ರಾಹುಲ್ ಆಡದಿರುವುದು ಖುಷಿ ತಂದಿದೆ, ಆಡಿದ್ದರೆ ವೃತ್ತಿಜೀವನವೇ ಕೊನೆಗೊಳ್ಳುತ್ತಿತ್ತು ಎಂದ ವಿಶ್ವಕಪ್ ಹೀರೋ

IND vs AUS 3rd test k srikanth says he is happy that kl rahul did not play in indore test

ಭಾರತ ತಂಡದ ಆರಂಭಿಕ ಆಟಗಾರ ಕೆಎಲ್ ರಾಹುಲ್ (KL Rahul) ಸದ್ಯ ಟೀಕಾಕಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬಹಳ ಸಮಯದಿಂದ ರನ್‌ಗಾಗಿ ಪರದಾಡುತ್ತಿರುವ ರಾಹುಲ್​ಗೆ ಯಾವುದು ಅಂದುಕೊಂಡಂತೆ ನಡೆಯುತ್ತಿಲ್ಲ. ಈ ಕಾರಣಕ್ಕಾಗಿಯೇ ಅವರನ್ನು ಆಸ್ಟ್ರೇಲಿಯಾ ವಿರುದ್ಧದ (India Vs Australia) ಮೂರನೇ ಟೆಸ್ಟ್ ಪಂದ್ಯದಿಂದ ಹೊರಗಿಡಲಾಯಿತು. ಬಳಿಕ ಅವರ ಬದಲು ಶುಭ್​ಮನ್​ ಗಿಲ್​ಗೆ (Shubman Gill) ತಂಡದಲ್ಲಿ ಸ್ಥಾನ ನೀಡಲಾಯಿತು. ನಾಗ್ಪುರ ಮತ್ತು ದೆಹಲಿಯಲ್ಲಿ ನಡೆದ ಎರಡು ಟೆಸ್ಟ್ ಪಂದ್ಯಗಳಲ್ಲಿ ರಾಹುಲ್ ಬ್ಯಾಟ್‌ನಿಂದ ಒಂದೇ ಒಂದು ಅರ್ಧ ಶತಕ ಕೂಡ ಹೊರಹೊಮ್ಮಲಿಲ್ಲ. ಹೀಗಾಗಿ ರಾಹುಲ್ ಅವರನ್ನು ತಂಡದಿಂದ ಕೈಬಿಡಬೇಕು ಎಂದು ಹಲವು ಮಾಜಿ ಆಟಗಾರರು ತಂಡದ ಮ್ಯಾನೇಜ್‌ಮೆಂಟ್‌ ಮೇಲೆ ಒತ್ತಡ ಹೇರಿದ್ದರು. ಇದೀಗ 3ನೇ ಟೆಸ್ಟ್​ನಲ್ಲಿ ರಾಹುಲ್ ಆಡದಿರುವ ಬಗ್ಗೆ ಮಾತನಾಡಿರುವ ಮಾಜಿ ಮುಖ್ಯ ಆಯ್ಕೆಗಾರ ಕೃಷ್ಣಮಾಚಾರಿ ಶ್ರೀಕಾಂತ್, ಇಂದೋರ್​ನಲ್ಲಿ ರಾಹುಲ್ ಆಡದಿರುವುದು ಒಳ್ಳೇಯದ್ದೇ ಆಯಿತು. ಒಂದು ವೇಳೆ ಅವರು ಈ ಪಂದ್ಯವನ್ನಾಡಿದ್ದರೆ, ಅವರ ವೃತ್ತಿಜೀವನ ಭಾಗಶಃ ಅಂತ್ಯವಾಗುತ್ತಿತ್ತು ಎಂದಿದ್ದಾರೆ.

ವಾಸ್ತವವಾಗಿ ಇಡೀ ಬಾರ್ಡರ್​ ಗವಾಸ್ಕರ್ ಟೂರ್ನಿಯಲ್ಲಿ ರಾಹುಲ್ ಪ್ರದರ್ಶನ ಪರಿಣಾಮಕಾರಿಯಾಗಲೇ ಇಲ್ಲ. ನಾಗ್ಪುರದಲ್ಲಿ ನಡೆದ ಮೊದಲ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ರಾಹುಲ್ ಕೇವಲ 20 ರನ್ ಗಳಿಸಿದ್ದರು. ಇದಾದ ಬಳಿಕ ದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ನಲ್ಲಿ 17 ರನ್ ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ 1 ರನ್ ಗಳಿಸಿದ್ದರು. ಅಂದರೆ, ರಾಹುಲ್ ಈ ಮೂರು ಇನ್ನಿಂಗ್ಸ್‌ನಲ್ಲಿ ಗಳಿಸಿದ್ದು, ಕೇವಲ 38 ರನ್ ಅಷ್ಟೆ.

WPL 22023: ತನ್ನ ಮೊದಲ ಪಂದ್ಯಕ್ಕೆ ಬಲಿಷ್ಠ ತಂಡ ಕಟ್ಟಿದ ಆರ್​ಸಿಬಿ! ಯಾರಿಗೆಲ್ಲ ಅವಕಾಶ?

ರಾಹುಲ್ ಆಡದಿರುವುದು ಖುಷಿ ತಂದಿದೆ – ಶ್ರೀಕಾಂತ್

ರಾಹುಲ್ ಅವರ ಈ ಪ್ರದರ್ಶನದ ಬಳಿಕ 3ನೇ ಟೆಸ್ಟ್​ನಲ್ಲಿ ಅವರನ್ನು ತಂಡದಿಂದ ಕೈಬಿಡಲಾಯಿತು. ಈಗ ಈ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ನಾಯಕ ಶ್ರೀಕಾಂತ್, ರಾಹುಲ್ ಇಂದೋರ್‌ನಲ್ಲಿ ಆಡಿದ್ದರೆ ಅವರ ವೃತ್ತಿಜೀವನ ಕೊನೆಗೊಳ್ಳುತ್ತಿತ್ತು, ಆದ್ದರಿಂದ ಅವರು ಆಡದಿರುವುದು ಒಳ್ಳೆಯದ್ದೇ ಆಯಿತು. ಒಂದು ವೇಳೆ ಅವರು ಈ ಪಂದ್ಯವನ್ನಾಡಿದ್ದರೆ, ಅವರ ವೃತ್ತಿಜೀವನ ಭಾಗಶಃ ಅಂತ್ಯವಾಗುತ್ತಿತ್ತು ಎಂದಿದ್ದಾರೆ.

ಬ್ಯಾಟಿಂಗ್ ಕಷ್ಟಕರವಾಗಿತ್ತು

ಇಂಧೋರ್‌ ಪಿಚ್‌ನಲ್ಲಿ ಬ್ಯಾಟಿಂಗ್ ತುಂಬಾ ಕಷ್ಟಕರವಾಗಿತ್ತು ಎಂದು ಶ್ರೀಕಾಂತ್ ಹೇಳಿದ್ದಾರೆ. ಅಂತಹ ಪಿಚ್‌ಗಳಲ್ಲಿ ಬ್ಯಾಟಿಂಗ್‌ ಮಾಡುವುದು ತುಂಬಾ ಕಷ್ಟಕರವಾಗಿದೆ. ಯಾರೇ ಬ್ಯಾಟ್ ಮಾಡಿದರೂ ಕಷ್ಟ ಆಗುತ್ತಿತ್ತು. ಅದು ವಿರಾಟ್ ಕೊಹ್ಲಿಯೇ ಆಗಿದ್ದರೂ ಕೂಡ. ಅಂತಹ ಪಿಚ್‌ಗಳಲ್ಲಿ ಯಾರೂ ರನ್ ಗಳಿಸಲು ಸಾಧ್ಯವಿಲ್ಲ. ಅಂತಹ ಪಿಚ್‌ಗಳಲ್ಲಿ ವಿಕೆಟ್‌ಗಳನ್ನು ಪಡೆಯುವುದು ದೊಡ್ಡ ವಿಷಯವಲ್ಲ. ಬೌಲಿಂಗ್ ಮಾಡಿದ್ದರೆ ನನಗೂ ವಿಕೆಟ್ ಸಿಗುತ್ತಿತ್ತು ಎಂದು ಶ್ರೀಕಾಂತ್ ಹೇಳಿಕೊಂಡಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/ind-vs-aus-3rd-test-k-srikanth-says-he-is-happy-that-kl-rahul-did-not-play-in-indore-test-psr-au14-531263.html

Leave a Reply

Your email address will not be published. Required fields are marked *