Producer MN Kumar On Sudeep: ಸುದೀಪ್ ಕೋರ್ಟ್ ಮೆಟ್ಟಿಲೇರುತ್ತಿದ್ದಂತೆ ನಿರ್ಮಾಪಕ ಕುಮಾರ್ ವರಸೆ ಬದಲಿಸಿದ್ದಾರೆ. ಅಂದು ಆಡಿದ ಮಾತಿಗೂ ಈಗ ಕೊಟ್ಟ ಹೇಳಿಕೆಗೂ ತಾಳ ಮೇಳವೇ ಇಲ್ಲದಂತಿದೆ.

Kiccha Sudeep: ನಟ ಕಿಚ್ಚ ಸುದೀಪ್ ವಿರುದ್ಧ ಆರೋಪಗಳ ಸುರಮಳೆಗೈದಿದ್ದ ನಿರ್ಮಾಪಕ ಕುಮಾರ್ ಈಗ ಉಲ್ಟಾ ಹೊಡೆದಂತಿದೆ. ಸುದೀಪ್ ಕೋರ್ಟ್ ಮೆಟ್ಟಿಲೇರುತ್ತಿದ್ದಂತೆ ನಿರ್ಮಾಪಕ ಕುಮಾರ್ ವರಸೆ ಬದಲಿಸಿದ್ದಾರೆ. ಅಂದು ಆಡಿದ ಮಾತಿಗೂ ಈಗ ಕೊಟ್ಟ ಹೇಳಿಕೆಗೂ ತಾಳ ಮೇಳವೇ ಇಲ್ಲದಂತಿದೆ. ನಿನ್ನೆ ಸುದೀಪ್ ತಮ್ಮ ಮೇಲೆ ಅಡ್ವಾನ್ಸ್ ವಿಚಾರವಾಗಿ ಹೊರಿಸಿದ ಆರೋಪಗಳ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಈ ಬೆನ್ನಲ್ಲೇ ಪ್ರೊಡ್ಯೂಸರ್ ಕುಮಾರ್ ಮಾತು ಕೂಡ ಚೇಂಜ್ ಆಗಿದೆ.
ನಟ ಸುದೀಪ್ ಮಾನನಷ್ಟ ಮೊಕದ್ದಮೆ ದಾಖಲಿಸುತ್ತಿದ್ದಂತೆ ನಿರ್ಮಾಪಕ ಕುಮಾರ್ ಮಾತೇ ಬದಲಾಗಿದೆ. ಫಿಲ್ಮ್ ಚೇಂಬರ್‌ನಲ್ಲಿ ಈ ವಿಚಾರವಾಗಿ ಮಾಧ್ಯಮಗಳ ಜೊತೆ ಮಾತನಾಡಿದ ನಿರ್ಮಾಪಕ ಕುಮಾರ್, “ಸುದೀಪ್ ವಿರುದ್ಧ ನಾನು ವಾಣಿಜ್ಯ ಮಂಡಳಿಗೆ ಯಾವ ದೂರನ್ನು ನೀಡಿಲ್ಲ. ನಾನು ಈ ಬಗ್ಗೆ ಮನವಿ ಪತ್ರ ಮಾತ್ರ ಕೊಟ್ಟಿದ್ದೇನೆ” ಎಂದಿದ್ದಾರೆ.
“ಸಮಸ್ಯೆ ಬಗೆಹರಿಸಿಕೊಳ್ಳಲು ಸುದೀಪ್ ಅವರನ್ನ ಹುಡುಕಿಕೊಂಡು ಹೋಗಿದ್ದೆ. ಆದರೆ ಇಲ್ಲವೆಂದು ಹೇಳಲು ಅವರು ತಿಳಿಸಿದ್ದರು. ಸುದೀಪ್ ಅವರ ಮ್ಯಾನೇಜರ್ ನನಗೆ ಸರಿಯಾಗಿ ಸ್ಪಂದಿಸಲಿಲ್ಲ. ಅದರಿಂದ ಬೇಸತ್ತು ನಾನು ವಾಣಿಜ್ಯ ಮಂಡಳಿಗೆ ಮನವಿ ಪತ್ರ ಕೊಟ್ಟೆ” ಎಂದು ನಿರ್ಮಾಪಕ ಕುಮಾರ್ ಹೇಳಿದ್ದಾರೆ.
“ನಾನು 40 ವರ್ಷಗಳಿಂದ ಚಿತ್ರರಂಗದಲ್ಲಿರುವೆ. ಸಾಕಷ್ಟು ಅನುಭವ ನನಗಿದೆ. ಕಲಾವಿದರಿಗೆ ಚಲನಚಿತ್ರ ವಾಣಿಜ್ಯ ಮಂಡಳಿ ದೇವಸ್ಥಾನದಂತೆ. ಇಲ್ಲಿಗೆ ಬಂದು ಮಾತನಾಡಿ ಎಂದು ಸುದೀಪ್ ಅವರ ಬಳಿ ಕೇಳಿದ್ದೆವು. ಮನವಿ ಮಾಡಿದ್ದೆವು” ಎಂದಿದ್ದಾರೆ.
“ಸುದೀಪ್ ಅವರ ಬಳಿ ಸಹಾಯಧನ ಕೇಳಿಲ್ಲ. ನಿರ್ಮಾಪಕರೆಂದರೆ ಹತ್ತಾರು ಜನರಿಗೆ ಕೆಲಸ ಕೊಡುವವರು. ಕೋರ್ಟ್ ನೋಟಿಸ್ ಬಂದರೆ ಫಿಲ್ಮ್ ಚೇಂಬರ್‌ಗೆ ತಂದು ಕೊಡುವೆ. ವಾಣಿಜ್ಯ ಮಂಡಳಿ ಅಧ್ಯಕ್ಷರು, ಪದಾಧಿಕಾರಿಗಳು ಹೇಳಿದ ಹಾಗೆ ಕೇಳುತ್ತೇನೆ” ಎಂದ ಹೇಳಿದ್ದಾರೆ.