ನ್ಯಾಯ ಸಿಗೋವರೆಗೂ ಬಿಡುವ ಪ್ರಶ್ನೆ ಇಲ್ಲ ಎಂದು ಈಡಿಗ ಸಮಾಜದ ಪ್ರಾಣವನಂದ ಗುರುಗಳು.

ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್

ಚಿತ್ರದುರ್ಗ ಜೂ. 09 ರಾಷ್ಟ್ರೀಯ ಈಡಿಗ ಮಹಾಮಂಡಳಿ ಹುಟ್ಟಿದ್ದೇ ಸಮಾಜದ ನ್ಯಾಯಕ್ಕಾಗಿ ಸಮಾಜದ ಒಳಿತಿಗಾಗಿ ನಮ್ಮದು ಏನಿದ್ದರೂ ಹೋರಾಟ ಸಮಾಜಕ್ಕೆ ನ್ಯಾಯ ಸಿಗೋವರೆಗೂ ಬಿಡುವ ಪ್ರಶ್ನೆ ಇಲ್ಲ ಎಂದು ಈಡಿಗ ಸಮಾಜದ  ಪ್ರಾಣವನಂದ ಗುರುಗಳು ತಿಳಿಸಿದರು.

ದಾವಣಗೆರೆಯ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಈಡಿಗ ಮಹಾಮಂಡಳಿ ರಾಜ್ಯ ಅಧ್ಯಕ್ಷರು ರಾಜ್ಯ ಪದಾಧಿಕಾರಿಗಳು ಹಾಗು ಜಿಲ್ಲಾ ಪದಾಧಿಕಾರಿಗಳ ರಾಜ್ಯ ಮಟ್ಟದ ಚಿಂತನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಶ್ರೀಗಳು, ನಮ್ಮ ಸಮಾಜದ ಬೇಡಿಕೆಗಳು ಆದ 16 ಪ್ರಮುಖ ಬೇಡಿಕೆಗಳನ್ನು ಮುಂದೆ ಇಟ್ಟು ಮತ್ತೊಮ್ಮೆ ದೊಡ್ಡ ಮಟ್ಟದ ಹೋರಾಟದ ಬಗ್ಗೆ ಗಂಭೀರವಾಗಿ ಚರ್ಚೆ ಹಾಗೂ ಇವತ್ತಿನ ಸಮಾಜದ ದುಸ್ಥಿತಿಗೆ ಕಾರಣರಾದ ಸಮಾಜ ಘಾತುಕರ ಬಗ್ಗೆ ಚರ್ಚೆ ಮಾಡಲಾಯಿತು.

ಸರ್ಕಾರ ನಮಗೆ ಮತ್ತೊಮ್ಮೆ ಅನ್ಯಾಯ ಮಾಡುತ್ತಿದೆ ನ್ಯಾಯಕ್ಕಾಗಿ ಮತ್ತೊಮ್ಮೆ ಬೆಂಗಳೂರು ಚಲೋ ಮಾಡುವುದರ ಬಗ್ಗೆ ಚರ್ಚೆ ಮಾಡಿ, ರಾಷ್ಟ್ರೀಯ ಈಡಿಗ ಮಹಾಮಂಡಳಿ ಹುಟ್ಟಿದ್ದೇ ಸಮಾಜದ ನ್ಯಾಯಕ್ಕಾಗಿ ಸಮಾಜದ ಒಳಿತಿಗಾಗಿ ನಮ್ಮದು ಏನಿದ್ದರೂ ಹೋರಾಟ ಸಮಾಜಕ್ಕೆ ನ್ಯಾಯ ಸಿಗೋವರೆಗೂ ಬಿಡುವ ಪ್ರಶ್ನೆ ಇಲ್ಲ ಸಂಘಟನೆ ಅಂದರೆ ಸಂಘರ್ಷ ಅದನ್ನ ಮಾಡಿದರೆ ಮಾತ್ರ ಸಮಾಜಕ್ಕೆ ನ್ಯಾಯ ಸಿಗಲು ಸಾಧ್ಯ ನಿಮ್ಮ ಜೊತೆ ಸದಾ ನಾನು ಇರುತ್ತೇನೆ ಎಂದು ಶ್ರೀಗಳು ತಿಳಿಸಿದ ಶ್ರೀಗಳು ಮುಂದಿನ ಹೋರಾಟಗಳ ಬಗ್ಗೆ ಚರ್ಚೆ ಮಾಡಲಾಯಿತು, 

ಕಾರ್ಯಕ್ರಮದಲ್ಲಿ ರಾಜ್ಯ ಅಧ್ಯಕ್ಷರಾದ ತಿಪ್ಪೇಸ್ವಾಮಿ, ಏಂS ಮಾಜಿ ಅಧಿಕಾರಿ ಹಾಗು ಸಮಾಜದ ಮುಖಂಡರಾದ ಲಕ್ಷ್ಮಿ ನರಸಿಂಹಯ್ಯ, ಮಾಜಿ ರಾಜ್ಯ ಅಧ್ಯಕ್ಷರು ಸಂತೋಷ, ತುಮಕೂರು ಸಮಾಜದ ಮುಖಂಡರಾದ ಪದ್ಮನಾಭ ಹಾಗು ಹಿರಿಯ ಮುಖಂಡರು ಮಂಜುನಾಥ್ ಹಾಗು ಇನ್ನು ಅನೇಕ ಜಿಲ್ಲೆಯ ವಿವಿಧ ಮುಖಂಡರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ  8 ಜಿಲ್ಲೆಯ ಪ್ರಮುಖ ಸಮಾಜದ ಮುಖಂಡರಿಗೆ ಅಭಿನಂದನೆ ಸಲ್ಲಿಸಲಾಯಿತು. 

Leave a Reply

Your email address will not be published. Required fields are marked *