Home Remedy For Cracked Heels: ನೀವೂ ಸಹ ಒಡೆದ ಹಿಮ್ಮಡಿ ಸಮಸ್ಯೆಯಿಂದ ಬಳಲುತ್ತಿದ್ದೀರಾ… ಚಿಂತಿಸುವ ಅಗತ್ಯವೇ ಇಲ್ಲ ನಿಮ್ಮ ಮನೆಯಲ್ಲಿಯೇ ಇರುವ ಮೂರೇ ಮೂರು ಪದಾರ್ಥಗಳ ಸಹಾಯದಿಂದ ಈ ಸಮಸ್ಯೆಗೆ ಸುಲಭ ಪರಿಹಾರ ಕಂಡು ಕೊಳ್ಳಬಹುದು.
Home Remedy For Cracked Heels: ಒಡೆದ ಹಿಮ್ಮಡಿಗಳು ಕಾಲಿನ ಅಂದವನ್ನು ಮರೆಮಾಡುವುದರ ಜೊತೆಗೆ ಹಲವು ಗಂಭೀರ ಸಮಸ್ಯೆಗಳಿಗೂ ಕೂಡ ಕಾರಣವಾಗಬಹುದು. ಚರ್ಮವು ಗಟ್ಟಿಯಾಗಿ ಮತ್ತು ಒಣಗಿದಾಗ ಈ ಹಿಮ್ಮಡಿ ಬಿರುಕು ಅಥವಾ ಒಡೆದ ಹಿಮ್ಮಡಿ ಸಮಸ್ಯೆ ಸಂಭವಿಸುತ್ತದೆ. ಬಿರುಕು ಮೂಡಲು ಕಾರಣಗಳು ಹಲವಿದೆ. ಆದರೆ, ಇದಕ್ಕೆ ಆದಷ್ಟು ಬೇಗ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯ.
ಕ್ರ್ಯಾಕ್ಡ್ ಹೀಲ್ಸ್ ಅಥವಾ ಹೊಡೆದ ಹಿಮ್ಮಡಿಗಳ ಸಮಸ್ಯೆ ಇರುವವರು ಸಾಧ್ಯವಾದಷ್ಟು ಸ್ಯಾಂಡಲ್‌ಗಳ ಬಗ್ಗೆ ವಿಶೇಷ ಗಮನ ವಹಿಸಬೇಕು. ಇಂತಹವರು ತೆರೆದ ಹಿಮ್ಮಡಿಯ ಪಾದರಕ್ಷೆಗಳನ್ನು ಧರಿಸುವುದನ್ನು ತಪ್ಪಿಸಿದರೆ ಒಳ್ಳೆಯದು. ಇದಲ್ಲದೆ ಒಂದೇ ಒಂದು ಸಿಂಪರ್ ಹೋಂ ರೆಮಿಡಿ ಸಹಾಯದಿಂದ ನೀವು ಕೇವಲ ಒಂದೇ ವಾರದಲ್ಲಿ ಒಡೆದ ಹಿಮ್ಮಡಿ ಸಮಸ್ಯೆಗೆ ಪರಿಹಾರ ಪಡೆಯಬಹುದು.
ಕ್ರ್ಯಾಕ್ಡ್ ಹೀಲ್ಸ್ ಮನೆಮದ್ದಿಗೆ ಬೇಕಾಗುವ ಸಾಮಾಗ್ರಿಗಳು:
>> ಒಂದು ಕ್ಯಾಂಡಲ್
>> ಸಾಸಿವೆ/ಬಾದಾಮಿ ಎಣ್ಣೆ
>> ಕೊಬ್ಬರಿ ಎಣ್ಣೆ
ಒಡೆದ ಹಿಮ್ಮಡಿಯನ್ನು ಸರಿಪಡಿಸಲು ಈ ಮೂರು ಪದಾರ್ಥಗಳನ್ನು ಹೀಗೆ ಬಳಸಿ:
ಮೊದಲಿಗೆ ಒಂದು ದೊಡ್ಡ ಕ್ಯಾಂಡಲ್ ಎಂದರೆ ಮೇಣದ ಬತ್ತಿಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ತುರಿದುಕೊಳ್ಳಿ. ನಂತರ ಅದನ್ನು ಒಂದು ಬೌಲ್ ನಲ್ಲಿ ಹಾಕಿ. ಅದಕ್ಕೆ ಒಂದೆರಡು ಚಮಚ ಸಾಸಿವೆ ಎಣ್ಣೆ, ಇಲ್ಲವೇ ಬಾದಾಮಿ ಎಣ್ಣೆಯನ್ನು ಬೆರೆಸಿ ಮಿಕ್ಸ್ ಮಾಡಿ.
ನಂತರ ಒಂದು ದೊಡ್ಡ ಪಾತ್ರೆಯಲ್ಲಿ ಸ್ವಲ್ಪ ನೀರನ್ನು ತೆಗೆದುಕೊಂಡು ಅದನ್ನು ಒಲೆಯ ಮೇಲಿಟ್ಟು ಕಾಯಿಸಿ. ನೀರು ಸ್ವಲ್ಪ ಬಿಸಿಯಾಗುತ್ತಿದ್ದಂತೆ ಮೇಣದ ಬತ್ತಿಯ ತುರಿಗೆ ಎಣ್ಣೆ ಬೆರೆಸಿಟ್ಟಿರುವ ಬೌಲ್ ಅನ್ನು ಅದರ ಮೇಲಿಟ್ಟು, ಈ ಮಿಶ್ರಣ ವ್ಯಾಕ್ಸ್ ಆಗುವವರೆಗೂ ಕಾಯಿಸಿ. ಮಿಶ್ರಣ ತಳ ಹತ್ತದಂತೆ ಮಧ್ಯೆ-ಮಧ್ಯೆ ಅದನ್ನು ಕೈ ಆಡುತ್ತಿರಿ.
ನಂತರ ನೀರಿನಲ್ಲಿರುವ ಬೌಲ್ ಅನ್ನು ಹೊರತೆಗೆದು ಅದರಲ್ಲಿ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಈ ಪೇಸ್ಟ್ ಅನ್ನು ಒಂದು ಗಾಜಿನ ಬಾಕ್ಸ್ ನಲ್ಲಿ ಹಾಕಿ ಸ್ಟೋರ್ ಮಾಡಿ.
ಇದನ್ನು ಬಳಸುವ ವಿಧಾನ:
ನಿತ್ಯ ರಾತ್ರಿ ಮಲಗುವ ಮೊದಲು ನಿಮ್ಮ ಕಾಲುಗಳನ್ನು ಚೆನ್ನಾಗಿ ತೊಳೆದು, ಒರೆಸಿ ಬಳಿಕ ಬಾಕ್ಸ್ ನಲ್ಲಿ ಸ್ಟೋರ್ ಮಾಡಿಟ್ಟಿರುವ ಔಷಧಿಯನ್ನು ನಿಮ್ಮ ಪಾದಗಳಿಗೆ ಹಚ್ಚಿ. ಹಿಮ್ಮಡಿಯಲ್ಲಿ ಒಡೆದ ಜಾಗದಲ್ಲಿ ಇದನ್ನು ಚೆನ್ನಾಗಿ ಹಚ್ಚಿ ಲಘು ಮಸಾಜ್ ಮಾಡಿರಿ. ನಂತರ ಸಾಕ್ಸ್ ಧರಿಸಿ ಮಲಗಿ. ಬೆಳಿಗ್ಗೆ ಎದ್ದು ಕಾಲುಗಳನ್ನು ಬೆಚ್ಚಗಿನ ನೀರಿನಿಂದ ವಾಶ್ ಮಾಡಿ. ನಿತ್ಯ ಈ ರೀತಿ ಮಾಡುವುದರಿಂದ ಕೇವಲ ಒಂದೇ ಒಂದು ವಾರದಲ್ಲಿ ಕ್ರ್ಯಾಕ್ಡ್ ಹೀಲ್ಸ್ ಸಮಸ್ಯೆಗೆ ಬೈ! ಬೈ! ಹೇಳಬಹುದು.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. ಸಮಗ್ರ ಸುದ್ದಿ ಇದನ್ನು ಖಚಿತಪಡಿಸುವುದಿಲ್ಲ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1