ನಿಮ್ ಮಕ್ಕಳು ಶಾಲೆಗೆ ಹೋಗ್ತಿದ್ದಾರಾ..? ಪ್ರತಿಷ್ಠಿತ ಶಾಲೆ ಅಂತ ಲಕ್ಷ ಲಕ್ಷಗಟ್ಟಲೇ ಡೊನೇಷನ್ ಕೊಟ್ಟು ಓದಿಸುತ್ತಾ ಇದೀರಾ..? ಹಾಗಿದ್ರೆ ಮೊದ್ಲು ಆ ಶಾಲೆ ಅಧಿಕೃತನಾ ಇಲ್ಲ ಅನಧಿಕೃತನಾ ಅನ್ನೋದನ್ನ ಖಚಿತ ಪಡಿಸಿಕೊಳ್ಳಿ. ಯಾಕಂದ್ರೆ ರಾಜ್ಯ ಸೇರಿದಂತೆ ನಗರದ 1695 ಅನಧಿಕೃತ ಶಾಲೆಗಳಿಗೆ ಬ್ರೇಕ್ ಹಾಕೋಕೆ ಸರ್ಕಾರ ಮುಂದಾಗಿದೆ.

ಬೆಂಗಳೂರು: ನಿಮ್ ಮಕ್ಕಳು ಶಾಲೆಗೆ ಹೋಗ್ತಿದ್ದಾರಾ..? ಪ್ರತಿಷ್ಠಿತ ಶಾಲೆ ಅಂತ ಲಕ್ಷ ಲಕ್ಷಗಟ್ಟಲೇ ಡೊನೇಷನ್ ಕೊಟ್ಟು ಓದಿಸುತ್ತಾ ಇದೀರಾ..? ಹಾಗಿದ್ರೆ ಮೊದ್ಲು ಆ ಶಾಲೆ ಅಧಿಕೃತನಾ ಇಲ್ಲ ಅನಧಿಕೃತನಾ ಅನ್ನೋದನ್ನ ಖಚಿತ ಪಡಿಸಿಕೊಳ್ಳಿ. ಯಾಕಂದ್ರೆ ರಾಜ್ಯ ಸೇರಿದಂತೆ ನಗರದ 1695 ಅನಧಿಕೃತ ಶಾಲೆಗಳಿಗೆ ಬ್ರೇಕ್ ಹಾಕೋಕೆ ಸರ್ಕಾರ ಮುಂದಾಗಿದೆ.
ಇತ್ತೀಚಿನ ದಿನಗಳಲ್ಲಿ ವಿದ್ಯೆ ಅನ್ನೋದು ಕಮರ್ಷಿಯಲ್ ಆಗ್ತಿದೆ.ಹೀಗಾಗಿ ನಗರದ ಯಾವುದೇ ಭಾಗದಲ್ಲಿ ನೋಡಿದ್ರೂ ಸರ್ಕಾರಿ ಶಾಲೆಗಳಿಗಿಂತ ಹೆಚ್ಚು ಖಾಸಗಿ ಶಾಲೆಗಳೇ ಹೆಚ್ಚಾಗಿ ಕಾಣ್ತಿವೆ.ಇದ್ರಲ್ಲಿ ಅಧಿಕೃತವಾಗಿ ನಡೆಸುತ್ತಿರೋದು ಒಂದು ಕಡೆಯಾದ್ರೆ, ಶಿಕ್ಷಣ ಇಲಾಖೆಯ ಅನುಮತಿಯನ್ನೇ ಪಡೆಯದೇ ಶಿಕ್ಷಣ ನೀಡ್ತಿರೋ ಶಾಲೆಗಳು ಮತ್ತೊಂದ್ಕಡೆ. ಹೀಗೆ ಇಲಾಖಾ ಅನುಮತಿ ಇಲ್ಲದೆ ಸದ್ಯ ರಾಜ್ಯದಲ್ಲಿ 1695 ಶಾಳೆಗಳು ನಡೆಯುತ್ತಿದ್ದು, ಇದಕ್ಕೆ ಬ್ರೇಕ್ ಹಾಕ್ಬೇಕು ಅಂತ ಪೋಷಕರು ಒತ್ತಾಯ ಮಾಡ್ತಿದ್ದಾರೆ. ಇದಕ್ಕೆ ಬ್ರೇಕ್ ಹಾಕೋ ನಿಟ್ಟಿನಲ್ಲಿ ಮುಂದಾಗಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಖಾಸಗಿ ಶಾಲಾ ಆಡಳಿತ ಮಂಡಳಿಗಳ ಜತೆ ಸಭೆ ನಡೆಸಿದ್ರು. ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯಾದ್ಯಂತ ಪ್ರೈವೇಟ್ ಶಾಲೆಗಳ ಪ್ರತಿನಿಧಿಗಳು ಭಾಗವಹಿಸಿದ್ರು. ಸಭೆಯಲ್ಲಿ ಹತ್ತಾರು ವಿಚಾರಗಳ ಕುರಿತು ಚರ್ಚೆ ನಡೆಯಿತಾದ್ರೂ ಅನಧಿಕೃತ ಶಾಲೆಗಳ ವಿಚಾರವೇ ಹೆಚ್ಚು ಚರ್ಚೆಯಾಯ್ತು.
ಇಂದು ನಡೆದ ಸಭೆಯಲ್ಲಿ ರಾಜ್ಯದಲ್ಲಿ 1695 ಶಾಲೆಗಳು ಅನಧಿಕೃತವಾಗಿ ನಡೆಯುತ್ತಿರೋದು ಬೆಳಕಿಗೆ ಬಂದಿದೆ. ಅನುಮತಿ ಇಲ್ಲದೆ ಉನ್ನತೀಕರಣ ಮಾಡಿರುವ ಶಾಲೆಗಳು 72 ಇದ್ರೆ. ಇತರೆ ಪಠ್ಯ ಬೋಧನೆ ಮಾಡುತ್ತಿರುವ ಶಾಲೆಗಳು143 ಇದಾವಂತೆ. ಶಿಕ್ಷಣ ಇಲಾಖೆ ಅನುಮತಿ ಪಡೆಯದೇ ವಿಭಾಗ ಬದಲಾವಣೆ ಮಾಡಿರುವ ಶಾಲೆಗಳು 631. ಅನುಮತಿ ಇಲ್ಲದೆ ಸ್ಥಳಾಂತರ ಮಾಡಿರುವ ಶಾಲೆಗಳು 190 ರಾಜ್ಯದಲ್ಲಿ ಶಿಕ್ಷಣ ನೀಡ್ತಿವೆ. ಹಾಗೆನೇ ಅನುಮತಿ ಪಡೆಯದೇ ಹಸ್ತಾಂತರ ಮಾಡಿರುವ ಶಾಲೆಗಳು 15 ಕೇಂದ್ರ ಪಠ್ಯಕ್ಕೆ ಅನುಮತಿ ಪಡೆದು ರಾಜ್ಯಪಠ್ಯ ಬೋಧನೆ ಮಾಡ್ತಿರೋ ಶಾಲೆಗಳು 68, ರಾಜ್ಯ ಪಠ್ಯ ಅನುಮತಿ ಪಡೆದಯ ಇತರೆ ಪಠ್ಯ ಬೋಧನೆ ಮಾಡ್ತಿರೋ ಶಾಲೆಗಳು 494 ಇದಾವೆ ಅನ್ನೋದು ಗೊತ್ತಾಗಿದೆ. ಸದ್ಯಕ್ಕೆ ಶಾಲೆಗಳು ಆರಂಭಗೊಂಡಿವೆ. ಹೀಗಾಗಿ ತಕ್ಷಣದಲ್ಲಿ ಇಂಥ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳೋದಿಲ್ಲ. ಹಂತ ಹಂತವಾಗಿ ಇದ್ರ ವಿರುದ್ಧ ಕ್ರಮ ಕೈಗೊಳ್ತೀವಿ ಅಂತ ಹೇಳಿರೋ ಶಿಕ್ಷಣ ಸಚಿವರು, ಮುಂದಿನ ದಿನಗಳಲ್ಲಿ ಹೊಸದಾಗಿ ಅನಧಿಕೃತ ಶಾಲೆಗಳು ಕಂಡು ಬಂದ್ರೆ ಅದಕ್ಕೆ ಬಿಇಓಗಳೇ ನೇರ ಹೊಣೆ ಅಂತ ಎಚ್ಚರಿಕೆ ಕೊಟ್ರು.
ಖಾಸಗಿ ಶಾಲೆ ಆಡಳಿತ ಮಂಡಳಿಗಳು ಶಿಕ್ಷಣ ಇಲಾಖೆಯಲ್ಲಿ ನಡೆಯುತ್ತಿರೋ ಭ್ರಷ್ಟಚಾರ, ಅನುದಾನ ಹೆಚ್ಚಳ ನೀಡುವ ವಿಚಾರವನ್ನ ಪ್ರಸ್ತಾಪ ಮಾಡಿದ್ದು, ಶೀಘ್ರದಲ್ಲೇ ಈ ಬಗ್ಗೆ ನಿರ್ಧಾರ ಕೈಗೊಳ್ಳೋ ಭರವಸೆ ಕೊಟ್ರು.