ಧೂಳೆಬ್ಬಿಸುತ್ತ ಬಿಡುಗಡೆ ಆಯ್ತು ‘ಪುಷ್ಪ 2’ ಟ್ರೇಲರ್​; ನಿರೀಕ್ಷೆ ಇನ್ನಷ್ಟು ಜೋರು.

ಬಹುನಿರೀಕ್ಷಿತ ‘ಪುಷ್ಪ 2’ ಸಿನಿಮಾದ ಟ್ರೇಲರ್​ ಬಿಡುಗಡೆ ಆಗಿದೆ. ಬೇರೆ ಬೇರೆ ಭಾಷೆಗಳಿಗೆ ಡಬ್​ ಆಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ತೆರೆಕಾಣಲಿದೆ. ಹಾಗಾಗಿ ದೇಶಾದ್ಯಂತ ಪ್ರಚಾರ ಮಾಡಲಾಗುತ್ತಿದೆ. ಹಿಂದಿಗೂ ಡಬ್ ಆಗಿ ತೆರೆಕಾಣಲಿದ್ದು, ಉತ್ತರ ಭಾರತದ ಪ್ರೇಕ್ಷಕರ ಸಮ್ಮುಖದಲ್ಲಿ ಟ್ರೇಲರ್​ ಬಿಡುಗಡೆ ಮಾಡಲಾಗಿದೆ. ಬಿಹಾರದ ಪಟ್ನಾದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳ ಎದುರು ‘ಪುಷ್ಪ 2’ ಚಿತ್ರತಂಡದವರು ಟ್ರೇಲರ್​ ಬಿಡುಗಡೆ ಕಾರ್ಯಕ್ರಮ ಮಾಡಿದ್ದಾರೆ. ಅಲ್ಲು ಅರ್ಜುನ್ ಜೊತೆ ಚಿತ್ರತಂಡ ಹಲವರು ಭಾಗಿ ಆಗಿದ್ದಾರೆ.

ಸುಕುಮಾರ್​ ಅವರು ‘ಪುಷ್ಪ 2’ ಸಿನಿಮಾವನ್ನು ಬಹಳ ಸಮಯ ತೆಗೆದುಕೊಂಡು ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್ ಅವರು ಈ ಸಿನಿಮಾಗಾಗಿ ಸಾಕಷ್ಟು ಸಮಯ ಮೀಡಲಿಟ್ಟಿದ್ದಾರೆ. ‘ಮೈತ್ರಿ ಮೂವೀ ಮೇಕರ್ಸ್​’ ನಿರ್ಮಾಣ ಸಂಸ್ಥೆ ಈ ಸಿನಿಮಾದ ಮೇಲೆ ನೂರಾರು ಕೋಟಿ ರೂಪಾಯಿ ಬಂಡವಾಳ ಹಾಕಿದೆ. ಬಿಡುಗಡೆಗೂ ಮುನ್ನವೇ ಭಾರಿ ಬಿಸ್ನೆಸ್ ಆಗಿದೆ. ಅದ್ದೂರಿಯಾಗಿ ಪ್ರಚಾರ ಮಾಡಲಾಗುತ್ತಿದೆ. ಅದಕ್ಕೆ ಟ್ರೇಲರ್​ ರಿಲೀಸ್ ಕಾರ್ಯಕ್ರಮವೇ ಸಾಕ್ಷಿ.

‘ಪುಷ್ಪ 2’ ಟ್ರೇಲರ್:

ಅಲ್ಲು ಅರ್ಜುನ್ ಅವರಿಗೆ ತೆಲಂಗಾಣ, ಆಂಧ್ರದಲ್ಲಿ ಮಾತ್ರವಲ್ಲದೇ ದೇಶಾದ್ಯಂತ ಅಭಿಮಾನಿಗಳು ಇದ್ದಾರೆ. ಪಟ್ನಾದಲ್ಲಿ ‘ಪುಷ್ಪ 2’ ಸಿನಿಮಾದ ಟ್ರೇಲರ್​ ಬಿಡುಗಡೆ ಮಾಡಲು ಬಂದ ಅಲ್ಲು ಅರ್ಜುನ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಟ್ರೇಲರ್ ನೋಡಿದ ಬಳಿಕ ಪ್ರೇಕ್ಷಕರ ನಿರೀಕ್ಷೆ ಡಬಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಟ್ರೇಲರ್​ ಟ್ರೆಂಡ್​ ಸೃಷ್ಟಿ ಮಾಡಿದೆ.

ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್, ಡಾಲಿ ಧನಂಜಯ್, ಫಹಾದ್ ಫಾಸಿಲ್ ಮುಂತಾದವರು ನಟಿಸಿದ್ದ ‘ಪುಷ್ಪ’ ಸಿನಿಮಾ ಬ್ಲಾಕ್​ ಬಸ್ಟರ್​ ಹಿಟ್​ ಆಗಿತ್ತು. ಅದರ ಸೀಕ್ವೆಲ್​ ಆಗಿ ಮೂಡಿಬರುತ್ತಿರುವ ‘ಪುಷ್ಪ 2’ ಸಿನಿಮಾ ಸಾರ್ವಕಾಲಿಕ ಹಿಟ್ ಆಗಲಿದೆ ಎಂಬುದು ಅಭಿಮಾನಿಗಳ ನಂಬಿಕೆ. ಮೊದಲ ದಿನದ ಕೆಲೆಕ್ಷನ್​ನಲ್ಲಿ ಈ ಸಿನಿಮಾ ಬೇರೆ ಎಲ್ಲ ದಾಖಲೆಗಳನ್ನು ಉಡೀಸ್ ಮಾಡಲಿದೆ ಎಂಬ ನಿರೀಕ್ಷೆ ಇದೆ.

Source : https://tv9kannada.com/entertainment/allu-arjun-starrer-pushpa-2-movie-trailer-released-in-patna-entertainment-news-in-kannada-mdn-936256.html

Leave a Reply

Your email address will not be published. Required fields are marked *