Gold and silver Rates Today: ದೇಶದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಮಾತ್ರ ಹೆಚ್ಚಳ ಕಂಡಿದ್ದು ಬಿಟ್ಟರೆ, 22 ಕ್ಯಾರೆಟ್ ಬಂಗಾರದ ಬೆಲೆ ಯಥಾಸ್ಥಿತಿಯಲ್ಲಿದೆ. ಇನ್ನು ಅಮೆರಿಕದಲ್ಲಿ ಚಿನ್ನ ಬೆಲೆ ಏರಿದರೆ, ದುಬೈನಲ್ಲಿ ಕಡಿಮೆ ಆಗಿದೆ.

Gold and silver Rates Today: ಕಳೆದ ಕೆಲ ದಿನಗಳಿಂದ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡುಬರುತ್ತಿತ್ತು. ಆದರೆ ಇಂದು ಚಿನ್ನದ ಬೆಲೆ ಯಥಾಸ್ಥಿತಿಯಲ್ಲಿದ್ದರೆ, ಬೆಳ್ಳಿ ಬೆಲೆ ಕೊಂಚ ಇಳಿಕೆ ಕಂಡಿದೆ.
ದೇಶದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಮಾತ್ರ ಹೆಚ್ಚಳ ಕಂಡಿದ್ದು ಬಿಟ್ಟರೆ, 22 ಕ್ಯಾರೆಟ್ ಬಂಗಾರದ ಬೆಲೆ ಯಥಾಸ್ಥಿತಿಯಲ್ಲಿದೆ. ಇನ್ನು ಅಮೆರಿಕದಲ್ಲಿ ಚಿನ್ನ ಬೆಲೆ ಏರಿದರೆ, ದುಬೈನಲ್ಲಿ ಕಡಿಮೆ ಆಗಿದೆ. ಅಮೆರಿಕದ ಫೆಡರಲ್ ಬ್ಯಾಂಕ್ ನೂತನ ನಿರ್ಧಾರ ಪ್ರಕಟವಾಗುವವರೆಗೆ ದೇಶದಲ್ಲಿ ಚಿನ್ನದ ಬೆಲೆ ಇದೇ ರೀತಿ ಮುಂದುವರೆಯುವ ಸಾಧ್ಯತೆ ಇದೆ.
ಇನ್ನೊಂದೆಡೆ ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗುವ ಸಾಧ್ಯತೆ ಇದೆ. ತಜ್ಞರ ಪ್ರಕಾರ ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು. ಹೀಗಾಗಿ ಗ್ರಾಹಕರಿಗೆ ಚಿನ್ನ ಖರೀದಿಸಲು ಇದುವೇ ಸೂಕ್ತ ಸಮಯವಾಗಿದೆ.
ಸದ್ಯ ಭಾರತದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 55,200 ರುಪಾಯಿ ಇದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ 60,230 ರೂ. ಆಗಿದೆ. ಮತ್ತೊಂದೆಡೆ 100 ಗ್ರಾಂ ಬೆಳ್ಳಿ ಬೆಲೆ 7,450 ರುಪಾಯಿ ಇದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 55,200 ರುಪಾಯಿ ಆಗಿದ್ದರೆ, ಬೆಳ್ಳಿ ಬೆಲೆ 100 ಗ್ರಾಂಗೆ 7,425 ರುಪಾಯಿಯಲ್ಲಿ ಇದೆ.
ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ (10 ಗ್ರಾಂ):
- 22 ಕ್ಯಾರೆಟ್ ಚಿನ್ನದ ಬೆಲೆ: 55,200 ರೂ
- 24 ಕ್ಯಾರೆಟ್ ಚಿನ್ನದ ಬೆಲೆ: 60,230 ರೂ
- ಬೆಳ್ಳಿ ಬೆಲೆ: 745 ರೂ
ಬೆಂಗಳೂರಿನಲ್ಲಿ ಚಿನ್ನ-ಬೆಳ್ಳಿ ದರ (10 ಗ್ರಾಂ):
- 22 ಕ್ಯಾರೆಟ್ ಚಿನ್ನದ ಬೆಲೆ: 55,200 ರೂ
- 24 ಕ್ಯಾರೆಟ್ ಚಿನ್ನದ ಬೆಲೆ: 60,220 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 742.5 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 55,200 ರೂ
- ಚೆನ್ನೈ: 55,500 ರೂ
- ಮುಂಬೈ: 55,200 ರೂ
- ದೆಹಲಿ: 55,350 ರೂ
- ಕೇರಳ: 55,200 ರೂ
- ಭುವನೇಶ್ವರ್: 55,200 ರೂ
ವಿದೇಶಗಳಲ್ಲಿ ಚಿನ್ನದ ಬೆಲೆ (22 ಕ್ಯಾರೆಟ್-10 ಗ್ರಾಂ):
- ಮಲೇಷ್ಯಾ: 2,850 ರಿಂಗಿಟ್ (50,493 ರುಪಾಯಿ)
- ದುಬೈ: 2162.50 ಡಿರಾಮ್ (48,914 ರುಪಾಯಿ)
- ಅಮೆರಿಕ: 595 ಡಾಲರ್ (49,437 ರುಪಾಯಿ)
- ಸಿಂಗಾಪುರ: 820 ಸಿಂಗಾಪುರ್ ಡಾಲರ್ (49,999 ರುಪಾಯಿ)
- ಕತಾರ್: 2,235 ಕತಾರಿ ರಿಯಾಲ್ (51,007 ರೂ)
- ಓಮನ್: 236 ಒಮಾನಿ ರಿಯಾಲ್ (51,000 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 7,425 ರೂ
- ಚೆನ್ನೈ: 7,800 ರೂ
- ಮುಂಬೈ: 7,450 ರೂ
- ದೆಹಲಿ: 7,450 ರೂ
- ಕೇರಳ: 7,800 ರೂ
- ಭುವನೇಶ್ವರ್: 7,800 ರೂ
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾದುದಲ್ಲ. ಬೆಳಗ್ಗೆ 8.30ರ ಸಮಯದಲ್ಲಿ ಇದ್ದ ಬೆಲೆಯನ್ನು ನೀಡಲಾಗಿದೆ. ಜೊತೆಗೆ ಈ ದರದ ಮೇಲೆ ಜಿಎಸ್’ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು. ಸಮಗ್ರ ಸುದ್ದಿ ಖಚಿತಪಡಿಸುವುದಿಲ್ಲ)
ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk
ನಮ್ಮ Facebook page: https://www.facebook.com/samagrasudii