ಇಂದು ಶಾಲೆಗಳಿಗೆ ರಜೆ ಇಲ್ಲ: ಸಚಿವ ಮಧು ಬಂಗಾರಪ್ಪ.

ಬೆಂಗಳೂರು: ಶನಿವಾರ ಶಾಲೆಗಳಿಗೆ ರಜೆ ಇರುವುದಿಲ್ಲ. ಒಂದು ವೇಳೆ ಸಾರಿಗೆ ಸಮಸ್ಯೆಯಾದರೆ ಮಾತ್ರ ಬದಲಾವಣೆ ಮಾಡುತ್ತೇವೆ. ಭದ್ರತೆ, ಸಾರಿಗೆ ವಿಚಾರವಾಗಿ ಸಂಬಂಧಿಸಿದ ಸಚಿವರ ಜತೆ ಮಾತುಕತೆ ನಡೆಸುವುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.

5 ಸಾವಿರ ವಿಶೇಷಚೇತನ ಮಕ್ಕಳು ಪರೀಕ್ಷೆ ಬರೆಯುತ್ತಿದ್ದಾರೆ. ಪರೀಕ್ಷೆಯ ಪಾವಿತ್ರ್ಯತೆ ಕಾಪಾಡುವುದು ಸರಕಾರದ ಕರ್ತವ್ಯ. ಮೂರು ಪರೀಕ್ಷೆ ಬರೆಯಲು ಅವಕಾಶಗಳಿದ್ದು ಈ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಇದೆ ಎಂದವರು ಹೇಳಿದರು.

ಇನ್ನು ನಕಲಿ ಪ್ರಶ್ನೆ ಪತ್ರಿಕೆಯೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿರುವ ಬಗ್ಗೆ ಪ್ರಶ್ನಿಸಿದಾಗ, ನನಗೆ ಗೊತ್ತಿದ್ದರೂ ಇದರ ಬಗ್ಗೆ ಚರ್ಚೆ ಮಾಡಲ್ಲ. ಮಕ್ಕಳು ಮುಗ್ದರಿದ್ದು ಅವರಿಗೆ ಗೊತ್ತಾಗಲ್ಲ. ಯಾರು ಈ ರೀತಿ ಮಾಡಿದ್ದಾರೋ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಮಧು ಬಂಗಾರಪ್ಪ ತಿಳಿಸಿದರು.

Source: Udayavani

Views: 8

Leave a Reply

Your email address will not be published. Required fields are marked *