ಸಂಕ್ರಮಣಗಳು ಎಂದರೆ ಸೂರ್ಯನು ಒಂದು ರಾಶಿಯಿಂದ, ಮತ್ತೊಂದು ರಾಶಿಗೆ ಪ್ರವೇಶಿಸುವುದಕ್ಕೆ ಸಂಕ್ರಾಂತಿ ಕಾಲ, ಸಂಕ್ರಮಣ ಘಟ್ಟ ಎಂದೆಲ್ಲಾ ಹೆಸರು.

ಈ ಸಂಕ್ರಾಂತಿಯ ಕಾಲ ಅತ್ಯಂತ ಪುಣ್ಯಪ್ರದವಾಗಿರುತ್ತದೆ.
ಮೇಷ ಸಂಕ್ರಾಂತಿ – ವಿಷುವತ್ ಪುಣ್ಯಕಾಲ,
ವೃಷಭ ಸಂಕ್ರಾಂತಿ – ವಿಷ್ಣುಪದ ಪುಣ್ಯಕಾಲ
ಮಿಥುನ ಸಂಕ್ರಾಂತಿ – ಷಡಶೀತಿ ಪುಣ್ಯಕಾಲ,
ಕಟಕ ಸಂಕ್ರಾಂತಿ – ದಕ್ಷಿಣಾಯನ ಪುಣ್ಯಕಾಲ,
ಸಿಂಹ ಸಂಕ್ರಾಂತಿ ವಿಷ್ಣುಪದ ಪುಣ್ಯಕಾಲ,
ಕನ್ಯಾ ಸಂಕ್ರಾಂತಿ – ಷಡಶೀತಿ ಪುಣ್ಯಕಾಲ,
ತುಲಾ ಸಂಕ್ರಾಂತಿ – ವಿಷುವತ್ ಪುಣ್ಯಕಾಲ,
ವೃಶ್ಚಿಕ ಸಂಕ್ರಾಂತಿ – ವಿಷ್ಣುಪದ ಪುಣ್ಯಕಾಲ,
ಧನಸ್ಸು ಸಂಕ್ರಾಂತಿ – ಷಡಶೀತಿ ಪುಣ್ಯಕಾಲ,
ಮಕರ ಸಂಕ್ರಾಂತಿ – ಉತ್ತರಾಯಣ ಪುಣ್ಯಕಾಲ,
ಕುಂಭ ಸಂಕ್ರಾಂತಿ – ವಿಷ್ಣುಪದ ಪುಣ್ಯಕಾಲ,
ಮೀನ ಸಂಕ್ರಾಂತಿ – ಷಡಶೀತಿ ಪುಣ್ಯಕಾಲವೆಂದು ಪ್ರಸಿದ್ಧಿಯಾಗಿದೆ.
ವಿಷ್ಣುಪದ ಪುಣ್ಯಕಾಲಕ್ಕಿಂತಲೂ, ಷಡಶೀತಿ ಪುಣ್ಯಕಾಲ ಶ್ರೇಷ್ಠವಾಗಿದೆ.
ಷಡಶೀತಿ ಪುಣ್ಯ ಕಾಲಕ್ಕಿಂತಲೂ, ವಿಷ್ಣುವತ್ ಪುಣ್ಯಕಾಲ ಶ್ರೇಷ್ಠವಾಗಿದೆ.
ದಕ್ಷಿಣಾಯನ ಕಾಲಕ್ಕಿಂತಲೂ, ಉತ್ತರಾಯಣ ಕಾಲ ಶ್ರೇಷ್ಠವಾಗಿದೆ.
ಸಂಕ್ರಾಂತಿ ಪುಣ್ಯ ಕಾಲದಲ್ಲಿ, ನದಿ ಸ್ನಾನ, ದೇವತೆಗಳಿಗೆ, ಪಿತೃಗಳಿಗೆ ತರ್ಪಣ, ಉಪವಾಸ, ಹೋಮ, ಜಪ, ದಾನಗಳಿಗೆ ಪ್ರಶಸ್ತವೆನಿಸಿದ್ದು, ವಿಧ್ಯುಕ್ತವಾಗಿ ನಡೆಸಬೇಕಾದ ಕಾರ್ಯಗಳಿಗೆ ಉತ್ತಮ ಕಾಲವೆಂದು ನಂಬಲಾಗಿದೆ.
ಕರ್ನಾಟಕದ ಕರಾವಳಿಯ ಪ್ರದೇಶಗಳಲ್ಲಿ ಪ್ರತಿಯೊಂದು ಸಂಕ್ರಮಣ ಸಂಕ್ರಾಂತಿ ದಿನದಂದು ವಿಶೇಷವಾಗಿ ಆಚರಣೆ ಹಬ್ಬದ ರೀತಿಯಲ್ಲಿ ಮಾಡುತ್ತಾರೆ.
ಆಯನವೆಂದರೆ ಸೂರ್ಯನು ಚಲಿಸುವ ಮಾರ್ಗ. ಸೂರ್ಯನು ಕಟಕ ಸಂಕ್ರಾಂತಿಯಿಂದ ದಕ್ಷಿಣದತ್ತ ವಾಲಿ ಚಲಿಸುತ್ತಿದ್ದು, ಮಕರ ಸಂಕ್ರಾಂತಿಯಿಂದ ತನ್ನ ಮಾರ್ಗವನ್ನು ಬದಲಾಯಿಸಿ, ಉತ್ತರದ ಕಡೆ ವಾಲಿ ಚಲಿಸುತ್ತಾನೆ.
ಹಗಲು ಜಾಸ್ತಿಯಾಗಿ, ಕತ್ತಲು ಕಡಿಮೆಯಾಗುತ್ತದೆ. ದೇವತೆಗಳಿಗೆ ಹಗಲು, ರಾಕ್ಷಸರಿಗೆ ರಾತ್ರಿ ಪ್ರಾರಂಭವೆಂದು ಪುರಾಣದಲ್ಲಿದೆ.
ದಕ್ಷಿಣಾಯನದಲ್ಲಿ ಮುಚ್ಚಿದ ಸ್ವರ್ಗದ ಬಾಗಿಲು, ಈ ಉತ್ತರಾಯಣದಲ್ಲಿ ತೆರೆಯುತ್ತದೆ. ಅದಕ್ಕಾಗಿಯೇ ಭೀಷ್ಮ ಪಿತಾಮಹರು ದೇಹ ತ್ಯಜಿಸಲು, ಉತ್ತರಾಯಣದ ಕಾಲದವರೆಗೂ, ಶರಶಯ್ಯೆಯಲ್ಲಿ ಹರಿಸ್ಮರಣೆ ಮಾಡುತ್ತಾ ಕಾದಿದ್ದರು.
ಉತ್ತರಾಯಣವು ದೇವತೆಗಳ ಕಾಲ, ದಕ್ಷಿಣಾಯನ ಪಿತೃಗಳ ಕಾಲವಾಗಿರುತ್ತದೆ.
ಸಮಸ್ತ ದೇವತಾ ಕಾರ್ಯ ಶುಭಕಾರ್ಯಗಳಿಗೆ ಉತ್ತರಾಯಣ ಕಾಲ ಶ್ರೇಷ್ಠ ವಾಗಿದೆ ಎಂದು ನಂಬಲಾಗಿದೆ.
ಎಳ್ಳು ಬೆಲ್ಲದ ಮಹತ್ವ !!!
ಉತ್ತರಾಯಣ ಪರ್ವ ಕಾಲದಲ್ಲಿ ಸಾಮಾನ್ಯವಾಗಿ ಲಕ್ಷ್ಮೀ ಪೂಜೆಯನ್ನ ಮಾಡ್ತಾರೆ. ಆಕೆಯನ್ನ ಇಕ್ಷು ದಂಡಿ ಅಂತಾರೆ. ಅಂದರೆ ಕಬ್ಬನ್ನ ಹಿಡಿದಿರುವವವಳು ಅಂತ. ಅಂಥಾ ಲಕ್ಷ್ಮಿಯನ್ನ ಆರಾಧಿಸಬೇಕು. ಲಕ್ಷ್ಮೀ ಅಂದ್ರೆ ” ಲಕ್ಷ್ಯತಿ ಸರ್ವಂ ಸದಾ ” ಅಂತ. ಯಾರು ಸರ್ವ ಕಾಲಕ್ಕೂ ಸರ್ವವನ್ನೂ ನೋಡುತ್ತಾಳೋ ಅವಳೇ ಲಕ್ಷ್ಮಿ. ಎಲ್ಲವನ್ನೂ ನೋಡುವವಳು ಅಂದರೆ ಸರ್ವ ಸಮಾನತೆ ಅಂತ. ಅಂದಹಾಗೆ ನಾವುಗಳು ಎಳ್ಳು ಬೆಲ್ಲ ಹಂಚೋದೇ ಈ ಕಾರಣಕ್ಕೆ. ಎಳ್ಳಿನಲ್ಲಿ ಲಕ್ಷ್ಮಿ ವಾಸವಿರ್ತಾಳೆ. ಎಳ್ಳನ್ನ ಹಂಚುವುದರಿಂದ ಸಂಪತ್ತನ್ನ ಹಂಚಿದಂತಾಗತ್ತೆ. ಲಕ್ಷ್ಮಿ ಎಲ್ಲಿಯೂ ನಿಲ್ಲುವವಳಲ್ಲ. ಹಾಗಾಗಿ ಆಕೆಯನ್ನ ಎಲ್ಲರಿಗೂ ಸಮರ್ಪಿಸಿ ಇತರರಲ್ಲಿ ಸಂಪತ್ ವೃದ್ಧಿ ಆಗಲಿ ಅಂತ ಆಶಿಸುವ ಕ್ರಮ ಇದು. ಮತ್ತು ಆಕೆ ಇಕ್ಷುದಂಡಿ, ಇಕ್ಷು ಅಂದ್ರೆ ಕಬ್ಬು ಕಬ್ಬಿನಿಂದಲೇ ಬೆಲ್ಲ ಬಂದದ್ದು ಹಾಗಾಗಿ ಎಳ್ಳು-ಬೆಲ್ಲ ಸೇರಿಸಿ ಹಂಚುವ ಕ್ರಮ ನಮ್ಮಲ್ಲಿ ಬಂತು.
ನಮ್ಮ ಹಿರಿಯರು ಊಟ ಮುಗಿಸಿ ಬೆಲ್ಲ ಬಾಯಿಗಿಡುವುದು ಸುಮ್ಮನಲ್ಲ!
ಸಾಮಾನ್ಯವಾಗಿ ಜನರು ಊಟವಾದ ಮೇಲೆ ಬೆಲ್ಲ ತಿನ್ನುತ್ತಾರೆ. ಆದರೆ ಅದೇಕೆ ಎನ್ನುವುದು ಹಲವರಿಗೆ ಗೊತ್ತಿಲ್ಲ. ಚಳಿಗಾಲದಲ್ಲಿ ಬೆಲ್ಲ ತಿಂದರೆ ವಿಟಮಿನ್ ಗಳು ಮತ್ತು ಲವಣಗಳು ಹೊಟ್ಟೆ ಸೇರುತ್ತವೆ. ಜೊತೆಯಲ್ಲಿಯೇ ನಿರೋಧಕ ಶಕ್ತಿಯನ್ನು ಸೃಷ್ಟಿಸಿ ದೇಹವನ್ನು ಬೆಚ್ಚಗಿಡುತ್ತದೆ. ಶೀತ ಮತ್ತು ಕೆಮ್ಮು ಇದ್ದರೆ ನಿವಾರಿಸುವುದಲ್ಲದೆ, ದೇಹದ ಉಷ್ಣತೆಯನ್ನು ನಿಯಂತ್ರಣದಲ್ಲಿಡುತ್ತದೆ. ಇದೇ ಕಾರಣದಿಂದ ಈ ಸಹಜ ಸಿಹಿ ಭಾರತದಲ್ಲಿ ಅತೀ ಜನಪ್ರಿಯ.
ಇಲ್ಲಿ ಬೆಲ್ಲದ 15 ಲಾಭಗಳನ್ನು ವಿವರಿಸಿದ್ದೇವೆ.
1. ಮಲಬದ್ಧತೆಯಿಂದ ರಕ್ಷಣೆ: ಬೆಲ್ಲ ದೇಹದಲ್ಲಿ ಜೀರ್ಣಕ್ರಿಯೆಗೆ ನೆರವಾಗುವ ಎನ್‌ಜೈಮ್‌ಗಳನ್ನು ಸಕ್ರಿಯಗೊಳಿಸುತ್ತದೆ. ಜಠರದ ಚಲನೆಗೆ ನೆರವಾಗಿ ಮಲಬದ್ಧತೆಯಿಂದ ರಕ್ಷಿಸುತ್ತದೆ.
2. ಮೂತ್ರಪಿಂಡಕ್ಕೆ ನೆರವು: ಬೆಲ್ಲವು ಮೂತ್ರಪಿಂಡದಲ್ಲಿರುವ ವಿಷಕಾರಿ ರಾಸಾಯನಿಕಗಳನ್ನು ಹೊರ ಹಾಕಲು ನೆರವಾಗುತ್ತದೆ. ದೇಹದಿಂದ ಪರಿಣಾಮಕಾರಿಯಾಗಿ ವಿಷನಿವಾರಿಸಬೇಕೆಂದಲ್ಲಿ ಬೆಲ್ಲ ತಿನ್ನಿ.
3. ಜ್ವರದ ಚಿಹ್ನೆಗಳಿಗೆ ಚಿಕಿತ್ಸೆ: ಶೀತ ಮತ್ತು ಕಫ ಇದ್ದಾಗ ಬೆಲ್ಲ ತಿನ್ನಬೇಕು. ಬಿಸಿ ನೀರಿನಲ್ಲಿ ಬೆರೆಸಿ ಕುಡಿಯಿರಿ ಅಥವಾ ಚಹಾಗೆ ಸಕ್ಕರೆ ಬದಲು ಬೆಲ್ಲ ಹಾಕಬಹುದು.
4. ರಕ್ತ ಶುದ್ಧೀಕರಣ: ಬೆಲ್ಲದ ಅತೀ ಪ್ರಸಿದ್ಧ ಲಾಭವೆಂದರೆ ರಕ್ತ ಶುದ್ಧೀಕರಣ. ನಿತ್ಯವೂ ಸೀಮಿತ ಪ್ರಮಾಣದಲ್ಲಿ ಸೇವಿಸುವುದರಿಂದ ರಕ್ತ ಶುದ್ಧವಾಗಿ ದೇಹವನ್ನು ಆರೋಗ್ಯವಾಗಿಡುತ್ತದೆ.
5. ನಿರೋಧಕ ಶಕ್ತಿಗೆ ಒತ್ತು: ಬೆಲ್ಲದಲ್ಲಿ ಹಲವು ಆಂಟಿ ಆಕ್ಸಿಡಂಟ್‌ಗಳು ಮತ್ತು ಲವಣಗಳಾದ ಸತು ಮತ್ತು ಸೆಲೆನಿಯಂ ಇವೆ. ಇವು ಸ್ವತಂತ್ರ ಕಣಗಳಿಗೆ ಹಾನಿಯಾಗದಂತೆ ನೆರವಾಗುತ್ತದೆ. ಸೋಂಕುಗಳ ವಿರುದ್ಧವೂ ನೆರವಾಗುತ್ತದೆ. ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಏರಿಸಲೂ ಬೆಲ್ಲ ನೆರವಾಗುತ್ತದೆ.
6. ದೇಹ ಸ್ವಚ್ಛಗೊಳಿಸುವುದು: ಬೆಲ್ಲ ಒಂದು ಅತೀ ಸಹಜವಾದ ದೇಹ ಸ್ವಚ್ಛಗೊಳಿಸುವ ಸಾಧನ. ಹೀಗಾಗಿ ಬೆಲ್ಲ ಸೇವಿಸುವುದು ದೇಹದಿಂದ ಅನಗತ್ಯ ಕಣಗಳನ್ನು ನಿವಾರಿಸುತ್ತದೆ. ಶ್ವಾಸಕೋಶ, ಶ್ವಾಸನಾಳ, ಕರುಳು, ಹೊಟ್ಟೆ ಮತ್ತು ಅನ್ನನಾಳವನ್ನು ಸ್ವಚ್ಛಗೊಳಿಸುತ್ತದೆ. ಅತೀ ಮಾಲಿನ್ಯವಿರುವ ಜಾಗದಲ್ಲಿ ಕೆಲಸ ಮಾಡುವವರು ಬೆಲ್ಲ ತಿನ್ನುವುದು ಉತ್ತಮ.
7. ಋತುಸ್ರಾವದ ನೋವು: ಬೆಲ್ಲ ತಿನ್ನುವುದರಿಂದ ಹಲವು ಪೌಷ್ಠಿಕಾಂಶಗಳನ್ನು ದೇಹಕ್ಕೆ ನೀಡುವ ಕಾರಣ ಋತುಸ್ರಾವದ ನೋವಿಗೆ ಇದು ಉಪಶಮನ. ಋತುಸ್ರಾವದ ಸಮಯದಲ್ಲಿ ಮನೋಸ್ಥಿತಿಯಲ್ಲಿ ಬದಲಾವಣೆಯಾಗುತ್ತಿದ್ದಲ್ಲಿ ಬೆಲ್ಲ ತಿನ್ನಿ. ಇದು ಪಿಎಂಎಸ್ ಚಿಹ್ನೆಗಳ ಜೊತೆಗೆ ಹೋರಾಡಿ ಎಂಡೋರ್ಫಿನ್‌ಗಳನ್ನು ಬಿಡುಗಡೆ ಮಾಡುತ್ತದೆ. ಎಂಡೋರ್ಫಿನ್‌ಗಳು ದೇಹಕ್ಕೆ ಆರಾಮ ಕೊಡುತ್ತದೆ.
8. ಅನೀಮಿಯದಿಂದ ರಕ್ಷಣೆ: ಬೆಲ್ಲದಲ್ಲಿ ಕಬ್ಬಿಣ ಮತ್ತು ಫೊಲೇಟ್ ಇರುವ ಕಾರಣ ರಕ್ತದ ಕೋಶಗಳ ಪ್ರಮಾಣವನ್ನು ಸಾಮಾನ್ಯ ಸ್ಥಿತಿಯಲ್ಲಿ ಇಡುತ್ತದೆ. ಗರ್ಭಿಣಿ ಮಹಿಳೆಯರಿಗೆ ಉತ್ತಮ.
9. ಕರುಳಿನ ಆರೋಗ್ಯ: ಬೆಲ್ಲದಲ್ಲಿ ಮೆಗ್ನೇಶಿಯಂ ಹೆಚ್ಚಿರುವ ಕಾರಣ ಕರುಳಿನ ಆರೋಗ್ಯಕ್ಕೆ ಉತ್ತಮ. 10 ಗ್ರಾಂ ಬೆಲ್ಲದಲ್ಲಿ 16 ಮಿಲಿಗ್ರಾಂ ಮೆಗ್ನೇಶಿಯಂ ಇರುತ್ತದೆ.
10. ಹೊಟ್ಟೆಗೆ ತಂಪು : ಬೆಲ್ಲ ಸಾಮಾನ್ಯ ದೇಹದ ಉಷ್ಣತೆ ಕಾಪಿಡಲು ನೆರವಾಗುತ್ತದೆ. ಬೆಲ್ಲದ ತಂಪು ನೀರು ಕುಡಿಯುವುದು ಬೇಸಿಗೆಗೆ ಉತ್ತಮ.
11. ರಕ್ತದೊತ್ತಡ ನಿಯಂತ್ರಣ: ಬೆಲ್ಲದಲ್ಲಿ ಪೊಟಾಶಿಯಂ ಮತ್ತು ಸೋಡಿಯಂ ಇರುವ ಕಾರಣ ದೇಹದಲ್ಲಿ ಆಮ್ಲೀಯ ತತ್ವಗಳನ್ನು ನಿಭಾಯಿಸುತ್ತದೆ. ಹೀಗಾಗಿ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.
12. ಶ್ವಾಸಕೋಶದ ಸಮಸ್ಯೆ: ಬೆಲ್ಲವನ್ನು ನಿತ್ಯವೂ ಸೇವಿಸುವುದರಿಂದ ಆಸ್ತಮಾ, ಬ್ರೋನ್ಷಿಟಿಸ್ ಸಮಸ್ಯೆ ನಿವಾರಣೆಯಾಗಲಿದೆ. ಎಳ್ಳು ಬೆರೆಸಿ ಜೊತೆಗೆ ಸೇವಿಸಿದರೆ ಶ್ವಾಸಕೋಶಕ್ಕೆ ಉತ್ತಮ.
13. ಸಂಧಿ ನೋವು: ನಿಮಗೆ ಸಂಧಿ ನೋವಿದ್ದರೆ ಬೆಲ್ಲ ಉತ್ತಮ ನೋವು ನಿವಾರಕ. ಶುಂಠಿ ಜೊತೆ ಸೇವಿಸಿ ಬೆಲ್ಲ ತಿನ್ನ ಬಹುದು. ಮೂಳೆಗಳಿಗೂ ಇದು ಉತ್ತಮ.
14. ತೂಕ ನಷ್ಟ: ತೂಕ ಇಳಿಸಲು ಬೆಲ್ಲ ಉತ್ತಮ ಹಾದಿ. ಪೊಟಾಶಿಯಂ ಹೆಚ್ಚಾಗಿರುವ ಕಾರಣ ಎಲೆಕ್ಟ್ರೊಲೈಟ್ ಗಳನ್ನು ಸಮತೋಲನ ಮಾಡಿ ಚಯಾಪಚಯ ಚೆನ್ನಾಗಿರಲು ಬೆಲ್ಲ ನೆರವಾಗುತ್ತದೆ. ಹೀಗಾಗಿ ತೂಕ ಇಳಿಸುವಲ್ಲಿ ಉತ್ತಮ.
15. ಶಕ್ತಿಯ ಮೂಲ: ಸಕ್ಕರೆ ಕಾರ್ಬೋಹೈಡ್ರೇಟ್ ದೇಹಕ್ಕೆ ಕೊಟ್ಟರೆ, ಬೆಲ್ಲ ದೇಹಕ್ಕೆ ಧೀರ್ಘ ಕಾಲದ ಶಕ್ತಿ ಕೊಡುತ್ತದೆ. ರಕ್ತದಲ್ಲಿ ಸಕ್ಕರೆ ಪ್ರಮಾಣ ಏರಿಸುವುದಿಲ್ಲ. ಸುಸ್ತು ಮತ್ತು ನಿಶ್ಶಕ್ತಿ ಇರುವವರಿಗೂ ಉತ್ತಮ ಔಷಧ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/Telegram: https://t.me/+E1ubNzdguQ5jN2Y1