ಸಚಿನ್ ಆತ್ಮಹತ್ಯೆಗೂ ಪ್ರಿಯಾಂಕ್ ಖರ್ಗೆ ಏನ್ ಸಂಬಂಧ? ರಾಜೀನಾಮೆ ನೀಡುವ ಅಗತ್ಯ ಇಲ್ಲ: ಕೆ ಜೆ ಜಾರ್ಜ್.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಡಿ. 30 ಪ್ರಿಯಾಂಕ್ ಖರ್ಗೆ ಸಚಿನ್ ಆತ್ಮಹತ್ಯೆಗೂ ಏನ್ ಸಂಬಂಧ? ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡುವ ಅಗತ್ಯ ಇಲ್ಲ ಎಂದು ಸಚಿವ ಕೆ ಜೆ ಜಾರ್ಜ್ ಸ್ಪಷ್ಟಪಡಿಸಿದರು.

ಹೊಸದುರ್ಗ ತಾಲ್ಲೂಕಿನ ನೀರಗುಂದ ಗ್ರಾಮ ಬಳಿ ಸಚಿವ ಕೆ ಜೆ ಜಾರ್ಜ್ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್
ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ ವಿಚಾರ ಡಿ ಕೆ ರವಿ, ಗಣಪತಿ ಆತ್ಮಹತ್ಯೆ ಪ್ರಕರಣ ಬಗ್ಗೆ ಬಿಜೆಪಿ ಧರಣಿ ಮಾಡಿತ್ತು
ವಿಧಾನಸೌಧದಲ್ಲಿ ಧರಣಿ ಕುಳಿತರು, ಮಲಗಿದರು ನಾನು ಗಣಪತಿ ಆತ್ಮಹತ್ಯೆ ಪ್ರಕರಣ ವಿಚಾರದಲ್ಲಿ ರಾಜೀನಾಮೆ ನೀಡಿದ್ದೆನು ಸಿಐಡಿ
ಬಿ ರಿಪೋರ್ಟ್ ನೀಡಿತು, ಸಿಬಿಐ, ಸುಪ್ರೀಂಕೋರ್ಟ್ ನಲ್ಲಿ ಪ್ರಕರಣ ಏನಾಯ್ತು ಮತ್ತೆ ಯಾರಾದರೂ ಆ ಪ್ರಕರಣಗಳ ಬಗ್ಗೆ
ಮಾತಾಡಿದರಾ? ಪ್ರಿಯಾಂಕ್ ಖರ್ಗೆ ಸಚಿನ್ ಆತ್ಮಹತ್ಯೆಗೂ ಏನ್ ಸಂಬಂಧ? ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡುವ ಅಗತ್ಯ
ಇಲ್ಲಗಣಪತಿ ಆತ್ಮಹತ್ಯೆ ವಿಚಾರದಲ್ಲಿ ಬಿಜೆಪಿ ಹಗಲು ರಾತ್ರಿ ಧರಣಿ ನನಗೆ ಗೊತ್ತಿತ್ತು ಗಣಪತಿ ಪ್ರಕರಣ ನನಗೆ ಸಂಬಂಧವಿರಲಿಲ್ಲ
ನಾನು ಅಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಿದೆಬಿಜೆಪಿಯಿಂದ ಹಿಟ್ ಅಂಡ್ ರನ್, ಲಾಜಿಕ್ ಎಂಡ್
ಮಾಡಿದ್ದಾರಾ? ಬಿಜೆಪಿ ಆರೋಪಕ್ಕೆ ಯಾವುದೇ ಬೆಲೆ ಇಲ್ಲ ಎಂದರು.

ಭ್ರಷ್ಟಾಚಾರ ಮಿತಿ ಮೀರಿದೆ ಎಂದು ಜಗದೀಶ್ ಶೆಟ್ಟರ್ ಆರೋಪ ವಿಚಾರ ಶೆಟ್ಟರ್ ಬಳಿ ದಾಖಲೆಯಿದ್ದರೆ ಕೊಡಲಿ, ತನಿಖೆ
ಮಾಡಿಸುತ್ತೇವೆ ತಪ್ಪಿತಸ್ಥರ ವಿರುದ್ಧ ಸಿಎಂ, ಗೃಹ ಸಚಿವರು ಕ್ರಮ ಕೈಗೊಳ್ಳುತ್ತಾರೆ ಸಂವಿಧಾನ ಕೈಲಿಡಿದು ಓಡಾಡುವವರು
ದೇಶದ್ರೋಹಿಗಳೆಂದು ಪ್ರಹ್ಲಾದ್ ಜೋಶಿ ಟೀಕೆ ವಿಚಾರ ಸಂವಿಧಾನದ ಆಧಾರದ ಮೇಲೆ ನಮ್ಮ ದೇಶ ನಡೆಯುತ್ತಿದೆ ಸಂವಿಧಾನ
ಕೈಲಿಡಿದು ಓಡಾಡಬೇಡಿ ಎನ್ನುವವರು ವಿರೋಧಿಗಳು ಎಂದು ಸಚಿವ ಕೆ ಜೆ ಜಾರ್ಜ್ ತಿಳಿಸಿದರು.

ಸೋಲಾರ್ ಪಾರ್ಕ್ ಪರಿಶೀಲನೆಗೆ ನಾನು ಬಂದಿದ್ದೇನೆ ಸಚಿವ ಸಂಪುಟ ಪುನರಚನೆ ಬಗ್ಗೆ ನಾನು ಹೇಳಲಾಗದು ಸಿಎಂ, ಕೆಪಿಸಿಸಿ
ಅದ್ಯಕ್ಷ, ಹೈಕಮಾಂಡ್ ತೀರ್ಮಾನಿಸಲಿದೆ ನಮ್ಮನ್ನೇನು ಕೇಳಿ ಸಂಪುಟ ಪುನರಚನೆ ಮಾಡಲ್ಲ ಎಂದು ಸಚಿವ ಜಾರ್ಜ್
ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *