ಸೆಪ್ಟೆಂಬರ್ 01ರಿಂದ ಬದಲಾಗಲಿವೆ ಈ 09 ನಿಯಮಗಳು, ನಿಮ್ಮ ಪಾಕೆಟ್ ಮೇಲೆ ಡೈರೆಕ್ಟ್ ಎಫೆಕ್ಟ್.

Rules Changes From September 2024: ಸೆಪ್ಟೆಂಬರ್ 01ರಿಂದ ಎಲ್‌ಪಿ‌ಜಿ, ಕ್ರೆಡಿಟ್ ಕಾರ್ಡ್, ಆಧಾರ್ ಕಾರ್ಡ್ ಸೇರಿದಂತೆ ಹಣಕಾಸು ಸಂಬಂಧಿತ 09 ಪ್ರಮುಖ ನಿಯಮಗಳು ಬದಲಾಗಲಿವೆ. ಆಗಸ್ಟ್ ಕೊನೆಗೊಳ್ಳಲು ಇನ್ನೆರಡು ದಿನಗಳಷ್ಟೇ ಬಾಕಿ ಉಳಿದಿದೆ. ಸೆಪ್ಟೆಂಬರ್ 01ಋದ್ನ ಕ್ರೆಡಿಟ್ ಕಾರ್ಡ್, ಎಲ್‌ಪಿ‌ಡಿ, ಸ್ಪೆಷಲ್ ಎಫ್‌ಡಿ, ರುಪೇ ಕಾರ್ಡ್ ಸೇರಿದಂತೆ ಹಲವು ನಿಯಮಗಳು ಬದಲಾಗಲಿದ್ದು, ನಿಮ್ಮ ಜೇಬಿನ ಮೇಲೆ ಏನು ಪರಿಣಾಮ ಎಂದು ತಿಳಿಯಿರಿ.   

ಪ್ರತಿ ತಿಂಗಳ ಮೊದಲ ದಿನದಂದು ತೈಲ ಕಂಪನಿಗಳು ಎಲ್‌ಪಿ‌ಜಿ ಬೆಳೆಯನ್ನು ಪರಿಷ್ಕರಿಸುತ್ತವೆ. ಜುಲೈನಲ್ಲಿ ವಾಣಿಜ್ಯ ಸಿಲಿಂಡರ್ ದರದಲ್ಲಿ ಇಳಿಕೆಯಾಗಿತ್ತು. ಈ ತಿಂಗಳು ಕೂಡ ವಾಣಿಜ್ಯ ಹಾಗೂ ಅಡುಗೆ ಅನಿಲ ದರಗಳ ಬೆಲೆ ಪರಿಷ್ಕರಣೆಯಾಗುವ ನಿರೀಕ್ಷೆಯಿದೆ. 

ಸೆಪ್ಟೆಂಬರ್ 1, 2024 ರಿಂದ, ವಿವಿಧ ಬ್ಯಾಂಕ್‌ಗಳಲ್ಲಿ ಕ್ರೆಡಿಟ್ ಕಾರ್ಡ್  ರಿವಾರ್ಡ್ ಪಾಯಿಂಟ್‌ಗಳು, ರಿಡೀಮ್, ಪಾವತಿ ಗಡುವುಗಳು ಮತ್ತು ಕನಿಷ್ಠ ಮೊತ್ತಕ್ಕೆ ಸಂಬಂಧಿಸಿದ ನಿಯಮಗಳು ಬದಲಾಗಲಿವೆ. ಇದು ಬಳಕೆದಾರರ ಮೇಲೆ ನೇರ ಪರಿಣಾಮ ಬೀರುತ್ತದೆ. 

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ವಿಸ್ತರಿಸಿರುವ ಉಚಿತ ಆಧಾರ್ ನವೀಕರಣದ ಗಡುವು ಸೆಪ್ಟೆಂಬರ್ ತಿಂಗಳಿನಲ್ಲಿ ಕೊನೆಗೊಳ್ಳಲಿದೆ.  ಸೆಪ್ಟೆಂಬರ್ 14, 2024 ರ ನಂತರ ಆಧಾರ್ ನವೀಕರಣಕ್ಕೆ ನಿಗದಿತ ಶುಲ್ಕವನ್ನು ಪಾವತಿಸಬೇಕಾಗುತ್ತದೆ. 

ಸೆಪ್ಟೆಂಬರ್ 1 ರಿಂದ, ಎಚ್‌ಡಿಎಫ್‌ಸಿ ಬ್ಯಾಂಕ್  ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ಬದಲಾಯಿಸಿದೆ. ವಾಸ್ತವವಾಗಿ, ಎಚ್‌ಡಿ‌ಎಫ್‌ಸಿ ಆಯ್ದ  ಕ್ರೆಡಿಟ್ ಕಾರ್ಡ್‌ಗಳ ಮೇಲಿನ ಲಾಯಲ್ಟಿ ಪ್ರೋಗ್ರಾಮ್ ನಿಯಮಗಳನ್ನು ಬಡಯಾಯಿಸಿದ್ದು,  ಯುಟಿಲಿಟಿ ಬಿಲ್ ಪಾವತಿ ವಹಿವಾಟುಗಳ ಮೇಲಿನ ರಿವಾರ್ಡ್ ಪಾಯಿಂಟ್‌ಗಳ ಮಿತಿಯನ್ನು ನಿಗದಿಪಡಿಸಲಿದೆ. ಈ ನಿಯಮಾವು ಸೆಪ್ಟೆಂಬರ್ 01ರಿಂದ ಜಾರಿಗೆ ಬರಲಿದೆ.

ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ಕೆಲವು ವಿಶೇಷ ಎಫ್‌ಡಿಗಳ ಬಡ್ಡಿಯನ್ನು ಹೆಚ್ಚಿಸಿವೆ. ಈ ಬ್ಯಾಂಕ್‌ಗಳ ಗ್ರಾಹಕರು 222 ದಿನಗಳವರೆಗೆ ಹಣವನ್ನು ಠೇವಣಿ ಮಾಡಿದರೆ, ನಿಮಗೆ 6.30% ಬಡ್ಡಿ ಸಿಗುತ್ತದೆ. 333 ದಿನಗಳವರೆಗೆ ಹಣವನ್ನು ಠೇವಣಿ ಮಾಡಿದರೆ, ನೀವು 7.15% ಬಡ್ಡಿಯನ್ನು ಪಡೆಯಬಹುದಾಗಿದೆ. ಆದಾಗ್ಯೂ, ಈ ಆಫರ್ ಸೆಪ್ಟೆಂಬರ್ ಅಂತ್ಯದವರೆಗೆ ಮಾತ್ರ ಲಭ್ಯವಿದೆ. 

ನೀವು ಎಸ್‌ಬಿ‌ಐ ಗ್ರಾಹಕರಾಗಿದ್ದು ಅಮೃತ್ ಕಲಶ್ ಯೋಜನೆಯಡಿ ಹೂಡಿಗೆ ಕ್ಮಾದ್ಲೌ ಬಯಸಿದರೆ  ಸೆಪ್ಟೆಂಬರ್ 30, 2024 ರವರೆಗೆಅವಕಾಶ ಇರಲಿದೆ. ಬ್ಯಾಂಕ್‌ನ ವೆಬ್‌ಸೈಟ್ ಪ್ರಕಾರ, 400-ದಿನಗಳ ವಿಶೇಷ ಅವಧಿಯ ಅಮೃತ್ ಕಲಶ್ ಯೋಜನೆ ಸೆಪ್ಟೆಂಬರ್ 30ಕ್ಕೆ ಮಾತ್ರವೇ ಮಾನ್ಯವಾಗಿರುತ್ತದೆ. 

ಕೇಂದ್ರ ಸರ್ಕಾರಿ ನೌಕರರಿಗೆ ಸೆಪ್ಟೆಂಬರ್‌ನಲ್ಲಿ  ತುಟ್ಟಿಭತ್ಯೆಗೆ ಸಂಬಂಧಿಸಿದಂತೆ ಮಹತ್ವದ ಪ್ರಕಟಣೆ ಹೊರಬೀಳುವ ಸಾಧ್ಯತೆಯಿದೆ.

 ದೇಶದಲ್ಲಿ ನಕಲಿ ಕರೆಗಳ ಹಾವಳಿಯನ್ನು ತಪ್ಪಿಸಲು ಟೆಲಿಕಾಂ ನಿಯಂತ್ರಕ TRAI ಹೊಸ ನಿಯಮವನ್ನು ಜಾರಿಗೆ ತರುತ್ತಿದೆ. ಸ್ಪ್ಯಾಮ್, ಫೇಕ್ ಕಾಲ್ ಸಂಬಂಧಿಸಿದಂತೆ TRAI ಹೊಸ ನಿಯಮ 01ನೇ ಸೆಪ್ಟೆಂಬರ್ 2024ರಿಂದ ಜಾರಿಗೆ ಬರಲಿದೆ. 

ರುಪೇ ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ನಿಯಮಗಳು ಸೆಪ್ಟೆಂಬರ್ 01ರಿಂದ ಬದಲಾಗಲಿದ್ದು ಇನ್ಮುಂದೆ ಯುಪಿಐ ವಹಿವಾತುಗಳಿಗೆ ರಿವಾರ್ಡ್ ಪಾಯಿಂಟ್‌ಗಳು ಅಥವಾ ಇತರ ನಿರ್ದಿಷ್ಟ ಪ್ರಯೋಜನಗಳಿಂದ ಶುಲ್ಕವನ್ನು ಕಡಿತಗೊಳಿಸಲಾಗುವುದಿಲ್ಲ ಎಂದು ಎನ್‌ಪಿ‌ಸಿ‌ಐ ಬ್ಯಾಂಕ್‌ಗಳಿಗೆ ನಿರ್ದೇಶಿಸಿದೆ. 

Source : https://zeenews.india.com/kannada/photo-gallery/rules-change-from-september-direct-impact-on-your-pocket-237195/%E0%B2%B0%E0%B3%81%E0%B2%AA%E0%B3%87-%E0%B2%95%E0%B3%8D%E0%B2%B0%E0%B3%86%E0%B2%A1%E0%B2%BF%E0%B2%9F%E0%B3%8D-%E0%B2%95%E0%B2%BE%E0%B2%B0%E0%B3%8D%E0%B2%A1%E0%B3%8D%E2%80%8C-237196

Leave a Reply

Your email address will not be published. Required fields are marked *