Mohammed Shami wife urges Viral Post: ‘ಇಂಡಿಯಾ’ ಬದಲು ‘ಭಾರತ್’ ಎಂದು ಹೆಸರಿಡಲು ಕೇಂದ್ರ ಸರ್ಕಾರ ಚಿಂತನೆ ರೂಪಿಸಿದೆ. ಕೇಂದ್ರ ಸರ್ಕಾರ ಸೆಪ್ಟೆಂಬರ್ 18 ರಿಂದ 22ರ ವರೆಗೆ ವಿಶೇಷ ಅಧಿವೇಶನ ಕರೆದಿದ್ದು, ಇಲ್ಲಿ ‘ಇಂಡಿಯಾ’ ಬದಲು ‘ಭಾರತ್ ‘ಎಂದು ಅಧಿಕೃತ ನಾಮಕರಣ ಆಗಲಿದೆಯಾ ಎಂಬ ಮಾತುಗಳು ಸದ್ಯ ಕೇಳಿ ಬರುತ್ತಿವೆ.

Mohammed Shami wife urges Viral Post: ಪ್ರಸ್ತುತ ಎಲ್ಲಡೆ ಕೇಳಿಬರುತ್ತಿರುವ ವಿಚಾರವೆಂದರೆ ‘ಇಂಡಿಯಾ’ ಬದಲು ‘ಭಾರತ’ ಎನ್ನುವ ಹೆಸರಿಡಬೇಕು ಎಂಬುದು. ಈ ಬಗ್ಗೆ ಅನೇಕ ದಿಗ್ಗಜರು, ವಿಧ್ವಾಂಸರು, ರಾಜಕಾರಣಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಈ ಮಧ್ಯೆ ಭಾರತ ತಂಡದ ವೇಗಿಯೊಬ್ಬರ ಪತ್ನಿ ವರ್ಷದ ಹಿಂದೆ ಮಾಡಿದ್ದ ಇನ್ಸ್ಟಾಗ್ರಾಂ ಫೋಸ್ಟ್ ವೈರಲ್ ಆಗುತ್ತಿದೆ.
‘ಇಂಡಿಯಾ’ ಬದಲು ‘ಭಾರತ್’ ಎಂದು ಹೆಸರಿಡಲು ಕೇಂದ್ರ ಸರ್ಕಾರ ಚಿಂತನೆ ರೂಪಿಸಿದೆ. ಕೇಂದ್ರ ಸರ್ಕಾರ ಸೆಪ್ಟೆಂಬರ್ 18 ರಿಂದ 22ರ ವರೆಗೆ ವಿಶೇಷ ಅಧಿವೇಶನ ಕರೆದಿದ್ದು, ಇಲ್ಲಿ ‘ಇಂಡಿಯಾ’ ಬದಲು ‘ಭಾರತ್ ‘ಎಂದು ಅಧಿಕೃತ ನಾಮಕರಣ ಆಗಲಿದೆಯಾ ಎಂಬ ಮಾತುಗಳು ಸದ್ಯ ಕೇಳಿ ಬರುತ್ತಿವೆ.
ಈ ನಡುವೆ, ಭಾರತ ತಂಡದ ವೇಗಿ ಮೊಹಮ್ಮದ್ ಶಮಿ ಅವರ ಪತ್ನಿ ಹಸೀನ್ ಜಹಾನ್ ಕಳೆದ ವರ್ಷ ಮಾಡಿದ್ದ ಸೋಶಿಯಲ್ ಮೀಡಿಯಾ ಫೋಸ್ಟ್ ವೈರಲ್ ಆಗುತ್ತಿದೆ. ಈ ಪೋಸ್ಟ್’ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ವಿಶೇಷ ಮನವಿ ಮಾಡಿದ್ದರು. “ನಮ್ಮ ದೇಶ, ನಮ್ಮ ಗೌರವ. ನಾನು ಭಾರತವನ್ನು ಪ್ರೀತಿಸುತ್ತೇನೆ. ನಮ್ಮ ದೇಶದ ಹೆಸರು ಹಿಂದೂಸ್ತಾನ್ ಅಥವಾ ಭಾರತ ಎಂದು ಇರಬೇಕು. ಮಾನ್ಯ ಪ್ರಧಾನಮಂತ್ರಿ ಮತ್ತು ಗೃಹಸಚಿವರಲ್ಲಿ ಇಂಡಿಯಾ ಎನ್ನುವ ಹೆಸರನ್ನು ಬದಲಾಯಿಸಲು ವಿನಂತಿಸುತ್ತಿರುವೆ. ನಮ್ಮ ದೇಶದ ಹೆಸರನ್ನು ಇಂಡಿಯಾ ಎಂದು ಕರೆಯುವ ಬದಲು ಭಾರತ ಅಥವಾ ಹಿಂದುಸ್ತಾನ್ ಎಂದು ಕರೆಯುವಂತೆ ಮಾಡಿ” ಎಂದು ಬರೆದುಕೊಂಡಿದ್ದರು. ಇದೀಗ ಈ ಪೋಸ್ಟ್ ಮುನ್ನಲೆಗೆ ಬಂದಿದೆ.
ಇನ್ನೊಂದೆಡೆ ‘ಇಂಡಿಯಾ’ ಬದಲು ಭಾರತ ಎಂದು ಮರುನಾಮಕರಣ ಮಾಡುವ ಸುದ್ದಿ ಮುನ್ನೆಲೆಗೆ ಬರುತ್ತಿದ್ದಂತೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, INDvsPAK ಬದಲಾಗಿ BHAvsPAK ಎಂದು ಬರೆದುಕೊಂಡಿದ್ದರು, ಜೊತೆಗೆ ಈ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಭಾರತೀಯ ಕ್ರಿಕೆಟಿಗರ ಜರ್ಸಿ ಮೇಲೆ ‘ಭಾರತ್’ ಎಂದು ಬರೆಸಬೇಕು ಎಂದು ಬಿಸಿಸಿಐ ಮತ್ತು ಜೈ ಶಾಗೆ ಮನವಿ ಮಾಡಿಕೊಂಡಿದ್ದಾರೆ.
ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk
ನಮ್ಮ Facebook page: https://www.facebook.com/samagrasudii