ಶೇಕ್ ಆದ ಟೆಕ್ ಜಗತ್ತು: ಯಾರೂ ಊಹಿಸದ ರೀತಿಯಲ್ಲಿ ಬರುತ್ತಿದೆ ಟೆಸ್ಲಾ ಸ್ಮಾರ್ಟ್​ ಟೆಸ್ಲಾ ಫೋನ್.

ಟೆಸ್ಲಾ ಫೋನ್ ತಂತ್ರಜ್ಞಾನ ಲೋಕದಲ್ಲಿ ಸಂಚಲನ ಮೂಡಿಸುತ್ತಿದೆ. ಎಲೋನ್ ಮಸ್ಕ್ ಅವರ ಟೆಸ್ಲಾ ಕಂಪನಿಯು ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸುತ್ತದೆ. ಇದರ ಬೆನ್ನಲ್ಲೇ ಇದೀಗ ಫೋನ್ ಬಗ್ಗೆ ಹೆಚ್ಚಿನ ಆಸಕ್ತಿ ಇದೆ. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಅವರ ಹೊಸ ಟೆಸ್ಲಾ ಸ್ಮಾರ್ಟ್‌ಫೋನ್‌ನ ಸುದ್ದಿ ಎಲ್ಲ ರಂಗದಲ್ಲಿ ಸದ್ದು ಮಾಡುತ್ತಿದೆ.

ಎಲೋನ್ ಮಸ್ಕ್ ಅವರ ಟೆಸ್ಲಾ ಕಂಪನಿ ಬಿಡುಗಡೆ ಮಾಡುವ ಫೋನ್‌ಗೆ ಮಾಡೆಲ್ ಪೈ ಎಂದು ಹೆಸರಿಡಲಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಮತ್ತು ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಆಗಿ ಹರಿದಾಡುತ್ತಿವೆ. ಆದರೆ ಕಂಪನಿಯಿಂದ ಈ ಬಗ್ಗೆ ಯಾವುದೇ ಅನಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಇತ್ತೀಚೆಗೆ, ಯೂಟ್ಯೂಬ್, ಎಕ್ಸ್, ಇನ್​ಸ್ಟಾದಲ್ಲಿ ವಿಡಿಯೋಗಳು ವೈರಲ್ ಆಗಿದ್ದು, ಇದು ಟೆಸ್ಲಾ ಬಿಡುಗಡೆ ಮಾಡಲು ಹೊರಟಿರುವ ನೂರು ಡಾಲರ್ ಫೋನ್ ಎಂದು ಹೇಳಿಕೊಳ್ಳಲಾಗುತ್ತಿದೆ.

ಈ ಫೋನ್ ತಂತ್ರಜ್ಞಾನ ಲೋಕದಲ್ಲಿ ಸಂಚಲನ ಮೂಡಿಸುತ್ತಿದೆ. ಎಲೋನ್ ಮಸ್ಕ್ ಅವರ ಟೆಸ್ಲಾ ಕಂಪನಿಯು ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸುತ್ತದೆ. ಇದರ ಬೆನ್ನಲ್ಲೇ ಇದೀಗ ಫೋನ್ ಬಗ್ಗೆ ಹೆಚ್ಚಿನ ಆಸಕ್ತಿ ಇದೆ. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಅವರ ಹೊಸ ಟೆಸ್ಲಾ ಸ್ಮಾರ್ಟ್‌ಫೋನ್‌ನ ಸುದ್ದಿ ಎಲ್ಲ ರಂಗದಲ್ಲಿ ಸದ್ದು ಮಾಡುತ್ತಿದೆ.

ಟೆಸ್ಲಾ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿದೆ ಎಂದು ಈ ಹಿಂದೆ ಹಲವು ವದಂತಿಗಳು ಹಬ್ಬಿದ್ದವು. ಆದರೆ, ಅಂದು ಎಲೋನ್ ಮಸ್ಕ್ ಅವೆಲ್ಲವನ್ನೂ ನಿರಾಕರಿಸಿದರು. ಆದರೆ, ಆದಷ್ಟು ಬೇಗ ಟೆಸ್ಲಾ ಫೋನ್ ಬಿಡುಗಡೆಯಾಗಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಅಷ್ಟೇ ಅಲ್ಲದೆ ಟೆಸ್ಲಾ ಕಂಪನಿ ಬಿಡುಗಡೆ ಮಾಡಲಿರುವ ಫೋನ್ ಗಳ ಫೀಚರ್ ಗಳಿವು ಎಂಬ ಸುದ್ದಿ ಕೂಡ ಹರಿದಾಡುತ್ತಿದೆ. ಇದರಲ್ಲಿ ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.

ಪ್ರಮುಖವಾಗಿ ಟೆಸ್ಲಾ ಫೋನ್ ಸೌರಶಕ್ತಿಯಿಂದ ವಿದ್ಯುತ್ ಅಗತ್ಯವಿಲ್ಲದೇ ಚಾರ್ಜ್ ಮಾಡುವ ಸಾಮರ್ಥ್ಯ ಹೊಂದಿದೆಯಂತೆ. ಎಲೋನ್ ಮಸ್ಕ್ ಪರಿಸರದ ಬಗ್ಗೆ ಯಾವಾಗಲೂ ವಿಶೇಷ ಕಾಳಜಿ ವಹಿಸುತ್ತಾರೆ. ಹೀಗಾಗಿ ಸೌರ ಚಾರ್ಜಿಂಗ್ ವೈಶಿಷ್ಟ್ಯವು ಈ ಫೋನಿನ ಪ್ರಮುಖ ಹೈಲೈಟ್ ಎಂಬ ಮಾತು ಹರಿದಾಡುತ್ತಿದೆ. ಟೆಸ್ಲಾ ಕಂಪನಿಯು ಈಗಾಗಲೇ ಸೋಲಾರ್ ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿದೆ. ಮಸ್ಕ್ ಒಡೆತನದ ಕಂಪನಿಯಾದ SpaceX ಒದಗಿಸಿದ ಸ್ಟಾರ್ ಲಿಂಕ್ ಅನ್ನು ಮಾದರಿಯಲ್ಲಿ ಫೋನ್‌ನಲ್ಲಿ ಬಳಸಲಾಗುತ್ತದೆ. ಇದು ವೇಗದ ಉಪಗ್ರಹ ಆಧಾರಿತ ವಿಶಾಲ ಬ್ರಾಂಡ್ ಆಗಿದೆ. 5G ನೆಟ್‌ವರ್ಕ್ ಇಲ್ಲದ ಪ್ರದೇಶಗಳಲ್ಲಿಯೂ ಈ ಫೋನ್ ಕವರೇಜ್ ಹೊಂದಿದೆ.

ಇದರಲ್ಲೂ ಸ್ಟಾರ್ ಲಿಂಕ್​ನ ತಂತ್ರಜ್ಞಾನ ಅತ್ಯಂತ ಆಧುನಿಕವಾಗಿದೆಯಂತೆ. ಈ ಫೋನ್‌ನಲ್ಲಿ ಬ್ರೈನ್-ಮೆಷಿನ್-ಇಂಟರ್‌ಫೇಸ್ (BMI) ಚಿಪ್‌ಗಳನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಅಂದರೆ ನಾವು ನಮ್ಮ ಆಲೋಚನೆಗಳೊಂದಿಗೆ ಸಾಧನಗಳನ್ನು ನಿಯಂತ್ರಿಸಬಹುದು. ನಿರ್ದಿಷ್ಟವಾಗಿ ಹೇಳುವುದಾದರೆ. ಈ ಫೋನಿನ ಬೆಲೆ ಸುಮಾರು 100 ಡಾಲರ್ ಇರಲಿದೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *