ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕುದಾಪುರ ಗ್ರಾಮದ ಬಳಿ ಪೊಲೀಸ್ ಜೀಪ್ ಮೇಲೆ ಕಳ್ಳರಿಂದ ಕಲ್ಲೆಸೆದಿರುವಂತಹ ಘಟನೆ ಶನಿವಾರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಳ್ಳರೆಂಬ ಶಂಕಿಸಿ ಪೊಲೀಸರು ಚೇಸ್ ಮಾಡಿದ್ದಾರೆ. ಈ ವೇಳೆ ಪೊಲೀಸ್ ಜೀಪ್ ಮೇಲೆ ಕಲ್ಲೆಸೆಯಲಾಗಿದೆ. ಪಿಎಸ್ಐ ಶಿವಕುಮಾರ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ಚಿತ್ರದುರ್ಗ, ಜುಲೈ 21: ಕುದಾಪುರ ಬಳಿ ಪೊಲೀಸ್ ಜೀಪ್ (police jeep) ಮೇಲೆ ಕಳ್ಳರು ಕಲ್ಲೆಸೆದಿರುವಂತಹ (stone) ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕುದಾಪುರ ಬಳಿ ಶನಿವಾರ ರಾತ್ರಿನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸರು ತಡೆದರೂ ಬೊಲೆರೊ ವಾಹನ ನಿಲ್ಲಿಸದೆ ಹೋಗಿದ್ದಾರೆ. ಕಳ್ಳರೆಂಬ ಶಂಕೆ ಮೇಲೆ ನಾಯಕನಹಟ್ಟಿ ಠಾಣೆ ಪೊಲೀಸರು ಚೇಸ್ ಮಾಡಿದ್ದಾರೆ. ಈ ವೇಳೆ ಪೊಲೀಸ್ ಜೀಪ್ ಮೇಲೆ ಕಲ್ಲೆಸೆದಿದ್ದಾರೆ.
ಈ ವೇಳೆ ನಾಯಕನಹಟ್ಟಿ ಠಾಣೆ ಪಿಎಸ್ಐ ಶಿವಕುಮಾರರಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಕುದಾಪುರ ಬಳಿಯಿಂದ ಕಳ್ಳರ ಗ್ಯಾಂಗ್ ಪರಾರಿ ಆಗಿದ್ದಾರೆ. ಇಂದು ಘಟನಾ ಸ್ಥಳಕ್ಕೆ ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಹಂದಿ, ಕುರಿಗಳ್ಳರೆಂಬ ಶಂಕೆ
ಘಟನೆ ಬಗ್ಗೆ ಚಿತ್ರದುರ್ಗ ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ಮಾಹಿತಿ ನೀಡಿದ್ದು, ಶನಿವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಗಾಳಿಯಲ್ಲಿ 2 ಗುಂಡು ಹಾಗೂ ಬೊಲೆರೊ ವಾಹನದ ಟೈರ್ಗೆ 3 ಗುಂಡು ಫೈರ್ ಮಾಡಲಾಗಿದೆ. ಪಿಎಸ್ಐ ಗುಂಡು ಹಾರಿಸಿದರೂ ಲೆಕ್ಕಿಸದೆ ಕಳ್ಳರು ಪರಾರಿಯಾಗಿದ್ದಾರೆ. ಆಂಧ್ರಪ್ರದೇಶದ ಕಡೆ ಎಸ್ಕೇಪ್ ಆಗಿದ್ದು, ಹಂದಿ, ಕುರಿಗಳ್ಳರೆಂದು ಶಂಕಿಸಲಾಗಿದೆ. ಸದ್ಯ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
Views: 0