ಬೇಸಿಗೆ ಶಿಬಿರಗಳಿಗೆ ತಮ್ಮ ಮಕ್ಕಳನ್ನು ಕಳುಹಿಸುವುದರ ಮೂಲಕ ಅವರು ದೈಹಿಕವಾಗಿ ಸದೃಢವಾಗಲು ನೆರವಾಗಬೇಕಿದೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಏ. ೨೫ ಮಕ್ಕಳಿಗೆ ಶಾಲೆಯಲ್ಲಿ ಪಠ್ಯ ಎಷ್ಟು ಮುಖ್ಯವೂ ಅಷ್ಟೇ ಪ್ರಮಾಣದಲ್ಲಿ ಬೇಸಿಗೆ ಸಮಯದಲ್ಲಿ ಇಂತಹ ಶಿಬಿರಗಳಿಗೆ ತಮ್ಮ ಮಕ್ಕಳನ್ನು ಕಳುಹಿಸುವುದರ ಮೂಲಕ ಅವರು ದೈಹಿಕವಾಗಿ ಸದೃಢವಾಗಲು ನೆರವಾಗಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯರಾದ
ಕೆ.ಎಸ್.ನವೀನ್ ಪೋಷಕರಿಗೆ ತಿಳಿ ಹೇಳಿದರು.


ಚಿತ್ರದುರ್ಗ ನಗರದ ಸ್ಟೇಡಿಯಂ ಯೂತ್ಸ್ ಅಥ್ಲೆಟಿಕ್ ಅಕಾಡೆಮಿ ವತಿಯಿಂದ ಮಾ.೨೪ ರಿಂದ ಏ. ೨೪ರವರೆಗೆ ಜಿಲ್ಲಾ
ಕ್ರೀಡಾಂಗಣದಲ್ಲಿ ಗುರುವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರದಲ್ಲಿ ಭಾಗವಹಿಸಿದ್ದ
ಮಕ್ಕಳಿಗೆ ಪ್ರಮಾಣಪತ್ರವನ್ನು ವಿತರಿಸಿ ಮಾತನಾಡಿದ ಅವರು, ಇಂದಿನ ಕಾಲದಲ್ಲಿ ಮಕ್ಕಳು ಮೈದಾನಕ್ಕೆ ಬಂದು ಆಡುವ
ಪ್ರಸಂಗಗಳು ಬಹಳ ಕಡಿಮೆ ಇದೆ ಅದರೆ ನಮ್ಮ ಕಾಲದಲ್ಲಿ ಬೇಸಿಗೆ ರಜೆಯಲ್ಲಿ ನಮ್ಮ ಅಜ್ಜನ ಮನೆಗೆ ಹೋಗಿ ಅಲ್ಲಿ ಮರಕೋತಿ,
ಚಿನ್ನಿದಾಂಡು, ಗೋಲಿ, ಬುಗರಿ, ಕರೆ ಅಥವಾ ಭಾವಿಯಲ್ಲಿ ಈಜುವುದು ಸೇರಿದಂತೆ ಇತರೆ ವಿವಿಧ ರೀತಿಯ ಆಟಗಳನ್ನು
ಆಡಲಾಗುತ್ತಿತ್ತು ಈ ರೀತಿಯಾದ ಬೇಸಿಗೆ ಶಿಬಿರಗಳು ಇರಲಿಲ್ಲ ಅಜ್ಜಿ,ಅಜ್ಜನ ಊರುಗಳೇ ನಮಗೆ ಬೇಸಿಗೆ ಶಿಬಿರದ ರೀತಿಯಲ್ಲಿ
ಇದ್ದವು ಎಂದು ತಮ್ಮ ಬಾಲ್ಯದ ನೆನೆಪನ್ನು ಸಭಿಕರ ಮುಂದೆ ಬಿಚ್ಚಿಟ್ಟರು.
ಇಂದಿನ ಮಕ್ಕಳಿಗೆ ಆಟ ಎಂದರೆ ಬರಿ ಕ್ರಿಕೇಟ್ ಎಂದು ಮಾತ್ರ ಅರ್ಥವಾಗುತ್ತದೆ ಇದನ್ನು ಬಿಟ್ಟು ಬೇರೆ ಆಟಗಳು ಸಹಾ ನಮ್ಮಲ್ಲಿ
ಇವೆ ಎಂಬುದನ್ನು ಮರೆಯಲಾಗಿದೆ. ಇದ್ದಲ್ಲದೆ ಮನೆಯಲ್ಲಿ ಮೊಬೈಲ್ ಅಥವಾ ಮನೆಯಲ್ಲಿ ಇಂಟರ್‌ನೆಟ್ ಇದ್ದರೆ ಸಾಕು
ಮನೆಯಿಂದ ಮಕ್ಕಳು ಹೊರಗಡೆಯೇ ಬರುವುದಿಲ್ಲ ಸಂಜೆ ಮೈದಾನದಲ್ಲಿ ಮಕ್ಕಳು ಸಹಾ ಕಾಣುವುದು ಕಡಿಮೆಯಾಗಿದೆ, ಪೋಷಕರು
ಮಕ್ಕಳಿಗೆ ಯಾವ ರೀತಿ ಅಂಕಗಳನ್ನು ಪಡೆಯಲು ಪ್ರೋತ್ಸಾಹ ನೀಡಲಾಗುತ್ತದೆ ಅದೇ ರೀತಿ ಬೇಸಿಗೆ ಸಮಯದಲ್ಲಿ ಇಂತಹ
ಶಿಬಿರಗಳಿಗೆ ಕಲಿಸುವುದರ ಮೂಲಕ ತಮ್ಮ ಮಕ್ಕಳನ್ನು ಬಲಿಷ್ಠರನ್ನಾಗಿ ಮಾಡಬೇಕಿದೆ. ಇದಕ್ಕೆ ಕ್ರೀಡೆಯೊಂದೇ ದಾರಿಯಾಗಿದೆ
ಇದರಿಂದ ದೇಶಕ್ಕೆ ಉತ್ತಮವಾದ ಆರೋಗ್ಯವಂತ ಪ್ರಜೆಗಳನ್ನು ನೀಡಲು ಸಾಧ್ಯವಾಗುತ್ತದೆ ಎಂದರು.
ಸಂಘಟಕರಾದ ಸತೀಶ್ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಇಲ್ಲಿ ಬೇಸಿಗೆ ಶಿಬಿರವನ್ನು ನಡೆಸಲಾಗುತ್ತಿದೆ ಇದಕ್ಕೆ
ಪೋಷಕರು ಸಹಾ ಪ್ರೋತ್ಸಾಹವನ್ನು ನೀಡುವುದರ ಮೂಲಕ ತಮ್ಮ ಮಕ್ಕಳನ್ನು ಶಿಬಿರಕ್ಕೆ ಕಳುಹಿಸುತ್ತಿದ್ದಾರೆ. ಇಂತಹ ಶಿಬಿರಗಳಲ್ಲಿ
ಮಕ್ಕಳು ಸಕ್ರಿಯವಾಗಿ ಭಾಗವಹಿಸುವುದರಿಂದ ಅವರ ದೈಹಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ
ಮಕ್ಕಳಲ್ಲಿ ದುರಾಭ್ಯಾಸ ಬರುವುದಿಲ್ಲ, ಇತರರೊಂದಿಗೆ ಸ್ನೇಹ ಉಂಟಾಗುತ್ತದೆ. ಇಲ್ಲಿ ಹೇಳಿಕೊಟ್ಟ ಪಾಠವನ್ನು ಇಲ್ಲಿಗೆ ನಿಲ್ಲಿಸಬೇಡಿ
ಇದು ನಿರಂತರವಾಗಿ ಇರಬೇಕಿದೆ ಎಂದರು.
ತರಬೇತಿದಾರರಾದ ಸಾಧಿಕ್ ಮಾತನಾಡಿ, ಮಕ್ಕಳನ್ನ ಸಾಧ್ಯವಾದಷ್ಟು ಟಿ.ವಿ. ಹಾಗೂ ಮೊಬೈಲ್‌ನಿಂದ ದೂರವಿಡಿ, ಸಂಜೆ
ಸಮಯದಲ್ಲಿ ಸಾಧ್ಯವಾದಷ್ಟು ಅವರನ್ನು ಈ ರೀತಿಯ ಕ್ರೀಡಾ ಚಟುವಟಿಕೆಗಳಲ್ಲಿ ತೂಡಗಿಸಿ, ಇದರಿಂದ ಅವರಲ್ಲಿ ಆತ್ಮವಿಶ್ವಾಸ
ಮೂಡುತ್ತದೆ ಶೀಘ್ರವಾಗಿ ನಿರ್ಧಾರವನ್ನು ತೆಗೆದುಕೊಳ್ಳುವ ಕಾರ್ಯ ನಡೆಯುತ್ತದೆ ಕ್ರೀಡೆಯಲ್ಲಿ ಭಾಗವಹಿಸುವುದರ ಮೂಲಕ
ಉತ್ತಮವಾದ ಆರೋಗ್ಯವನ್ನು ಸಂಪಾದಿಸಲು ಸಾಧ್ಯವಾಗುತ್ತದೆ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕರಾದ ತಿಪ್ಪೇಸ್ವಾಮಿ, ಆಕಾಡೆಮಿಯ ಕಾರ್ಯದರ್ಶಿ ಶಿವು ಸತೀಶ್ ಬಸವರಾಜು, ಸುಹಾಸ್
ಭಾಗವಹಿಸಿದ್ದರು. ಶಶಾಂಕ ಗೌಡ ಪ್ರಾರ್ಥಿಸಿದರು ನಾಗರಾಜ್ ಬೇದ್ರೇ ಸ್ವಾಗತಿಸಿ, ವಂದಿಸಿ ಕಾರ್ಯಕ್ರಮ ನಿರೂಪಿಸಿದರು. ಈ
ಶಿಬಿರದಲ್ಲಿ ಸುಮಾರು ೧೫೦ ರಿಂದ ೧೮೦ ಮಕ್ಕಳು ಭಾಗವಹಿಸಿದ್ದರು ಇದರಲ್ಲಿ ಗೆದ್ದ ಮಕ್ಕಳಿಗೆ ಪದಕ ಹಾಗೂ ಪ್ರಮಾಣ
ಪತ್ರವನ್ನು ವಿತರಿಸಲಾಯಿತು. ಇದಕ್ಕೂ ಮನ್ನಾ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ಅಟ್ಟಹಾಸಕ್ಕೆ ಬಲಿಯಾಗಿ ತಮ್ಮ ಪ್ರಾಣವನ್ನು
ಕಳೆದುಕೊಂಡವರ ಸ್ಮರಣಾರ್ಥ ಒಂದು ನಿಮಿಷ ಮೌನವನ್ನು ಆಚರಿಸಲಾಯಿತು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *