತಿಳಿಸುವ ಈ ಪ್ರಯತ್ನವು ಯುವ ಜನಾಂಗಕ್ಕೆ ಪ್ರೇರಣೆಯಾಗಬಹುದು ಎಂದು ಹೇಳಿದ್ದರು .

https://twitter.com/i/status/1892922731857109258

ಇದೇ ಸಂದರ್ಭದಲ್ಲಿ, ಮಾರ್ಚ್ 17, 2025ರಂದು ಭೋಪಾಲ್‌ನಲ್ಲಿ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಸಚಿವರು ಮತ್ತು ಶಾಸಕರೊಂದಿಗೆ “ಛಾವಾ” ಚಿತ್ರವನ್ನು ವೀಕ್ಷಿಸಿದ್ದಾರೆ.

ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಛಾವಾ’ ಚಿತ್ರ ಫೆಬ್ರವರಿ 14 ರಂದು ಬಿಡುಗಡೆಯಾಯಿತು. ಪ್ರೇಕ್ಷಕರಿಂದ ಅಪಾರ ಮೆಚ್ಚಿಗೆ ವ್ಯಕ್ತವಾಗಿದ್ದು, ವಿಕ್ಕಿ ಕೌಶಲ್ ಅವರ ಬಿಗ್ ಹಿಟ್ ಸಿನಿಮಾ ಆಗಿದೆ. ಛತ್ರಪತಿ ಶಿವಾಜಿ ಮಹಾರಾಜರ ಉತ್ತರಾಧಿಕಾರಿ ಶಂಭಾಜಿ ಮಹಾರಾಜರ ಜೀವನ ಕಥೆಯನ್ನು ಆಧರಿಸಿದ ಈ ಚಿತ್ರದಲ್ಲಿ ಮುಖ್ಯವಾಗಿ ಶಂಭಾಜಿ ಮಹಾರಾಜ ಮತ್ತು ಔರಂಗಜೇಬನ ನಡುವಿನ ಭೀಕರ ಯುದ್ಧವನ್ನು ತೋರಿಸಲಾಗಿದೆ.

ಲಕ್ಷ್ಮಣ್ ಉಟೇಕರ್ ನಿರ್ದೇಶನದ ಈ ಚಿತ್ರದಲ್ಲಿ ವಿಕ್ಕಿ ಕೌಶಲ್, ರಶ್ಮಿಕಾ ಮತ್ತು ಅಕ್ಷಯ್ ಖನ್ನಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅವರ ಅಭಿನಯ ಪ್ರೇಕ್ಷಕರನ್ನ ಚಿತ್ರಮಂದಿರಕ್ಕೆ ಸೆಳೆದಿದೆ. ಜೊತೆಗೆ ಬಹಳ ದಿನಗಳ ನಂತರ ಬಾಲಿವುಡ್ ನಿಂದ ಒಳ್ಳೆಯ ಪಿರಿಯಾಡಿಕ್ ಚಿತ್ರ ಬಂದಿದೆ ಎಂದು ಪ್ರೇಕ್ಷಕರು ಮಾತಾಡಿಕೊಂಡಿದ್ರು.

ಈ ನಡುವೆಯೇ ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ನಟನೆಯ ಛಾವಾ ಚಿತ್ರದ OTT ಬಿಡುಗಡೆಗಾಗಿ OTT ಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. ಆದರಂತೆ ಮೂಲಗಳ ಪ್ರಕಾರ ಈ ಚಿತ್ರದ ಹಕ್ಕುಗಳನ್ನು ನೆಟ್ ಫ್ಲಿಕ್ಸ್ ಪಡೆದುಕೊಂಡಿದೆ ಎನ್ನಲಾಗಿದ್ದು, ವರದಿಗಳ ಪ್ರಕಾರ ಈ ಚಿತ್ರ ಏಪ್ರಿಲ್ 14 ರಂದು ಸಿನಿಮಾ ಸ್ಟ್ರೀಮ್ ಆಗಲಿದೆ ಎನ್ನಲಾಗ್ತಿದೆ.

Source : News 18 Kannada

 ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *