ಸರ್ಕಾರದ ಈ ಯೋಜನೆಯಿಂದ ಕೋಟಿಗಳ ಒಡೆಯರಾಗುವರು ಮಹಿಳೆಯರು ! ಮಹಿಳೆಯರಿಗಾಗಿ ಜಾರಿಗೆ ಬಂದಿರುವ ಸ್ಕೀಮ್ ಇದು

Government Scheme Update: ಮುಖ್ಯಮಂತ್ರಿ ಲಖ್ಪತಿ ದೀದಿ ಯೋಜನೆಯಡಿ ರಾಜ್ಯದ 1.25 ಲಕ್ಷ ಮಹಿಳೆಯರನ್ನು ಲಕ್ಷಾಧಿಪತಿಗಳನ್ನಾಗಿ ಮಾಡುವ ಗುರಿಯನ್ನು ಹೊಂದಲಾಗಿದೆ. 

Government Scheme Update : ದೇಶಾದ್ಯಂತ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹಲವು ಯೋಜನೆಗಳನ್ನು ನಡೆಸಲಾಗುತ್ತಿದೆ. ಜನರಿಗೆ ಆರ್ಥಿಕ ಭದ್ರತೆಯನ್ನು ಒದಗಿಸಲು ಅನೇಕ ಯೋಜನೆಗಳು ಕಾಲಕಾಲಕ್ಕೆ ಹೊರಬರುತ್ತಿವೆ. ಇವುಗಳಲ್ಲಿ ವಿಶೇಷವಾಗಿ ಮಹಿಳೆಯರು, ವೃದ್ಧರು, ಮಕ್ಕಳು ಮತ್ತು ಹೆಣ್ಣು ಮಕ್ಕಳಿಗಾಗಿ ಅನೇಕ ಕಲ್ಯಾಣ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಮಹಿಳೆಯರನ್ನು ಲಕ್ಷಾಧಿಪತಿಗಳನ್ನಾಗಿ ಮಾಡುವ ರಾಜ್ಯ ಸರ್ಕಾರದ ಯೋಜನೆ ಬಗ್ಗೆ ನಾವಿಲ್ಲಿ ಮಾಹಿತಿ ನೀಡಲಿದ್ದೇವೆ. 

ಈ ಯೋಜನೆಯಡಿ ಮಹಿಳೆಯರಿಗೆ ಬಡ್ಡಿಯಿಲ್ಲದೆ 5 ಲಕ್ಷದವರೆಗೆ ಸಾಲ ಸಿಗುತ್ತದೆ.ಮುಖ್ಯಮಂತ್ರಿ ಲಖಪತಿ ದೀದಿ ಯೋಜನೆಯನ್ನು  ಉತ್ತರಾಖಂಡ ರಾಜ್ಯ ಸರ್ಕಾರವು ಮಹಿಳೆಯರಿಗಾಗಿ ಜಾರಿಗೆ ತಂದಿದೆ. ಈ ಯೋಜನೆಯಡಿ ರಾಜ್ಯದ 1.25 ಲಕ್ಷ ಮಹಿಳೆಯರನ್ನು ಲಕ್ಷಾಧಿಪತಿಗಳನ್ನಾಗಿ ಮಾಡುವ ಗುರಿಯನ್ನು ಹೊಂದಲಾಗಿದೆ. 

2025ರ ವೇಳೆಗೆ ಮಹಿಳೆಯರನ್ನು ಲಕ್ಷಾಧಿಪತಿಗಳನ್ನಾಗಿಸುವ ಉದ್ದೇಶದಿಂದ 
ಈ ಯೋಜನೆಯನ್ನು ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸರ್ಕಾರವು ಮಹಿಳೆಯರಿಗಾಗಿ ನಡೆಸುತ್ತಿದೆ. ಈ ಯೋಜನೆಯಡಿ 2025ರ ವೇಳೆಗೆ 1.25 ಲಕ್ಷ ಮಹಿಳೆಯರನ್ನು ಲಕ್ಷಾಧಿಪತಿಯನ್ನಾಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.  

ಯೋಜನೆಯ ವಿಶೇಷತೆ ಏನು ? :
>> ಈ ಯೋಜನೆಯ ಲಾಭ ಪಡೆಯಲು ಮಹಿಳೆಯು ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
>> ಇದರೊಂದಿಗೆ ಮಹಿಳೆಯರು ಸ್ವ-ಸಹಾಯ ಸಂಘಗಳ ಸದಸ್ಯರಾಗಿರಬೇಕು. 
>> ಈ ಯೋಜನೆಯನ್ನು ನವೆಂಬರ್ 2022 ರಲ್ಲಿ ಪ್ರಾರಂಭಿಸಲಾಗಿದೆ. 
>> ಈ ಯೋಜನೆಯಡಿ ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. 

ಯಾವ ದಾಖಲೆಗಳು ಬೇಕಾಗುತ್ತವೆ?
ಈ ಯೋಜನೆಯ ಲಾಭ ಪಡೆಯಲು,  ಮೂಲ ನಿವಾಸ ಪ್ರಮಾಣಪತ್ರವನ್ನು ಹೊಂದಿರಬೇಕು. ಇದಲ್ಲದೇ ಆಧಾರ್ ಕಾರ್ಡ್ , ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿ ಹಾಗೂ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ  ಹೊಂದಿರಬೇಕು. ಇದಲ್ಲದೆ, ನೋಂದಾಯಿತ ಮೊಬೈಲ್ ಸಂಖ್ಯೆ ಅಗತ್ಯವಿದೆ. 

ಬಡ್ಡಿ ರಹಿತ ಸಾಲ : 
ಮಹಿಳೆಯರನ್ನು ಸಬಲೀಕರಣಗೊಳಿಸಲು ಮತ್ತು ಯಾವುದೇ ಆರ್ಥಿಕ ಸಮಸ್ಯೆಯಿಲ್ಲದೆ ತಮ್ಮ ವ್ಯಾಪಾರವನ್ನು ಬೆಳೆಸಲು ಸಹಾಯವಾಗಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಸರ್ಕಾರ ಮಹಿಳೆಯರಿಗೆ ಬಡ್ಡಿ ರಹಿತವಾಗಿ 5 ಲಕ್ಷ ರೂ.ವರೆಗೆ ಸಾಲ ನೀಡುತ್ತಿದ್ದು, ಇದರಿಂದ ವ್ಯಾಪಾರವನ್ನು ಸುಲಭವಾಗಿ ಹೆಚ್ಚಿಸಬಹುದು. 

ಯಾವ ಮಹಿಳೆಯರು ಹೇಗೆ ಪ್ರಯೋಜನ ಪಡೆಯುತ್ತಾರೆ ? :
ಮುಖ್ಯಮಂತ್ರಿ ಲಖಪತಿ ದೀದಿ ಯೋಜನೆ ಅಡಿಯಲ್ಲಿ, ಸ್ವ-ಸಹಾಯ ಗುಂಪುಗಳೊಂದಿಗೆ ಸಂಬಂಧ ಹೊಂದಿರುವ ಮತ್ತು ವಾರ್ಷಿಕ ಆದಾಯ ತೀರಾ ಕಡಿಮೆ ಇರುವ ರಾಜ್ಯದ ಮಹಿಳೆಯರನ್ನು ಆಯ್ಕೆ ಮಾಡಲಾಗುತ್ತದೆ. ರಾಜ್ಯ ಸರ್ಕಾರ ಮಹಿಳೆಯರ ಆದಾಯ ಮತ್ತು ಅಭಿವೃದ್ಧಿಗಾಗಿ ಈ ಯೋಜನೆ ಆರಂಭಿಸಿದೆ.

ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk

ನಮ್ಮ Facebook page: https://www.facebook.com/samagrasudii

Source : https://zeenews.india.com/kannada/business/bumper-saving-scheme-for-women-by-uttarakhand-state-govt-lakhpati-didi-scheme-156594

Leave a Reply

Your email address will not be published. Required fields are marked *