![](https://samagrasuddi.co.in/wp-content/uploads/2024/06/image-24.png)
ಮುಂಬೈ: ರೆಮಿಡಿಯಮ್ ಲೈಫ್‌ಕೇರ್ ಲಿಮಿಟೆಡ್‌ನ ಷೇರುಗಳಿಗೆ ಸಂಬಂಧಿಸಿದ ದೊಡ್ಡ ಸುದ್ದಿ ಹೊರಬಿದ್ದಿದೆ. ಮೇ 25, 2018 ರಂದು ಸ್ಟಾಕ್ ಬೆಲೆ ಕನಿಷ್ಠ 45 ಪೈಸೆ ಇತ್ತು. ಅಲ್ಲಿಂದ ಇದುವರೆಗೆ ಶೇಕಡಾ 16567 ರಷ್ಟು ಬಂಪರ್ ರಿಟರ್ನ್ ನೀಡಿದೆ ಈ ಷೇರು. ಬುಧವಾರ ಮಧ್ಯಾಹ್ನದ ವಹಿವಾಟಿನಲ್ಲಿ ರೆಮಿಡಿಯಂ ಲೈಫ್ ಕೇರ್ ಷೇರುಗಳು ಕೊಂಚ ಏರಿಕೆ ದಾಖಲಿಸಿವೆ.
ಈ ಷೇರು ಬೆಲೆ ಈಗ ರೂ.75.50 ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. 756 ಕೋಟಿ ರೂ.ಗಳ ಮಾರುಕಟ್ಟೆ ಬಂಡವಾಳ ಹೊಂದಿರುವ ಸಣ್ಣ ಫಾರ್ಮಾ ಕಂಪನಿಯಾಗಿದೆ ರೆಮಿಡಿಯಮ್ ಲೈಫ್ ಕೇರ್. ಈ ಕಂಪನಿಯ ಷೇರುಗಳ 52 ವಾರಗಳ ಗರಿಷ್ಠ ಬೆಲೆ ರೂ. 180 ಆಗಿದ್ದರೆ, ಕನಿಷ್ಠ ಬೆಲೆ ರೂ. 71.25 ಆಗಿದೆ.
ರೆಮಿಡಿಯಮ್ ಲೈಫ್ ಕೇರ್ ಲಿಮಿಟೆಡ್ ಕಂಪನಿಯ 35 ನೇ ವಾರ್ಷಿಕ ಸಾಮಾನ್ಯ ಸಭೆಯು ಜೂನ್ 26 ರಂದು ಬುಧವಾರ ನಡೆಯಲಿದ್ದು, ಇದರಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಗುವುದು ಎಂದು ಷೇರು ಮಾರುಕಟ್ಟೆಗೆ ಮಾಹಿತಿ ನೀಡಿದೆ.
ರೆಮಿಡಿಯಂ ಲೈಫ್ ಕೇರ್ ಲಿಮಿಟೆಡ್ ಇತ್ತೀಚೆಗೆ ಬೋನಸ್ ಷೇರುಗಳ ವಿತರಣೆಯನ್ನು ಘೋಷಿಸಿದೆ ಮತ್ತು ಜುಲೈ 6 ಅನ್ನು ದಾಖಲೆ ದಿನಾಂಕವನ್ನಾಗಿ ನಿಗದಿಪಡಿಸಿದೆ. ರೆಮಿಡಿಯಮ್ ಲೈಫ್ ಕೇರ್ ಹೂಡಿಕೆದಾರರಿಗೆ ಮೂರರಿಂದ ಒಂದರ ಅನುಪಾತದಲ್ಲಿ ಬೋನಸ್ ಷೇರುಗಳನ್ನು ನೀಡಲಿದೆ. ಅಂದರೆ, ಒಂದು ಷೇರಿಗೆ 3 ಷೇರುಗಳನ್ನು ಉಚಿತವಾಗಿ ಕಂಪನಿ ನೀಡಲಿದೆ. ಈ ಕಂಪನಿಯು ಔಷಧೀಯ ಮತ್ತು ಆರೋಗ್ಯ ರಕ್ಷಣೆ ಉದ್ಯಮಗಳಿಗೆ ಕಚ್ಚಾ ವಸ್ತುಗಳ ವ್ಯಾಪಾರ ಮಾಡುತ್ತದೆ. ಉತ್ಪನ್ನ ಮತ್ತು ಸೇವೆ ಎರಡನ್ನೂ ಕೇಂದ್ರೀಕರಿಸುವ ಸ್ಮಾಲ್ ಕ್ಯಾಪ್ ಫಾರ್ಮಾ ಕಂಪನಿಯ ಷೇರುಗಳು ಕಳೆದ ಕೆಲವು ದಿನಗಳಿಂದ ಗಮನಸೆಳೆಯುತ್ತಿವೆ. ಜುಲೈ 6 ರಂದು ದಾಖಲೆ ದಿನಾಂಕದ ಪ್ರಕಾರ ಮೂರರಿಂದ ಒಂದರ ಅನುಪಾತದಲ್ಲಿ ಬೋನಸ್ ಷೇರುಗಳನ್ನು ನೀಡುವುದಾಗಿ ಕಂಪನಿ ಘೋಷಿಸಿದೆ. ರೆಮಿಡಿಯಮ್ ಲೈಫ್ ಕೇರ್ ಲಿಮಿಟೆಡ್ ಫೆಬ್ರವರಿ 23 ರ ದಾಖಲೆಯ ದಿನಾಂಕದಂದು ರೂ. 5 ರ ಮುಖಬೆಲೆಯ ತನ್ನ ಈಕ್ವಿಟಿ ಷೇರುಗಳನ್ನು ರೂ. 1 ರ ಮುಖಬೆಲೆಯ ಐದು ಷೇರುಗಳಾಗಿ ಪರಿವರ್ತಿಸಲಾಗಿದೆ ಎಂದು ಷೇರು ಮಾರುಕಟ್ಟೆಗೆ ತಿಳಿಸಿತ್ತು.