ಅನುಪಮ ಶಾಲೆ ಹಾಗೂ ಅರಣ್ಯ ಇಲಾಖೆ ವತಿಯಿಂದ ಜೋಗಿಮಟ್ಟಿಯಲ್ಲಿ ಸಸಿ ನೆಡಲಾಯಿತು.

ನಗರದ ಅನುಪಮ ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್ ಮತ್ತು ಅರಣ್ಯ ಇಲಾಖೆ, ಚಿತ್ರದುರ್ಗ ಸಂಯುಕ್ತಾಶ್ರಯದಲ್ಲಿ ಶಾಲೆಯ ವಿದ್ಯಾರ್ಥಿಗಳಿಂದ ಆಡು ಮಲ್ಲೇಶ್ವರ ವನದಲ್ಲಿ ನೂರಕ್ಕಿಂತ ಹೆಚ್ಚು ಸಸಿಗಳನ್ನು ನೆಡಲಾಯಿತು, ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿಗಳಾದ ವಸಂತಕುಮಾರ್, ಖ್ಯಾತ ಚಲನಚಿತ್ರ ನಟರಾದ ದೊಡ್ಡಣ್ಣ , ಖ್ಯಾತ ಉದ್ಯಮಿಗಳಾದ ಸುರೇಶ್ ಬಾಬು ಮತ್ತು ಗೋಪಿಕೃಷ್ಣ ಭಾಗವಹಿಸಿದ್ದರು,
ಚಲನಚಿತ್ರ ನಟರಾದ ದೊಡ್ಡಣ್ಣನವರು ಮಾತನಾಡಿ, ಕಾಡು ಒಳ್ಳೋಳ್ಳೆಯ ಸುವಾಸನೆ ಕೊಟ್ಟಿದೆ ಒಳ್ಳೋಳ್ಳೆಯ ಹಣ್ಣು ಕೊಟ್ಟಿದೆ, ಊಟ ಕೊಟ್ಟಿದೆ, ನಾನೇನು ಕೊಟ್ಟಿದ್ದೇನೆಂದು ನೀವು ಕನ್ನಡಿಯಲ್ಲಿ ಪ್ರಶ್ನೆ ಹಾಕಿಕೊಂಡರೆ ಅದಕ್ಕೆ ಉತ್ತರ ವಿಲ್ಲ ಅದಕ್ಕಾಗಿ ನೀವೇನೂ ಮಾಡಬೇಕಿಲ್ಲ ಒಂದು ಗಿಡ ನೆಡಿ ಎನ್ನುವುದೇ ನನ್ನ ಕಳಕಳಿಯ ಮನವಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷರಾದ ಎಸ್. ಭಾಸ್ಕರ್, ಕಾರ್ಯದರ್ಶಿಗಳಾದ ಎಸ್.ಬಿ. ರಕ್ಷಣ್, ಪ್ರಾಚಾರ್ಯರಾದ ಸಿ.ಡಿ. ಸಂಪತ್ ಕುಮಾರ್, ಮುಖ್ಯೋಪಾಧ್ಯಾಯರಾದ ವೆಂಕಟೇಶ್, ಹೆಡ್ ಕೋ ಆರ್ಡಿನೇಟರ್ ಬಸವರಾಜ್.ಕೆ ಮತ್ತು ಶಾಲೆಯ ಶಿಕ್ಷಕ / ಶಿಕ್ಷಕಿಯರು, ಶಿಕ್ಷಕೇತರ ವರ್ಗದವರು
ಭಾಗವಹಿಸಿದ್ದರು.

Leave a Reply

Your email address will not be published. Required fields are marked *