ವೇತನ ಹೆಚ್ಚಳದ ಸಂತಸದಲ್ಲಿದ್ದ ಸರ್ಕಾರಿ ನೌಕರರಿಗೆ ಶಾಕ್ ! ಸ್ಯಾಲರಿ ಹೆಚ್ಚಳ ಬಗ್ಗೆ ಸರ್ಕಾರದ ನಿರ್ಧಾರ ಇದು

CPI-IWಯನ್ನು ಸರ್ಕಾರ ಜುಲೈ 31, 2023 ರಂದು ಬಿಡುಗಡೆಯಾಗಿದೆ.  ಆದರೆ ಈ ಬಾರಿ ನಿರೀಕ್ಷಿಸಿದಷ್ಟು ತುಟ್ಟಿ ಭತ್ಯೆ ಹೆಚ್ಚಳವಾಗುವುದಿಲ್ಲ ಎನ್ನಲಾಗಿದೆ. 

ಬೆಂಗಳೂರು : ಕೇಂದ್ರ ಸರ್ಕಾರಿ ನೌಕರರು ವೇತನ ಹೆಚ್ಚಳದ ಸಂತಸದಲ್ಲಿದ್ದಾರೆ. ಸೆಪ್ಟೆಂಬರ್‌ನಲ್ಲಿ ಸರ್ಕಾರ ಹೆಚ್ಚಿಸಲಿರುವ ತುಟ್ಟಿಭತ್ಯೆ ಎಷ್ಟು ಎನ್ನುವ ಲೆಕ್ಕಾಚಾರ ಈಗಾಗಲೇ ನಡೆದಿದೆ. ವರದಿಯ ಪ್ರಕಾರ, ಈ ಬಾರಿ ಕೇಂದ್ರ ಸರ್ಕಾರವು ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು 3% ಹೆಚ್ಚಿಸಬಹುದು ಎನ್ನಲಾಗಿದೆ. ಅಂದರೆ, 4 ಶೇ. ತುಟ್ಟಿಭತ್ಯೆ ಹೆಚ್ಚಳದ ನಿರೀಕ್ಷೆಯಲ್ಲಿದ್ದ ನೌಕರರಿಗೆ ನಿರಾಸೆಯಾಗಿದೆ. 

ಶೇ .45ರಷ್ಟಾಗುವುದು ತುಟ್ಟಿಭತ್ಯೆ : 
ಒಂದು ಕೋಟಿಗೂ ಹೆಚ್ಚು ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಡಿಎ ಮತ್ತು ಡಿಯರ್‌ನೆಸ್ ರಿಲೀಫ್ (ಡಿಆರ್) ದರವನ್ನು ಶೇಕಡಾ 45 ಕ್ಕೆ ಹೆಚ್ಚಿಸುವ ಬಗ್ಗೆ ಕೇಂದ್ರ ಸರ್ಕಾರ ಮಾತುಕತೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಕಾರ್ಮಿಕ ಸಚಿವಾಲಯದ ವಿಂಗ್ ಲೇಬರ್ ಬ್ಯೂರೋ ಹೊರಡಿಸಿದ AICPI ಸೂಚ್ಯಂಕದ ಆಧಾರದ ಮೇಲೆ ನೌಕರರು ಮತ್ತು ಪಿಂಚಣಿದಾರರಿಗೆ DA/ DR ದರವನ್ನು ನಿಗದಿಪಡಿಸಲಾಗುತ್ತದೆ.

ದಶಮಾಂಶ ಬಿಂದುವನ್ನು ಪರಿಗಣಿಸದ ಸರ್ಕಾರ :  
CPI-IWಯನ್ನು ಸರ್ಕಾರ ಜುಲೈ 31, 2023 ರಂದು ಬಿಡುಗಡೆಯಾಗಿದೆ. ಈ ಬಗ್ಗೆ  ಮಾತನಾಡಿದ ಅಖಿಲ ಭಾರತ ರೈಲ್ವೇ ಮೆನ್ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಶಿವಗೋಪಾಲ್, ಈ ಬಾರಿ ತುಟ್ಟಿಭತ್ಯೆಯಲ್ಲಿ ಶೇ.4ರಷ್ಟು ಹೆಚ್ಚಳ ಮಾಡುವಂತೆ ಒತ್ತಾಯಿಸುತ್ತಿದ್ದೇವೆ. ಆದರೆ  ತುಟ್ಟಿಭತ್ಯೆ ಹೆಚ್ಚಳವು ಶೇಕಡಾ 3 ಕ್ಕಿಂತ ಸ್ವಲ್ಪ ಹೆಚ್ಚಾಗುವುದು. ಹಾಗಾಗಿ ದಶಮಾಂಶ ಬಿಂದುವನ್ನು ಸರ್ಕಾರ ಪರಿಗಣಿಸುತ್ತಿಲ್ಲ.  ಈ ಹಿನ್ನೆಲೆಯಲ್ಲಿ ಡಿಎ ಶೇ.3 ರಷ್ಟು ಮಾತ್ರ ಏರಿಕೆಯಾಗುವ ಸಾಧ್ಯತೆ ಹೆಚ್ಚು. ಶೇ.3 ರಷ್ಟು ತುಟ್ಟಿಭತ್ಯೆ ಹೆಚ್ಚಳವಾದರೆ ಡಿಎ ಶೇ.45ರಷ್ಟು ಆಗಲಿದೆ. 

ಈ ನಿಯಮವು ಜುಲೈ 1, 2023 ರಿಂದ ಜಾರಿಗೆ ಬರಲಿದೆ :
ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯು ಅದರ ಆದಾಯದ ಪರಿಣಾಮದೊಂದಿಗೆ ಡಿಎ ಹೆಚ್ಚಳಕ್ಕೆ ಪ್ರಸ್ತಾವನೆಯನ್ನು ಸಿದ್ಧಪಡಿಸುತ್ತದೆ.  ಇದಾದ ಬಳಿಕ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟದ ಮುಂದಿಟ್ಟು ಅನುಮೋದನೆ ಪಡೆಯಲಿದ್ದಾರೆ. DA/DRನಲ್ಲಿನ ಹೆಚ್ಚಳ ಜುಲೈ 1, 2023 ರಿಂದ ಜಾರಿಗೆ ಬರಲಿದೆ. ಪ್ರಸ್ತುತ ಕೇಂದ್ರ ಸರ್ಕಾರದ ಒಂದು ಕೋಟಿಗೂ ಹೆಚ್ಚು ಕೇಂದ್ರ ನೌಕರರು ಮತ್ತು ಪಿಂಚಣಿದಾರರಿದ್ದಾರೆ. ಅವರೆಲ್ಲರೂ ಮೂಲ ವೇತನ/ಪಿಂಚಣಿಯ 42% ದರದಲ್ಲಿ DA/DR ಪಡೆಯುತ್ತಿದ್ದಾರೆ.

ಕೊನೆಯ ಡಿಎ ಹೆಚ್ಚಳವನ್ನು ಮಾರ್ಚ್ 24, 2023 ರಂದು ಮಾಡಲಾಗಿದ್ದು, ಅದನ್ನು ಜನವರಿ 1, 2023 ರಿಂದ ಜಾರಿಗೆ ತರಲಾಯಿತು.  ಆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಡಿಎಯನ್ನು ಶೇ.4ರಷ್ಟು ಹೆಚ್ಚಿಸಿ  ಶೇ.42ರಷ್ಟು ಮಾಡಿತ್ತು. ಸರ್ಕಾರವು ಪ್ರತಿ ಆರು ತಿಂಗಳಿಗೊಮ್ಮೆ DA / DR ಅನ್ನು ಹೆಚ್ಚಿಸುತ್ತದೆ. ಈ ರೀತಿಯಾಗಿ, ತುಟ್ಟಿಭತ್ಯೆಯನ್ನು ಪ್ರತಿ ವರ್ಷ ಎರಡು ಬಾರಿ ಹೆಚ್ಚಿಸಲಾಗುತ್ತದೆ.

Source : https://zeenews.india.com/kannada/business/big-shock-to-govt-employees-govt-shocking-decission-on-salary-hike-150801

Leave a Reply

Your email address will not be published. Required fields are marked *