ಜುಲೈ ತಿಂಗಳ ಗೃಹಜ್ಯೋತಿಗೆ ಅರ್ಜಿಗೆ ಇಂದು ಕೊನೇ ದಿನ: ಅರ್ಜಿ ಸಲ್ಲಿಸದೇ ಇದ್ರೆ ಫ್ರೀ ಕರೆಂಟ್ ಇಲ್ಲ

 ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹ ಜ್ಯೋತಿಗೆ ಕೊನೆ ದಿನವಾಗಿದೆ. ಅಂದರೇ ಜುಲೈ ತಿಂಗಳ ಉಚಿತ ವಿದ್ಯುತ್ ಪಡೆಯಲು ಜುಲೈ 27ರ ಒಳಗೆ ಅರ್ಜಿ ಸಲ್ಲಿಸಬೇಕಿದೆ. ಅದಕ್ಕೆ ಇಂದು ಕೊನೆಯ ದಿನವಾಗಿದ್ದು, ಅರ್ಜಿಸಲ್ಲಿಸದಿದ್ದರೆ ಜುಲೈ ತಿಂಗಳ ಉಚಿತ ವಿದ್ಯುತ್ ಇಲ್ಲವಾಗಲಿದೆ.

ಬೆಂಗಳೂರು:  ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹ ಜ್ಯೋತಿಗೆ ಕೊನೆ ದಿನವಾಗಿದೆ. ಅಂದರೇ ಜುಲೈ ತಿಂಗಳ ಉಚಿತ ವಿದ್ಯುತ್ ಪಡೆಯಲು ಜುಲೈ 27ರ ಒಳಗೆ ಅರ್ಜಿ ಸಲ್ಲಿಸಬೇಕಿದೆ. ಅದಕ್ಕೆ ಇಂದು ಕೊನೆಯ ದಿನವಾಗಿದ್ದು, ಅರ್ಜಿಸಲ್ಲಿಸದಿದ್ದರೆ ಜುಲೈ ತಿಂಗಳ ಉಚಿತ ವಿದ್ಯುತ್ ಇಲ್ಲವಾಗಲಿದೆ.

ಗೃಹಜ್ಯೋತಿಗೆ ಅರ್ಜಿ ಸಲ್ಲಿಸಲು ಯಾವುದೇ ಕಾಲವಕಾಶದ ಮಿತಿ ಇಲ್ಲ;

ಇನ್ನು ಗೃಹ ಜ್ಯೋತಿ ಅರ್ಜಿ ಸಲ್ಲಿಕೆಗೆ ಯಾವುದೇ ಕಾಲದ ಮಿತಿ ಇಲ್ಲ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಈಗಾಗಲೇ ಮಾಹಿತಿ ನೀಡಿದ್ದಾರೆ. ಆದರೆ ಜುಲೈ ತಿಂಗಳ ವಿದ್ಯುತ್ ಉಚಿತ ಪಡೆಯಲು ಜುಲೈ 27ರ ಒಳಗಾಗಿ ನೋಂದಣಿ ಮಾಡಬೇಕು ಎಂದು ಹೇಳಲಾಗಿದ್ದು, ಅದರ ಕಾಲ ಇಂದು ಮಧ್ಯರಾತ್ರಿ 12 ವರೆಗೆ ಮಾತ್ರ ಇರಲಿದೆ. ಒಂದು ವೇಳೆ ಮಧ್ಯರಾತ್ರಿ ಒಳಗೆ ಯಾರು ಅರ್ಜಿ ಸಲ್ಲಿಸುವುದಿಲ್ಲವೋ ಅವರಿಗೆ ಮುಂದಿನ ತಿಂಗಳ ಅವದಿಯಲ್ಲಿ ಬರುವ ಶೂನ್ಯ ಬಿಲ್ ಸಿಗುವುದಿಲ್ಲ.

ಈವರೆಗೆ ಸುಮಾರು 1 ಕೋಟಿ 20 ಲಕ್ಷ ಜನರಿಂದ ನೋಂದಣಿ;

ಗೃಹ ಜ್ಯೋತಿಗೆ ಹಸಿರು ನಿಶಾನೆ ದೊರಕಾಗಿಲಿಂದಲೂ ಇಲ್ಲಿವರೆಗೆ 1.20 ಕೋಟಿ ಜನ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಬೆಸ್ಕಾಂ ವ್ಯಾಪ್ತಿಯಲ್ಲಿ ಸುಮಾರು 50 ಲಕ್ಷ ಮಂದಿಯಿಂದ ನೋಂದಣಿಯಾಗಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಈ ಮೂಲಕ ರಾಜ್ಯದಲ್ಲಿ 1 ಕೋಟಿ 22 ಲಕ್ಷ ಬಳಕೆದಾರರಿಗೆ ಮಾತ್ರ ಜುಲೈ ತಿಂಗಳ ವಿದ್ಯುತ್ ಉಚಿತ ಸಿಗಲಿದೆ.

ನಾಳೆಯಿಂದ ಗೃಹಜ್ಯೋತಿಗೆ ನೋಂದಣಿ ಮಾಡಿದರೆ ಅಗಸ್ಟ್ ತಿಂಗಳ ವಿದ್ಯುತ್ ಉಚಿತ ಲಭ್ಯ;

ಇನ್ನೂ ಪ್ರಸ್ತುತ ತಿಂಗಳಲ್ಲಿ ಯಾರು ಗೃಹಜ್ಯೋತಿ ಅರ್ಜಿ ಸಲ್ಲಿಸಿಲ್ಲವೋ ಅವರು 27ರ ನಂತರ ಅರ್ಜಿ ಸಲ್ಲಿಸಿದರೆ ಅವರಿಗೆ ಆಗಷ್ಟ್ ತಿಂಗಳ ವಿದ್ಯುತ್ ಫ್ರೀ ಆಗಲಿದೆ. ಈ ಮೂಲಕ ಸೆಪ್ಟೆಂಬರ್ ನಲ್ಲಿ ಬರುವ ಆಗಸ್ಟ್ ತಿಂಗಳ ಉಚಿತ ವಿದ್ಯುತ್ ಪಡೆಯಲು ಮಾತ್ರ ಅರ್ಹರಾಗಿರುತ್ತಾರೆ.

Source : https://zeenews.india.com/kannada/karnataka/today-is-the-last-day-to-apply-for-grihajyoti-for-the-month-of-july-no-free-current-if-you-dont-apply-148410

Views: 0

Leave a Reply

Your email address will not be published. Required fields are marked *