Test Cricket: ಬರೋಬ್ಬರಿ 675 ರನ್​ಗಳ ಭರ್ಜರಿ ಜಯ: ಇದುವೇ ವಿಶ್ವ ದಾಖಲೆ.

ರಾಜ್​ಕೋಟ್​ನ ನಿರಂಜನ್ ಶಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ (England) ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ(Team India) 434 ರನ್​ಗಳ ಅಮೋಘ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್​ನಲ್ಲಿ 445 ರನ್ ಕಲೆಹಾಕಿದರೆ, ಇಂಗ್ಲೆಂಡ್ 319 ರನ್​ಗಳಿಗೆ ಆಲೌಟ್ ಆಗಿತ್ತು. ಇನ್ನು ದ್ವಿತೀಯ ಇನಿಂಗ್ಸ್​ನಲ್ಲಿ ಭಾರತ ತಂಡವು 4 ವಿಕೆಟ್ ನಷ್ಟಕ್ಕೆ 430 ರನ್ ಬಾರಿಸಿ ಡಿಕ್ಲೇರ್ ಘೋಷಿಸಿತು. ಅತ್ತ 126 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ನಲ್ಲಿ 557 ರನ್​ಗಳ ಗುರಿ ಪಡೆದ ಇಂಗ್ಲೆಂಡ್ ತಂಡವು 122 ರನ್​ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಟೀಮ್ ಇಂಡಿಯಾ 434 ರನ್​ಗಳ ಭರ್ಜರಿ ಜಯ ಸಾಧಿಸಿ ವಿಶೇಷ ದಾಖಲೆ ಬರೆಯಿತು.

ಅಂದರೆ ಇದು ಟೆಸ್ಟ್ ಕ್ರಿಕೆಟ್​ನಲ್ಲಿ ಭಾರತ ತಂಡದ ಸರ್ವಶ್ರೇಷ್ಠ ಜಯವಾಗಿದೆ. ಇದಕ್ಕೂ ಮುನ್ನ 2021 ರಲ್ಲಿ ನ್ಯೂಝಿಲೆಂಡ್ ವಿರುದ್ಧ 372 ರನ್​ಗಳ ಅಂತರದಿಂದ ಗೆದ್ದಿದ್ದು ಟೀಮ್ ಇಂಡಿಯಾ ಅಮೋಘ ಗೆಲುವಾಗಿತ್ತು. ಇದೀಗ 434 ರನ್​ಗಳ ಭರ್ಜರಿ ಜಯದೊಂದಿಗೆ ಟೀಮ್ ಇಂಡಿಯಾ ಹಳೆಯ ದಾಖಲೆಯನ್ನು ಅಳಿಸಿ ಹಾಕಿದೆ. ಇದಾಗ್ಯೂ ಇದು ಟೆಸ್ಟ್ ಕ್ರಿಕೆಟ್​ನ ಶ್ರೇಷ್ಠ ಗೆಲುವಲ್ಲ ಎಂಬುದು ವಿಶೇಷ.

ಅಮೋಘ ಗೆಲುವಿನ ಇತಿಹಾಸ:

  • ಟೆಸ್ಟ್ ಕ್ರಿಕೆಟ್​ ಇತಿಹಾಸದಲ್ಲೇ ಅತೀ ದೊಡ್ಡ ಗೆಲುವು ದಾಖಲಿಸಿದ ವಿಶ್ವ ದಾಖಲೆ ಇಂಗ್ಲೆಂಡ್ ತಂಡದ ಹೆಸರಿನಲ್ಲಿದೆ.
  • 1928 ರಲ್ಲಿ ಇಂಗ್ಲೆಂಡ್ ತಂಡವು ಆಸ್ಟ್ರೇಲಿಯಾವನ್ನು ಬರೋಬ್ಬರಿ 675 ರನ್​ಗಳಿಂದ ಸೋಲಿಸಿ ಈ ದಾಖಲೆ ಬರೆದಿದೆ.
  • ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್ ತಂಡವು ಪ್ರಥಮ ಇನಿಂಗ್ಸ್​ನಲ್ಲಿ 521 ರನ್​ ಕಲೆಹಾಕಿತ್ತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್​ ಆರಂಭಿಸಿದ ಆಸ್ಟ್ರೇಲಿಯಾ ಕೇವಲ 122 ರನ್​ಗಳಿಗೆ ಆಲೌಟ್ ಆಗಿತ್ತು.
  • ಇದರ ಬೆನ್ನಲ್ಲೇ ದ್ವಿತೀಯ ಇನಿಂಗ್ಸ್ ಶುರು ಮಾಡಿದ ಇಂಗ್ಲೆಂಡ್ ತಂಡವು 8 ವಿಕೆಟ್ ನಷ್ಟಕ್ಕೆ 342 ರನ್​ ಕಲೆಹಾಕಿ ಡಿಕ್ಲೇರ್ ಘೋಷಿಸಿತು.
  • ಮೊದಲ ಇನಿಂಗ್ಸ್​ನ 399 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ನಲ್ಲಿ 742 ರನ್​ಗಳ ಗುರಿ ಪಡೆದ ಆಸ್ಟ್ರೇಲಿಯಾ ತಂಡವು ಕೇವಲ 66 ರನ್​ಗಳಿಗೆ ಆಲೌಟ್ ಆಯಿತು. ಈ ಮೂಲಕ ಇಂಗ್ಲೆಂಡ್ ತಂಡ 675 ರನ್​ಗಳ ಭರ್ಜರಿ ಜಯ ಸಾಧಿಸಿ ಹೊಸ ಇತಿಹಾಸ ಬರೆಯಿತು.
  • 96 ವರ್ಷಗಳ ಹಿಂದೆ ಬರೆಯಲಾಗಿದ್ದ 675 ರನ್​ಗಳ ಅಮೋಘ ಗೆಲುವಿನ ಈ ವಿಶ್ವ ದಾಖಲೆ ಇಂದಿಗೂ ಅಚ್ಚಳಿಯದೇ ಉಳಿದಿರುವುದು ವಿಶೇಷ.

ಟೆಸ್ಟ್ ಕ್ರಿಕೆಟ್​ನ ಅತೀ ದೊಡ್ಡ ಗೆಲುವುಗಳು:

  1. ಇಂಗ್ಲೆಂಡ್: ಆಸ್ಟ್ರೇಲಿಯಾ ವಿರುದ್ಧ 675 ರನ್​ಗಳ ಭರ್ಜರಿ ಜಯ
  2. ಆಸ್ಟ್ರೇಲಿಯಾ:ಇಂಗ್ಲೆಂಡ್ ವಿರುದ್ಧ 562 ರನ್​ಗಳ ಅಮೋಘ ಗೆಲುವು
  3. ಬಾಂಗ್ಲಾದೇಶ್: ಅಫ್ಘಾನಿಸ್ತಾನ್ ವಿರುದ್ಧ 546 ರನ್​ಗಳ ಜಯ
  4. ಆಸ್ಟ್ರೇಲಿಯಾ: ಸೌತ್ ಆಫ್ರಿಕಾ ವಿರುದ್ಧ 530 ರನ್​ಗಳ ಜಯ
  5. ಸೌತ್ ಆಫ್ರಿಕಾ: ಆಸ್ಟ್ರೇಲಿಯಾ ವಿರುದ್ಧ 492 ರನ್​ಗಳ ಭರ್ಜರಿ ಜಯ
  6. ಆಸ್ಟ್ರೇಲಿಯಾ:ಪಾಕಿಸ್ತಾನ್ ವಿರುದ್ಧ 491 ರನ್​ಗಳ ಭರ್ಜರಿ ಜಯ
  7. ಶ್ರೀಲಂಕಾ: ಬಾಂಗ್ಲಾದೇಶ್ ವಿರುದ್ಧ 465 ರನ್​ಗಳ ಭರ್ಜರಿ ಜಯ
  8. ಭಾರತ:ಇಂಗ್ಲೆಂಡ್ ವಿರುದ್ಧ 434 ರನ್​ಗಳ ಭರ್ಜರಿ ಜಯ

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *