UPSC: ‘ಗೂಗಲ್ ಗುರು’ ಅಂತೆ 7 ವರ್ಷದ ಈ ಪೋರ! ಯುಪಿಎಸ್‌ಸಿ ಆಕಾಂಕ್ಷಿಗಳಿಗೂ ಪಾಠ ಮಾಡ್ತಾನೆ ಪುಟ್ಟ ಜೀನಿಯಸ್!

ವಯಸ್ಸು ಕೇವಲ ಏಳು ವರ್ಷ. ಯಾವುದೇ ಚಿಂತೆಯಿಲ್ಲದೆ, ಭವಿಷ್ಯದ ಭಯವಿಲ್ಲದೆ, ಶಾಲೆಗೆ ಹೋಗುತ್ತಾ, ಗೆಳೆಯರು ಹಾಗೂ ಸಹಪಾಠಿಗಳೊಂದಿಗೆ ಆಟವಾಡುತ್ತಾ, ಮೋಜು-ಮಸ್ತಿ ಮಾಡುತ್ತಾ, ಬೇಕೆನಿಸಿದ್ದನ್ನು ತಿನ್ನುತ್ತಾ, ರಜೆಯ ಮಜೆಯ ಸಮಯವನ್ನು ಕಳೆಯುವ ವಯಸ್ಸು. ಆದರೆ, ಇಲ್ಲೊಬ್ಬ ಹುಡುಗನನ್ನು ನೋಡಿ. ಉತ್ತರ ಪ್ರದೇಶದ (Uttar Pradesh) ಈ ಏಳು ವರ್ಷದ ಪೋರ ಮಾಡುತ್ತಿರುವ ಕೆಲಸವನ್ನು ಕೇಳಿದರೆ, ನೀವು “ಅಬ್ಬಬ್ಬಾ” ಎಂದು ಮೂಗಿನ ಮೇಲೆ ಬೆರಳಿಡುತ್ತೀರಿ. ಗುರು ಉಪಾಧ್ಯಾಯ ಎಂಬ ಹೆಸರಿನ ಈತ ತನ್ನ ಅತಿ ಚಿಕ್ಕ ವಯಸ್ಸಿನಲ್ಲಿ ಮಾಡಿರುವ ಸಾಧನೆಯನ್ನು ಕೇಳಿದರೆ ಯಾರಿಗಾದರೂ ಆಶ್ಚರ್ಯವಾದೀತು. ನಿಮಗೆ ಊಹಿಸಲೂ ಸಹ ಸಾಧ್ಯವಾಗದ ಕಥೆಯಿದು ನೋಡಿ..

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಸಿವಿಲ್ ಸರ್ವೀಸಸ್ ಪರೀಕ್ಷೆಯು ಭಾರತದಲ್ಲಿನ ಅತ್ಯಂತ ಕಠಿಣ ಮತ್ತು ಅತ್ಯಂತ ಸವಾಲಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದು. ಯುಪಿಎಸ್‌ಸಿ ಸಿಎಸ್‌ಇ ಪರೀಕ್ಷೆಗೆ ತಯಾರಿ ನಡೆಸುವುದು ಸಾಕಷ್ಟು ಸಮಯ ಹಾಗೂ ಪರಿಶ್ರಮವನ್ನು ಬೇಡುತ್ತದೆ. ಎಷ್ಟೋ ಬಾರಿ ಅತಿ ಬುದ್ಧಿವಂತರೂ, ಸತತ ಪರಿಶ್ರಮ ಹಾಕಿದರೂ ಅಭ್ಯರ್ಥಿಗಳು ಇದನ್ನು ಪಾಸ್ ಮಾಡುವಲ್ಲಿ ಸೋಲುತ್ತಾರೆ.

ಯುಪಿಎಸ್ ಸಿ ವಿಷಯಗಳೆಂದರೆ, ಕಾಲೇಜು ಪ್ರಾಧ್ಯಾಪಕರು ಸಹ ಪರಿಣಾಮಕಾರಿಯಾಗಿ ಕಲಿಸಲು ಹೆಣಗಾಡುತ್ತಾರೆ ಆದರೆ, ಗುರು ಉಪಾಧ್ಯಾಯ ಇಂತಹ ಯುಪಿಎಸ್ ಸಿ ಅಭ್ಯರ್ಥಿಗಳಿಗೆ ಪಾಠ ಮಾಡುತ್ತಾನೆ! ಅದು ಬರೋಬ್ಬರಿ 14 ವಿಷಯಗಳು! ಹೌದು, UPSC ಮತ್ತು BTech ಆಕಾಂಕ್ಷಿಗಳಿಗೆ ನಿರ್ಣಾಯಕವಾದ 14 ವಿಷಯಗಳನ್ನು ಕಲಿಸುವ ಗುರು ತನ್ನ ಅಸಾಧಾರಣ ಪ್ರತಿಭೆ ಮೂಲಕ ದೇಶದ ಜನರ ಗಮನ ಸೆಳೆದಿದ್ದಾರೆ. ಈ ವಿಷಯಗಳನ್ನು ಸ್ವತಃ ಕರಗತ ಮಾಡಿಕೊಳ್ಳುವುದು ಮಾತ್ರವಲ್ಲದೆ ಇತರರಿಗೆ ಪರಿಣಾಮಕಾರಿಯಾಗಿ ಕಲಿಸುವ ಸಾಮರ್ಥ್ಯಕ್ಕಾಗಿ ಸಾಕಷ್ಟು ಮನ್ನಣೆ ಗಳಿಸಿದ್ದಾರೆ.

ಗೂಗಲ್ ಗುರು ಎಂದೇ ಖ್ಯಾತಿ ಪಡೆದಿರುವ ಗುರು ಉಪಾಧ್ಯಾಯ

ಹೆಸರಿಗೆ ತಕ್ಕಂತೆ ಗುರು ಉಪಾಧ್ಯಾಯ, ಸಾಕಷ್ಟು ಅಭ್ಯರ್ಥಿಗಳಿಗೆ ಗುರುವಾಗಿದ್ದಾರೆ. ‘ಗೂಗಲ್ ಗುರು’ ಎಂದೇ ಖ್ಯಾತರಾಗಿರುವ ಗುರು ಉಪಾಧ್ಯಾಯ ಅವರು ವೃಂದಾವನದ ಗೋರಾ ನಗರ ಕಾಲೋನಿಯ ನಿವಾಸಿ. ಜುಲೈ 14, 2016 ರಂದು ಜನಿಸಿದ ಗುರುವು ಐದನೇ ವಯಸ್ಸಿನಿಂದ ಯುಪಿಎಸ್‌ಸಿ ಪರೀಕ್ಷೆಯ ವಿಷಯಗಳನ್ನು ಕರಗತ ಮಾಡಿಕೊಂಡಿದ್ದರಂತೆ. ಅಲ್ಲಿಂದಾಚೆಗೆಯೇ ಶಿಕ್ಷಕರ ಪಾತ್ರವನ್ನು ವಹಿಸಿಕೊಂಡಿದ್ದಾರೆ, ಆಕಾಂಕ್ಷಿಗಳಿಗೆ ಬೋಧನೆ ಮಾಡುತ್ತಾರೆ.

UPSC ಮತ್ತು ಇಂಜಿನಿಯರಿಂಗ್ ಪರೀಕ್ಷೆಗಳನ್ನು ಒಳಗೊಂಡಂತೆ ಒಟ್ಟು 14 ವಿಷಯಗಳನ್ನು ಬೋಧಿಸುತ್ತಾನೆ ಈ ಪುಟ್ಟ ಪೋರ. ಅವರ ಅಸಾಧಾರಣ ಪ್ರತಿಭೆ ವ್ಯಾಪಕವಾಗಿ ಗಮನ ಸೆಳೆದಿದ್ದು, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ ಅವರನ್ನು ಗುರುತಿಸಿದೆ.

ಹೆಮ್ಮೆಯಿದೆ ತಂದೆಯ ಮಾತು

ಸಂದರ್ಶನವೊಂದರಲ್ಲಿ ಮಾತನಾಡಿರುವ ಗುರು ಅವರ ತಂದೆ ಅರವಿಂದ್ ಕುಮಾರ್ ಉಪಾಧ್ಯಾಯ, ಗುರು UPSC ಪರೀಕ್ಷೆಯ ಒಟ್ಟು 14 ವಿಷಯಗಳನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಬೋಧಿಸುತ್ತಾನೆ. ನನಗೆ ಮಗ ಗುರುವಿನ ಬಗ್ಗೆ ನನಗೆ ಅಪಾರ ಹೆಮ್ಮೆಯಿದೆ” ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ. ಗುರುವಿಗೆ ವಿಷಯಗಳನ್ನು ಕಲಿಯುವುದು ಬಹಳ ಸುಲಭದ ವಿಚಾರ. ತ್ವರಿತವಾಗಿ ಕಂಠಪಾಠ ಮಾಡುತ್ತಾನೆ. ಒಮ್ಮೆ ಓದಿದ್ದನ್ನು ಮರೆಯುವುದಿಲ್ಲ. ಚಿಕ್ಕ ಮಗುವಾಗಿದ್ದಾಗಲೇ ಆತ 60 ದೇಶಗಳ ಧ್ವಜಗಳನ್ನು ಗುರುತಿಸುವ ಅಸಾಧಾರಣ ಸಾಮರ್ಥ್ಯವನ್ನು ಪ್ರದರ್ಶಿಸಿದ್ದ” ಎನ್ನುತ್ತಾರೆ ಅರವಿಂದ್..

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ****ದಿಂದ ಆರ್ಶೀವಾದ

ಇತ್ತೀಚೆಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಅವರು ಈ ಮಗುವಿಗೆ ಆಶೀರ್ವದಿಸಿದ್ದಾರೆ. ಜೊತೆಗೆ, ಪ್ರಮಾಣ ಪತ್ರ ನೀಡಿ ಗೌರವಿಸಿದ್ದಾರೆ. ಜೊತೆಗೆ ಗುರುವನ್ನು ರಾಷ್ಟ್ರದ ಅತ್ಯಂತ ಕಿರಿಯ ಉಪನ್ಯಾಸಕ ಎಂದು ಶ್ಲಾಘಿಸಿದ್ದಾರೆ.

ಕಲಿಕೆಗೆ ಯಾವುದೇ ಒತ್ತಡ ಹೇರಿಲ್ಲ “ವಿದ್ಯಾಭ್ಯಾಸದ ವಿಚಾರಕ್ಕಾಗಲೀ, ಕಲಿಕೆಗಾಗಲೀ ನಾವು ಗುರುವಿನ ಯಾವುದೇ ಒತ್ತಡ ಹೇರಿಲ್ಲ. ಇದು ಅವನಿಗೆ ಕೇವಲ ಆಟ ಮತ್ತು ಅವನು ತನ್ನ ಸುತ್ತಮುತ್ತ ಕೇಳುವ ಅಥವಾ ನೋಡುವ ಎಲ್ಲವನ್ನೂ ನೆನಪಿಟ್ಟುಕೊಳ್ಳುತ್ತಾನೆ “” ಎಂದು ಗುರುವಿನ ತಾಯಿ ಪ್ರಿಯಾ ಹೇಳುತ್ತಾರೆ.

Source : https://kannada.news18.com/news/trend/seven-year-old-google-guru-this-little-boy-teaches-upsc-aspirants-stg-pjl-1640863.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *