
Political News: ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟಿಸಿ ಇತ್ತೀಚಿಗೆ ಬಿಜೆಪಿಯ ಕೇಂದ್ರ ಶಿಸ್ತು ಸಮಿತಿ ಆದೇಶ ಹೊರಡಿಸಿತ್ತು. ಈಗ ಈ ಒಂದು ಉಚ್ಚಾಟನೆ ಆದೇಶ ಹಿಂಪಡೆಯುವ ಸಲುವಾಗಿ ನಿನ್ನೆ ಬೆಂಗಳೂರಿನಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟೀಮ್ ಮಹತ್ವದ ಸಭೆ ನಡೆಸಿತ್ತು.

ಹೌದು ಉಚ್ಚಾಟನೆ ಆದೇಶ ವಾಪಸ್ ಪಡೆಯುವಂತೆ ಹೈಕಮಾಂಡ್ ಬಳಿ ರೆಬೆಲ್ ನಾಯಕರ ಮನವಿ ಮಾಡಲು ನಿರ್ಧಾರ ಕೈಗೊಂಡಿದ್ದು, ಮೂರು ರೀತಿಯ ಚಿಂತನೆ ನಡೆಸಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ಹಿಂಪಡೆಯಲು ಮೊದಲನೆಯದಾಗಿ ಬಸನಗೌಡ ಯತ್ನಾಳ್ ಅವರಿಂದಲೇ ಮನವಿ ಪತ್ರ ಬರೆಸುವುದು, ಎರಡನೆಯದಾಗಿ ನಿಯೋಗದಲ್ಲಿ ತೆರಳಿ ವರಿಷ್ಠರನ್ನು ಭೇಟಿ ಮಾಡುವುದು ಮತ್ತು ಮೂರನೇಯದಾಗಿ ಹೈಕಮಾಂಡ್ಗೆ ಸಮೀಪ ಇರುವ ನಾಯಕರಿಂದ ಒತ್ತಡ ಹಾಕಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ.

ಆದೇಶ ವಾಪಸ್ ಪಡೆಯುವ ಸಂಬಂಧ ವರಿಷ್ಠರು ಚರ್ಚೆಗೆ ಮನಸ್ಸು ಮಾಡಿದರೆ ಅದಕ್ಕೂ ರೆಡಿ ಎಂಬ ಸಂದೇಶವನ್ನು ಯತ್ನಾಳ್ ಟೀಮ್ ರವಾನಿಸಿದೆ. ಈಗಾಗಲೇ ನಾವು ಯಾವುದೇ ಬೇರೆ ಪಕ್ಷಕ್ಕೆ ಹೋಗುವ ಅಥವಾ ಹೊಸಪಕ್ಷ ಕಟ್ಟುವ ಉದ್ದೇಶ ಇಟ್ಟು ಕೊಂಡಿಲ್ಲ ಎಂಬ ಸಂದೇಶವನ್ನು ವರಿಷ್ಠರಿಗೆ ರವಾನಿಸಿದ್ದಾರೆ. ಹಾಗಾಗಿ ಶಾಸಕ ಪ್ರಸನ್ನ ಗೌಡ ಪಾಟೀಲ್ ಯತ್ನಾಳ ಉಚ್ಚಾಟನೆ ಆದೇಶವನ್ನು ವಾಪಸ್ ಪಡೆಯುವ ಕುರಿತು ಶೀಘ್ರದಲ್ಲಿ ವರಿಷ್ಠರಿಗೆ ಮನವಿ ಸಲ್ಲಿಸುವ ಸೂಚನೆ ರೆಬೆಲ್ಸ್ ನಾಯಕರು ನೀಡಿದ್ದಾರೆ.

Source: Kannada News
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1