ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ,ಮೇ, 26,ಚಿತ್ರದುರ್ಗದ ಗಮಕ ಕಲಾಭಿಮಾನಿಗಳ ಸಂಘವು ಎಷ್ಟೇ ಅಡೆ ತಡೆಗಳು ಬಂದರೂ ಕಷ್ಟ ಕಾರ್ಪಣ್ಯಗಳು ಉಂಟಾದರೂ ನಿರಂತರವಾಗಿ ಗಮಕ ಕಲೆಯ ಪ್ರಚಾರ ಹಾಗೂ ಪ್ರಸಾರಕ್ಕಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಸ್ಥಳೀಯ ಬಾಪೂಜಿ ವಿದ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿಗಳು ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಕೆ.ಎಂ. ವೀರೇಶ್ ಅವರು ಅಭಿಪ್ರಾಯಪಟ್ಟರು.
ಅವರು ಇಲ್ಲಿನ ಗಮಕ ಕಲಾಭಿಮಾನಿಗಳ ಸಂಘವು ಜೆ ಸಿ ಆರ್ ಗಣಪತಿ ದೇವಾಲಯದಲ್ಲಿ ದಿನಾಂಕ 25/5/2025ರ ಸಂಜೆ ಸಂಘದ ನಲವತ್ತನೇ ವಾರ್ಷಿಕೋತ್ಸವದ ನೆನಪಿಗಾಗಿ ನಡೆಸಿಕೊಟ್ಟ 22ನೇ ಮಾಸಿಕ ಗಮಕ ವಾಚನ ವ್ಯಾಖ್ಯಾನದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ನಾನು ಬಹುಕಾಲದಿಂದ ಅದರ ಕಾರ್ಯ ಚಟುವಟಿಕೆಗಳನ್ನು ಗಮನಿಸುತ್ತಾ ಬಂದಿದ್ದೇನೆ. ಅನೇಕ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದೇನೆ.
ನಮ್ಮ ಸಂಸ್ಥೆಯಲ್ಲಿಯೂ ಗಮಕ ಕಾರ್ಯಕ್ರಮಗಳನ್ನು ಆಯೋಜಿಸಿ ಆನಂದಿಸಿದ್ದೇನೆ. ಇಂಥ ಸಂಸ್ಥೆಗೆ ಎಲ್ಲಾ ಕಡೆಯಿಂದಲೂ ಬೆಂಬಲ ಪ್ರೋತ್ಸಾಹ ಅತ್ಯಗತ್ಯ. ಕನ್ನಡ ಭಾಷೆಯ ಅಂತಃಸತ್ವವನ್ನು ಎತ್ತಿ ಹಿಡಿಯಲು ಗಮಕ ಕಲೆಯು ಅಗತ್ಯ ಎಂಬುದು ಸರ್ವವೇದ್ಯ ಎಂದವರು ಅಭಿಮಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಗಮಕ ಕಾರ್ಯಕ್ರಮದ ಚಟುವಟಿಕೆಗಳಿಗಾಗಿ 10,000ರೂಗಳ(ಹತ್ತು ಸಾವಿರ)ನೆರವನ್ನು ದೇಣಿಗೆಯ ರೂಪದಲ್ಲಿ ನೀಡಿದರು.
ಕಾರ್ಯಕ್ರಮದ ಅಂಗವಾಗಿ ಕುಮಾರವ್ಯಾಸ ಭಾರತದ “ಭೀಷ್ಮ ಪರ್ವದ ಭೀಷ್ಮ ಗೆಲ್ಲಿದನು ವರ ಸುದರ್ಶನವ” ಎಂಬ ಕಾವ್ಯ ಭಾಗವನ್ನು ವಿದೂಷಿ ಚಂಪಕಾಶ್ರೀಧರ್ ಶಿಷ್ಯೆ ಗಮಕಿ ಅಂಶು ಅನಂತ್ ಅವರ ಸುರಸ ಕಾವ್ಯ ವಾಚನಕ್ಕೆ ವ್ಯಾಖ್ಯಾನ ಪರಿಣತ ಪಿ .ಅಂತಕೃಷ್ಣ ಅರ್ಥಪೂರ್ಣ ವ್ಯಾಖ್ಯಾನ ನೀಡಿದರು. ವಿಶೇಷವಾಗಿ ಚಕ್ರಾಯುಧ ಪ್ರಯೋಗ ಮಾಡಿದ ಶ್ರೀ ಕೃಷ್ಣ ನನ್ನು ಕುರಿತು ಕಲಿಭೀಷ್ಮನು ಆಡಿದ ಆರ್ಧೃ ಹೃದಯದ ಮಾತುಗಳು ಬಾವುಕ ಶೋತೃಗಳನ್ನು ವಿಚಲಿತಗೊಳಿಸಿದವು.
ಶಶಿಧರ್ ಶಾನುಭೋಗ್ ಅವರ ಗಮಕ ಪ್ರಾರ್ಥನೆಯೊಂದಿಗೆ ಆರಂಭವಾದ ಸಭೆಯಲ್ಲಿ ಬಿ. ಎಲ್.ಉಮಾ ಸ್ವಾಗತಿಸಿದರು.ಸಂಘದ ಅಧ್ಯಕ್ಷರಾದ ಕೆ .ಆರ್. ರಮಾದೇವಿ ವೆಂಕಣ್ಣಾಚಾರ್ ತಮ್ಮ ಅಧ್ಯಕ್ಷ ಭಾಷಣದಲ್ಲಿ ಇಂತಹ ಕಾರ್ಯಕ್ರಮಕ್ಕೆ ಬಂದು ತಮ್ಮ ಅಮೂಲ್ಯವಾದ ಸಮಯವನ್ನು ಕಳೆದು ದಾಸೋಹ ರೂಪದಲ್ಲಿ ಸಂಘಕ್ಕೆ ದೇಣಿಗೆ ನೀಡಿದ ಕೆ.ಎಂ. ವೀರೇಶ್ ಅವರಿಗೆ ಅಭಿನಂದನೆ ಸಲ್ಲಿಸಿ ಸಮಾರಂಭಕ್ಕೆ ಬಂದ ಎಲ್ಲರಿಗೂ ವಂದಿಸಿದರು.ಈ ಸಮಾರಂಭದಲ್ಲಿ ಪ್ರಕಾಶ, ಹರೀಶ್, ಚಿದಾನಂದಪ್ಪ, ಪದ್ಮಕುಮಾರಿ ,ಸಾವಿತ್ರಮ್ಮ, ರೇಣುಕಾರಾಜು, ಶಾಂತಮ್ಮ ,ನಂಜುಂಡರಾವ್, ಡಾ.ರಾಜೀವಲೋಚನ, ಮೀನಾಕ್ಷಿ ಭಟ್, ಚಂದ್ರಮತಿ ಮೊದಲಾದವರು ಉಪಸ್ಥಿತರಿದ್ದರು.
ಮುಂದಿನ ಮಾಸಿಕ:- ಮುಂದಿನ ಮಾಸಿಕ ಗಮಕದ 23ನೇ ಕಾರ್ಯಕ್ರಮ ಜೂನ್ 29ರ ಭಾನುವಾರ ಸಂಜೆ 6 ಗಂಟೆಗೆ ಜೆಸಿಆರ್ ಗಣಪತಿ ದೇವಾಲಯದಲ್ಲಿ ನಡೆಯಲಿದೆ. ನಗರದ ಸ್ವಾರಾತ್ಮಿಕ ಸಂಗೀತ ಶಾಲೆಯ ಬಾಲಕಲಾವಿದರು ದೇವರ ನಾಮ ಹಾಗೂ ಗಮಕ ಪದ್ಯಗಳನ್ನು ಹಾಡುವರೆಂದು ಸಂಘಟನೆ ತಿಳಿಸಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1