
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜ. 17 : ಶಾಸಕರು, ಮಂತ್ರಿಗಳು ಎಲ್ಲರೂ ಹೊಂದಾಣಿಕೆಯಲ್ಲಿ ಹೋಗ್ತಿದೀವಿ, ನಮ್ಮಲ್ಲಿ ಗೊಂದಲವಿಲ್ಲ ಅನವಶ್ಯಕವಾಗಿ ಕೆಲವರು ಸೃಷ್ಟಿ ಮಾಡ್ತಿದ್ದಾರೆ ಅಷ್ಟೆ ಬಿಟ್ರೆ ನಮ್ಮಲ್ಲಿ ಪ್ರಾಮಾಣಿಕವಾಗಿ ಯಾವುದೇ ತರಹದ ಗೊಂದಲವಿಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ
ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಮಲ್ಲಿಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿ
ಅಧ್ಯಕ್ಷರು ಸರ್ಕಾರ ಬಂದ್ಮೇಲೆ ಬದಲಾವಣೆ ಆಗುತ್ತೆ ಎನ್ನುವ ರೀತಿ ಇತ್ತು ಬದಲಾವಣೆ ಆಗೋದಾದ್ರೆ ನಮಗೂ ಕೊಡಿ ಎಂದು
ಕೇಳಿದ್ದಾರೆ ಬದಲಾವಣೆ ಮಾಡಬೇಕು ಎಂದು ಯಾರೂ ಒತ್ತಾಯ ಮಾಡಿಲ್ಲ ಸಿಎಂ, ಡಿಸಿಎಂಗೆ ಘರ್ಷಣೆ ಅಂತಿದ್ದೀರ, ಆ ತರ ಏನೂ
ನಡೆದಿಲ್ಲ ನಮ್ಮ ಸರ್ಕಾರ, ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಮಾದ್ಯಮಗಳ ಮೇಲೆಯೇ ಸಚಿವರು ಹರಿಹಾಯ್ದರು.
ಬಿಜೆಪಿಯಲ್ಲಿ ಕಳೆದ ಐದು ವರ್ಷದಲ್ಲಿಯೂ ಭಿನ್ನಾಭಿಪ್ರಾಯ ಇದೆ ಸೀಟು ಹಂಚಿಕೆಯಲ್ಲಿ ಸಿಎಂ, ಡಿಸಿಎಂ ಕುಸ್ತಿ ಆಡ್ತಾರೆ ಅಂದ್ರು ಸದು
ಆಗ್ಲಿಲ್ಲ ನಮ್ಮಲ್ಲಿ ಸಿದ್ದರಾಮಯ್ಯ ಸೀನಿಯರ್ ಲೀಡರ್ ಇದಾರೆ, ಅವರ ಜೊತೆ ಎಲ್ಲರೂ ಹೊಂದಿಕೊಂಡು ಹೋಗ್ತಿದಿವಿ ಉಳಿದದ್ದು
ಏನಾದ್ರು ಇದ್ರೆ ಹೈಕಮಾಂಡ್ ಇದೆ ತೀರ್ಮಾನ ತೆಗೆದುಕೊಳ್ಳಲಿದೆಸಿಎಂ ಬದಲಾವಣೆ ಬಗ್ಗೆ ಹೈಕಮಾಂಡ್ ತೆಗೆದುಕೊಂಡಾಗ
ದಲಿತರಿಗೂ ಅವಕಾಶ ಕೊಡಿ ಅಂತ ತಿಮ್ಮಾಪುರ ಕೇಳಿದ್ದಾರೆ ಅದು ತಪ್ಪು ಅಂತ ಹೇಳೋಕ್ ಆಗುತ್ತಾ ಜಾರಕಿಹೊಳಿ ನಿರಂತರವಾಗಿ
ಮಾತನಾಡ್ತಿರೋದು ಆ ತರ ಬಂದಾಗ ನಮಗೂ ಅವಕಾಶ ಕೊಡಿ ಅಂತ ಕೇಳಿದ್ದಾರೆ ಎಂದ ಸಚಿವರು. ಸಿದ್ದರಾಮಯ್ಯರನ್ನ ಪಕ್ಕಕ್ಕೆ
ಕೂರಿಸಿ ನಮಗೆ ಕೊಡಿ ಅಂತ ಯಾರೂ ಕೇಳಿಲ್ಲ ಅಧಿಕಾರ ಹಂಚಿಕೆ ಆಗುತ್ತೋ, ಆಗಲ್ವೋ ಎಲ್ಲಾ ಹೈಕಮಾಂಡ್ ನಿರ್ಧಾರ ಮಾಡುತ್ತೇ
ಎಂದರು.
ತುಷ್ಟಿಕರಣ ನೀತಿಯಿಂದ ರಾಜ್ಯದಲ್ಲಿ ಅಪರಾದ ಹೆಚ್ಚಳ ಎಂಬ ವಿಜಯೇಂದ್ರ ಹೇಳಿಕೆ ಮಾತನಾಡಿ ವಿಚಾರ ಅಂಕಿ ಅಂಶಗಳನ್ನು
ನೋಡಿದಾಗ ನಮ್ಮ ಸರ್ಕಾರದಲ್ಲಿಯೇ ನಿಯಂತ್ರಣ ಆಗಿರೋದು ಯಾವುದೇ ಘಟನೆಗಳು ನಡೆಯಬಾರದು ಎಂಬುದೇ ನಮ್ಮ
ಉದ್ದೇಶ ಸಿಟಿ ರವಿ ಕೇಸ್ ಅಲ್ಲಿ ಆಡಿಯೋ ಧೃಡ ಆಗಿರೋ ವಿಚಾರ ಅದು ಎಲ್ಲರಿಗೂ ಗೊತ್ತಿರುವ ವಿಚಾರ ಅವರು ಮಾತನಾಡಿರೋದು
ನಿಜ,ಸದನ ಮುಗಿದ ಮೇಲೆ ಆಗಿರೋದ್ರಿಂದ ದಾಖಲೆ ತಡವಾಗಿದೆ ಸದನದ ಸಮಯದಲ್ಲಿ ಆಗಿದ್ರೆ ಅಲ್ಲೇ ಆಕ್ಷನ್ ಆಗೋದು ತನಿಖೆ
ಮೂಲಕ ಸತ್ಯ ಹೊರ ಬಂದಿದೆ ಅಷ್ಟೆ ಎಂದು ಸಚಿವ ಚಲುವರಾಯ ಸ್ವಾಮಿ ನುಡಿದರು.
ಇದೇ ಸಂದರ್ಭದಲ್ಲಿ ಮಲ್ಲಿಹಳ್ಳಿ ಗ್ರಾಮದ ರೈತ ಪ್ರಭುಲಿಂಗಪ್ಪರ ಸಿರಿಧಾನ್ಯ ಒಕ್ಕಲು ಕಣಕ್ಕೆ ಭೇಟಿ ನೀಡಿದ ಕೃಷಿ ಸಚಿವ
ಚಲುರಾಯಸ್ವಾಮಿ ಪರಿಶೀಲನೆ ಒಕ್ಕಲು ಕಣವನ್ನು ವೀಕ್ಷಿಸಿ, ರೈತರೊಂದಿಗೆ ಕೆಲ ಕಾಲ ಚರ್ಚಿಸಿದ ಸಚಿವರು ಸಿರಿಧಾನ್ಯ
ಬೆಳೆಯುತ್ತಿರೋ ರೈತರ ಕಂಡು ಸಂತಸಗೊಂಡ ಸಚಿವರು ಈ ವೇಳೆ ಸಚಿವರಿಗೆ ಶಾಸಕರಾದ ಗೋವಿಂದಪ್ಪ, ಟಿ.ರಘುಮೂರ್ತಿ
ಉಪಸ್ಥಿತರಿದ್ದರು.