ಇದೇ ನೋಡಿ ವಿಶ್ವದ ಅತಿ ದೊಡ್ಡ ಕೃಷ್ಣ ದೇವಾಲಯ

World’s Largest Krishna Mandir: ಇಂಟರ್‌ನ್ಯಾಶನಲ್ ಸೊಸೈಟಿ ಆಫ್ ಕೃಷ್ಣ ಕಾನ್ಷಿಯಸ್‌ನೆಸ್ ಅಂದರೆ ಇಸ್ಕಾನ್ (ISKON) 12 ಎಕರೆ ಜಾಗದಲ್ಲಿ ವಿಶ್ವದ ಅತಿದೊಡ್ಡ ಕೃಷ್ಣ ದೇವಾಲಯವನ್ನು ನಿರ್ಮಿಸಿದೆ. 

ಭಾರತದಲ್ಲಿ ಸುಂದರ ಮನಸೂರೆಗೊಳ್ಳುವ ಕೃಷ್ಣ ಮಂದಿರ ಎಂದರೆ ಮೊದಲು ನೆನಪಾಗುವುದು ಇಸ್ಕಾನ್ ಮಂದಿರ. ಇಂಟರ್‌ನ್ಯಾಶನಲ್ ಸೊಸೈಟಿ ಆಫ್ ಕೃಷ್ಣ ಕಾನ್ಷಿಯಸ್‌ನೆಸ್ ಅಂದರೆ ಇಸ್ಕಾನ್ (ISKON) 12 ಎಕರೆ ಜಾಗದಲ್ಲಿ ವಿಶ್ವದ ಅತಿದೊಡ್ಡ ಕೃಷ್ಣ ದೇವಾಲಯವನ್ನು ನಿರ್ಮಿಸಿದೆ. ಇದು ಕೋಲ್ಕತ್ತಾದಿಂದ 130 ಕಿ.ಮೀ ದೂರದಲ್ಲಿರುವ ನಾಡಿಯಾ ಜಿಲ್ಲೆಯ ಮಾಯಾಪುರದಲ್ಲಿ ನಿರ್ಮಾಣಗೊಂಡಿದೆ. ಹಲವು ವರ್ಷಗಳಿಂದ ಈ ದೇವಾಲಯವನ್ನು ನಿರ್ಮಾಣ ಮಾಡಲಾಗಿದ್ದು ಈ ವರ್ಷ ಅಂದರೆ 2023ರಲ್ಲಿ ಈ ದೇವಾಲಯ ಭಕ್ತರಿಗಾಗಿ ತೆರೆಯಲಿದೆ. 

6 ಸಾವಿರ ಚದರ ಅಡಿಗಿಂತಲೂ ಹೆಚ್ಚು ವಿಸ್ತೀರ್ಣದಲ್ಲಿ ನಿರ್ಮಿಸಲಾಗಿರುವ ಈ ದೇವಾಲಯದ ಎತ್ತರ 350 ಅಡಿ. 7 ಮಹಡಿಗಳ ಈ ದೇವಾಲಯವು ಯುಟಿಲಿಟಿ ಫ್ಲೋರ್, ಟೆಂಪಲ್ ಫ್ಲೋರ್, ಅರ್ಚಕರ ಫ್ಲೋರ್ ಮತ್ತು ಮ್ಯೂಸಿಯಂ ಅನ್ನು ಕೂಡ ಒಳಗೊಂಡಿದೆ. ಪ್ರಸಿದ್ಧ US ಆಟೋಮೊಬೈಲ್ ಕಂಪನಿ ಫೋರ್ಟೆಯ ಸಂಸ್ಥಾಪಕ ಆಲ್ಫ್ರೆಡ್ ಫೋರ್ಡ್ ಈ ದೇವಾಲಯದ ಅಧ್ಯಕ್ಷರಾಗಿದ್ದಾರೆ.

ಮಾಯಾಪುರದ ಈ ಇಸ್ಕಾನ್ ದೇವಾಲಯದ ಮತ್ತೊಂದು ಪ್ರಮುಖ ವೈಶಿಷ್ಟ್ಯವೆಂದರೆ ಇದು ವಿಶ್ವದ ಅತಿದೊಡ್ಡ ಅರ್ಚಕ ಮಹಡಿಯನ್ನು ಹೊಂದಿದೆ. ಸುಮಾರು  2.5 ಎಕರೆಗಳಲ್ಲಿ ನಿರ್ಮಿಸಲಾಗಿರುವ ಈ ಅರ್ಚಕರ ಮಹಡಿಯಲ್ಲಿ 1.5 ಎಕರೆಯಲ್ಲಿ ಕೀರ್ತನ ಸಭಾಂಗಣವನ್ನು ನಿರ್ಮಿಸಲಾಗಿದೆ. ಲಭ್ಯವಿರುವ ಮಾಹಿತಿಗಳ ಪ್ರಕಾರ, ಸುಮಾರು 10 ಸಾವಿರ ಭಕ್ತರು ಏಕಕಾಲದಲ್ಲಿ ಇಲ್ಲಿ ಕೀರ್ತನೆಗಾಗಿ ಕುಳಿತುಕೊಳ್ಳಬಹುದು ಎಂದು ತಿಳಿದುಬಂದಿದೆ. 

ಈ ವಿಶ್ವದ ಪ್ರಸಿದ್ಧ ಕೃಷ್ಣ ದೇವಾಲಯದ ಒಳಾಂಗಣ ವಿನ್ಯಾಸವನ್ನು ಪಾಶ್ಚಾತ್ಯ ಶೈಲಿಯಲ್ಲಿ ನಿರ್ಮಿಸಲಾಗಿದ್ದರೆ ಇಲ್ಲಿನ ವಾತಾವರಣ ವೈದಿಕ ಸಂಸ್ಕೃತಿಯ ಭಾವನೆಯನ್ನು ನೀಡುತ್ತದೆ. ಇದು ಎಲ್ಲರನ್ನೂ ದೇವಾಲಯದತ್ತ ಆಕರ್ಷಿಸುತ್ತದೆ. 

ವಿಶ್ವದ ಅತಿ ದೊಡ್ಡ ಕೃಷ್ಣ ದೇವಾಲಯದ ಮತ್ತೊಂದು ವಿಶೇಷತೆ ಎಂದರೆ ಈ ದೇವಾಲಯದಲ್ಲಿ ಬೋಧನಾ ಮಂದಿರವೂ ಇದ್ದು, ಇಲ್ಲಿ ಭಗವತ್ ಗೀತೆಯ ಕುರಿತು ಚರ್ಚೆಯೊಂದಿಗೆ, ತತ್ವಶಾಸ್ತ್ರದ ವಿವಿಧ ವಿಷಯಗಳನ್ನು ಚರ್ಚಿಸಲಾಗುವುದು. ಈ ದೇವಾಲಯವನ್ನು 800 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಸಮಗ್ರ ಸುದ್ದಿ ಇದನ್ನು ಖಚಿತಪಡಿಸುವುದಿಲ್ಲ. 

ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk

ನಮ್ಮ Facebook page: https://www.facebook.com/samagrasudii

Source : https://zeenews.india.com/kannada/photo-gallery/biggest-krishna-temple-in-the-world-here-is-its-speciality-156147/%E0%B2%A6%E0%B3%87%E0%B2%B5%E0%B2%BE%E0%B2%B2%E0%B2%AF-%E0%B2%A8%E0%B2%BF%E0%B2%B0%E0%B3%8D%E0%B2%AE%E0%B2%BE%E0%B2%A3%E0%B2%A6-%E0%B2%B5%E0%B3%86%E0%B2%9A%E0%B3%8D%E0%B2%9A-156148

Leave a Reply

Your email address will not be published. Required fields are marked *