IPL 2025, RCB vs PBKS: ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಪಂಜಾಬ್! ಫೈನಲ್​ನಲ್ಲಿ ಇದೇ ಮೊದಲ ಬಾರಿಗೆ ಆರ್​ಸಿಬಿ ಬ್ಯಾಟಿಂಗ್.

ಪಂಜಾಬ್​ ಕಿಂಗ್ಸ್ ಹಾಗೂ ಆರ್​ಸಿಬಿ ನಡುವಿನ ಹೈವೋಲ್ಟೇಜ್ ಫೈನಲ್ ಪಂದ್ಯ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈ ಪಂದ್ಯ ಹೊಸ ಚಾಂಪಿಯನ್​​ ಯಾರೆಂಬುದನ್ನ ನಿರ್ಧರಿಸಿಲಿದೆ. ಈ ಎರಡು ತಂಡಗಳು ಇದುವರೆಗೆ ಒಮ್ಮೆಯೂ ಚಾಂಪಿಯನ್ ಆಗಿಲ್ಲ. ಹಾಗಾಗಿ ಎರಡೂ ತಂಡಗಳ ಅಭಿಮಾನಿಗಳು ಕೂತೂಹಲದಿಂದ ಎದುರು ನೋಡುತ್ತಿವೆ.

ಇಂಡಿಯನ್ ಪ್ರೀಮಿಯರ್ ಲೀಗ್ 2025ರ  ಫೈನಲ್​​ (IPL 2025 Final) ಪಂದ್ಯ ಆರ್​ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ನಡೆವೆ ನಡೆಯುತ್ತಿದ್ದು, ಟಾಸ್ ಗೆದ್ದ ಪಂಜಾಬ್​ ಕಿಂಗ್ಸ್​ (Panjab Kings) ತಂಡದ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಈ ಪಂದ್ಯ ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಮೈದಾನವಾಗಿ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಆರ್​ಸಿಬಿ 9 ವರ್ಷಗಳ ನಂತರ ಫೈನಲ್ ಪ್ರವೇಶಿಸಿದ್ದರೆ, ಪಂಜಾಬ್ 11 ವರ್ಷಗಳ ಬಳಿಕ ಫೈನಲ್ ಪ್ರವೇಶಿಸಿದೆ. ಯಾವುದೇ ತಂಡ ಗೆದ್ದರು ಅವರಿಗೆ ಚೊಚ್ಚಲ ಪ್ರಶಸ್ತಿ ಇದಾಗಲಿದೆ. ಎರಡು ತಂಡಗಳು ಲೀಗ್​​ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದು, ಫೈನಲ್​​ನಲ್ಲಿ ವಿಜಯಲಕ್ಷ್ಮಿ ಯಾರ ಪಾಲಾಗಲಿದೆ ಎಂದು ಕಾದು ನೋಡಬೇಕಿದೆ.

ಲೀಗ್​​ನಲ್ಲಿ ಎರಡೂ ತಂಡಗಳು ತಲಾ 9 ಪಂದ್ಯಗಳಲ್ಲಿ ಗೆದ್ದು 19 ಅಂಕಗಳನ್ನು ಗಳಿಸಿದ್ದವು. ಆದರೆ ಪಂಜಾಬ್ ಅತ್ಯುತ್ತಮ ನೆಟ್​ರನ್​ರೇಟ್​ನೊಂದಿಗೆ ಅಗ್ರಸ್ಥಾನಕ್ಕೇರಿತ್ತು. ಆದರೆ ಕ್ವಾಲಿಫೈಯರ್ 2ರಲ್ಲಿ ಆರ್​ಸಿಬಿ ಪಂಜಾಬ್​ ಕಿಂಗ್ಸ್ ವಿರುದ್ಧ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಡಾಮಿನೇಟ್ ಪ್ರದರ್ಶನ ತೋರಿ ಗೆಲುವು ಸಾಧಿಸಿತ್ತು. ಹಾಗಾಗಿ ಈ ಪಂದ್ಯದಲ್ಲೂ ಅದೇ ಪ್ರದರ್ಶನವನ್ನು ಮುಂದುವರಿಸಿ ಚಾಂಪಿಯನ್ ಆಗಿದೆ.

ಆರ್‌ಸಿಬಿ vs ಪಿಬಿಕೆಎಸ್ ಹೆಡ್​ ಟು ಹೆಡ್ ದಾಖಲೆ

ಐಪಿಎಲ್ ಇತಿಹಾಸದಲ್ಲಿ ಮುಖಾಮುಖಿ ದಾಖಲೆಯಲ್ಲಿ ಎರಡು ತಂಡಗಳು ಸಮಾನವಾಗಿದೆ. ಇಲ್ಲಿಯವರೆಗೆ ಎರಡೂ ತಂಡಗಳ ನಡುವೆ 36 ಪಂದ್ಯಗಳು ನಡೆದಿದ್ದು, ಎರಡೂ ತಂಡಗಳು ತಲಾ 18 ಪಂದ್ಯಗಳನ್ನು ಗೆದ್ದಿವೆ. ಕಳೆದ ಐದು ಪಂದ್ಯಗಳ ಬಗ್ಗೆ ಹೇಳುವುದಾದರೆ, ಆರ್‌ಸಿಬಿ ಇಲ್ಲಿ ಪ್ರಾಬಲ್ಯ ಸಾಧಿಸಿದೆ. ಆರ್‌ಸಿಬಿ 5 ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದಿದೆ. ಈ ಋತುವಿನಲ್ಲಿ 2-1 ರಲ್ಲಿ ಮುನ್ನಡೆ ಸಾಧಿಸಿದೆ.

ಆರ್​ಸಿಬಿ ಪ್ಲೇಯಿಂಗ್ ಇಲೆವೆನ್

ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಮಯಾಂಕ್ ಅಗರ್ವಾಲ್ , ರಜತ್ ಪಾಟೀದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರೊಮಾರಿಯೊ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಲ್, ಜೋಶ್ ಹ್ಯಾಜಲ್‌ವುಡ್

ಪಿಬಿಕೆಎಸ್ ಪ್ಲೇಯಿಂಗ್ ಇಲೆವೆನ್

ಪ್ರಭ್‌ಸಿಮ್ರನ್ ಸಿಂಗ್, ಪ್ರಿಯಾಂಶ್ ಆರ್ಯ, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಶ್ರೇಯಸ್ ಐಯರ್ (ನಾಯಕ), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೋಯಿನಿಸ್, ಅಜಮತುಲ್ಲಾ ಒಮರ್‌ಜಾಯ್, ಕೈಲ್ ಜೇಮಿಸನ್, ಅರ್ಶದೀಪ್ ಸಿಂಗ್,  ಯುಜ್ವೇಂದ್ರ ಚಹಲ್, ವಿಜಯಕುಮಾರ್ ವೈಶಾಕ್

ಪಿಬಿಕೆಎಸ್ ಪ್ಲೇಯಿಂಗ್ ಇಲೆವೆನ್

ಪ್ರಭ್‌ಸಿಮ್ರನ್ ಸಿಂಗ್, ಪ್ರಿಯಾಂಶ್ ಆರ್ಯ, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಶ್ರೇಯಸ್ ಐಯರ್ (ನಾಯಕ), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೋಯಿನಿಸ್, ಅಜಮತುಲ್ಲಾ ಒಮರ್‌ಜಾಯ್, ಕೈಲ್ ಜೇಮಿಸನ್, ಅರ್ಶದೀಪ್ ಸಿಂಗ್,  ಯುಜ್ವೇಂದ್ರ ಚಹಲ್, ವಿಜಯಕುಮಾರ್ ವೈಶಾಕ್

ಟಾಪ್ ಪರ್ಫಾರ್ಮರ್

ಆರ್​ಸಿಬಿ-

  1. ವಿರಾಟ್ ಕೊಹ್ಲಿ- 14 ಪಂದ್ಯ 614 ರನ್, 8 ಅರ್ಧಶತಕ
  2. ಫಿಲ್ ಸಾಲ್ಟ್​- 12 ಪಂದ್ಯ 387 ರನ್, 4 ಅರ್ಧಶತಕ
  3. ರಜತ್ ಪಾಟೀದಾರ್- 14 ಪಂದ್ಯ, 286 ರನ್, 2 ಅರ್ಧಶತಕ
  4. ಜೋಶ್ ಹ್ಯಾಜಲ್​ವುಡ್- 11 ಪಂದ್ಯ, 21 ವಿಕೆಟ್, ಬೆಸ್ಟ್ 33ಕ್ಕೆ4
  5. ಕೃನಾಲ್ ಪಾಂಡ್ಯ- 14 ಪಂದ್ಯ, 15 ವಿಕೆಟ್, ಬೆಸ್ಟ್ 45ಕ್ಕೆ4
  6. ಭುವನೇಶ್ವರ್ ಕುಮಾರ್- 13 ಪಂದ್ಯ, 15 ವಿಕೆಟ್, 33ಕ್ಕೆ3

ಪಂಜಾಬ್ ಕಿಂಗ್ಸ್

  1. ಶ್ರೇಯಸ್ ಅಯ್ಯರ್- 16 ಪಂದ್ಯ, 603 ರನ್, 6 ಅರ್ಧಶತಕ
  2. ಪ್ರಭಸಿಮ್ರನ್ ಸಿಂಗ್ – 16 ಪಂದ್ಯ 523 ರನ್, 4 ಅರ್ಧಶತ
  3. ಪ್ರಿಯಾಂಶ್ ಆರ್ಯ- 16 ಪಂದ್ಯ 451 ರನ್, 1 ಶತಕ, 2 ಅರ್ಧಶತಕ
  4. ಅರ್ಷದೀಪ್ ಸಿಂಗ್ 16 ಪಂದ್ಯ, 18 ವಿಕೆಟ್, ಬೆಸ್ಟ್ 16ಕ್ಕೆ3
  5. ಮಾರ್ಕೊ ಜಾನ್ಸನ್, 14 ಪಂದ್ಯ, 16 ವಿಕೆಟ್, ಬೆಸ್ಟ್ 17ಕ್ಕೆ3
  6. ಯುಜ್ವೇಂದ್ರ ಚಹಲ್,13 ಪಂದ್ಯ 15 ವಿಕೆಟ್, ಬೆಸ್ಟ್ 28ಕ್ಕೆ4

News 18 Kannada

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1




















Leave a Reply

Your email address will not be published. Required fields are marked *