ಕರೆಂಟ್ ಹೋದ ನಾಲ್ಕು ಗಂಟೆಗಳವರೆಗೆ ಬೆಳಕು ನೀಡುತ್ತದೆ ಈ ಬಲ್ಬ್ ! ಮಾರುಕಟ್ಟೆಯಲ್ಲಿ ಇದಕ್ಕಿದೆ ಭಾರೀ ಬೇಡಿಕೆ

Inverter LED Bulb:ಮಾರುಕಟ್ಟೆಯಲ್ಲಿ ಈ ಬಲ್ಬ್ ಗೆ ಬೇಡಿಕೆ ಕೂಡಾ ಹೆಚ್ಚುತ್ತಿದೆ. ಜನರು ಈ ಬಲ್ಬ್ ಅನ್ನು ಹೆಚ್ಚಿನ ಸಂಖ್ಯೆಯಲ್ಲಿಯೇ ಖರೀದಿಸುತ್ತಿದ್ದಾರೆ. 

Inverter LED Bulb : ಪ್ರತಿ ಮನೆಯಲ್ಲೂ ಸಾಮಾನ್ಯ ಎಲ್ಇಡಿ ಬಲ್ಬ್ ಗಳು ಕಂಡುಬರುತ್ತವೆ. ಈ ಬಲ್ಬ್ ಗಳು ವಿದ್ಯುತ್ ಇಲ್ಲ ಎಂದಾದರೆ ಬೆಳಗುವುದನ್ನು ನಿಲ್ಲಿಸಿ ಬಿಡುತ್ತವೆ. ಆದರೆ, ಈಗ ಮಾರುಕಟ್ಟೆಗೆ ವಿಶೇಷ ಬಲ್ಬ್ ಕಾಲಿಟ್ಟಿದೆ. ವಿದ್ಯುತ್ ವ್ಯತ್ಯಯವಾದರೂ ಈ ಬಲ್ಬ್ ಉರಿಯುತ್ತಲೇ ಇರುತ್ತದೆ. ಮಾರುಕಟ್ಟೆಯಲ್ಲಿ ಈ ಬಲ್ಬ್ ಗೆ ಬೇಡಿಕೆ ಕೂಡಾ ಹೆಚ್ಚುತ್ತಿದೆ. ಜನರು ಈ ಬಲ್ಬ್ ಅನ್ನು ಹೆಚ್ಚಿನ ಸಂಖ್ಯೆಯಲ್ಲಿಯೇ ಖರೀದಿಸುತ್ತಿದ್ದಾರೆ. 

ಇದು ಯಾವ ಬಲ್ಬ್? : 
ನಾವು ಮಾತನಾಡುತ್ತಿರುವ ಬಲ್ಬ್‌ನ ಹೆಸರು Inverter rechargeble Emergency led Bulb .ಈ ಬಲ್ಬ್ ಅನ್ನು Amazonನಿಂದ ಖರೀದಿಸಬಹುದು. ಇದರ ಬೆಲೆಯ ಬಗ್ಗೆ ಹೇಳುವುದಾದರೆ, ಗ್ರಾಹಕರು ಇದನ್ನು 500-600 ರೂಗಳಿಗೆ ಖರೀದಿಸಬಹುದು. ಸಾಮಾನ್ಯ ಎಲ್ಇಡಿ ಬಲ್ಬ್ ಗೆ  ಹೋಲಿಸಿದರೆ, ಅದರ ಬೆಲೆ ದುಪ್ಪಟ್ಟಾಗಿದೆ. ಆದರೆ, ಇದು ಸಾಮಾನ್ಯ ಎಲ್ಇಡಿ ಬಲ್ಬ್ ಗಿಂತ ಉತ್ತಮವಾಗಿದೆ. ಮಾತ್ರವಲ್ಲ ವಿದ್ಯುತ್ ಹೋದ ಹಲವು ಗಂಟೆಗಳ ಕಾಲ ಇದು ಬೆಳಕನ್ನು ನೀಡುತ್ತದೆ. 

4 ಗಂಟೆಗಳ ಕಾಲಗಳವರೆಗೆ  ಉರಿಯುತ್ತದೆ ಈ ಬಲ್ಬ್ : 
ಈ ಎಲ್ಇಡಿ ಬಲ್ಬ್ ಗಳು ಶಕ್ತಿಯುತವಾಗಿದ್ದು, ವಿದ್ಯುತ್ ವೈಫಲ್ಯದ ನಂತರ ಸುಮಾರು 4 ಗಂಟೆಗಳ ಕಾಲಗಳವರೆಗೆ ಈ ಬಲ್ಬ್ ಉರಿಯುತ್ತಲೇ ಇರುತ್ತದೆ. ತುರ್ತು ಸಂದರ್ಭಗಳಲ್ಲಿ ಈ ಬಲ್ಬ್ ಗಳನ್ನೂ ಬಳಸಬಹುದು. ವಿಶೇಷವೆಂದರೆ ಅವುಗಳನ್ನು ಪ್ರತ್ಯೇಕವಾಗಿ ಚಾರ್ಜ್ ಮಾಡುವ ಅಗತ್ಯವಿಲ್ಲ ಮತ್ತು ಅವುಗಳು  ಅದರ ಪಾಡಿಗೆ ಚಾರ್ಜ್ ಮಾಡುತ್ತವೆ. 

ಈ ಬಲ್ಬ್ ನ ವೈಶಿಷ್ಟ್ಯಗಳೇನು ? : 
ನಾವು ಈ ಬಲ್ಬ್ ನ ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ, ಈ ಬಲ್ಬ್ ವಿದ್ಯುತ್ ಕಡಿತದ ಸಮಯದಲ್ಲಿ 4 ಗಂಟೆಗಳ ಕಾಲ ನಿರಂತರ ಬೆಳಕಿನ ಬ್ಯಾಕಪ್ ಅನ್ನು ಒದಗಿಸುತ್ತದೆ.ಇದು ಶಕ್ತಿಯುತವಾದ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದೆ. ಇದು ಚಾರ್ಜ್ ಮಾಡಲು 8-10 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಈ 12W ಇನ್ವರ್ಟರ್ ತುರ್ತು LED ಬಲ್ಬ್ ಆನ್ ಮಾಡಿದಾಗ ಸ್ವಯಂಚಾಲಿತವಾಗಿ ಚಾರ್ಜ್ ಆಗುತ್ತದೆ. ಇದನ್ನು ನಿಮ್ಮ ಅಧ್ಯಯನ/ಡ್ರಾಯಿಂಗ್ ರೂಮ್ ಮತ್ತು ಬಾತ್‌ರೂಮ್‌ನಲ್ಲಿ ಸಣ್ಣ ಅಂಗಡಿಗಳು ಮತ್ತು ಆಸ್ಪತ್ರೆಯಲ್ಲಿ ಬಳಸಬಹುದು.  ಈ ಬಲ್ಬ್ ಮೇಲೆ 6 ತಿಂಗಳ ವಾರಂಟಿ ಸಿಗುತ್ತದೆ. 

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

 WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Source : https://zeenews.india.com/kannada/technology/inverter-bulb-brightens-a-room-4-hours-after-power-failure-161177

Leave a Reply

Your email address will not be published. Required fields are marked *