ವಾಟರ್​ ಬಾಟಲ್​ನಿಂದ ಸುಟ್ಟು ಕರಕಲಾಯ್ತು ಲಕ್ಷಾಂತರ ರೂ. ಬೆಲೆ ಬಾಳುವ ಕಾರು; ಕಾರಣ ಹೀಗಿದೆ.

ನವದೆಹಲಿ: ದಿನ ಕಳೆಧಂತೆ ದೇಶದಲ್ಲಿ ಮಳೆಯ ಜೊತೆಗೆ ತಾಪಮಾನ ಹೆಚ್ಚಳವಾಗುತ್ತಿದ್ದು, ಹವಾಮಾನ ಇಲಾಖೆಯು ಉತ್ತರಭಾರತದ ಹಲವು ರಾಜ್ಯಗಳಿಗೆ ಅಲರ್ಟ್​ ಘೋಷಿಸಿದೆ. ಇತ್ತ ತಾಪಮಾನ ಹೆಚ್ಚಳದಿಂದಾಗಿ ಅಗ್ನಿ ಅವಘಡಗಳು ಸಂಭವಿಸುತ್ತಿದ್ದು, ವಾಹನಗಳಿಗೆ ಫುಲ್​ ಟ್ಯಾಂಕ್​ ಮಾಡಿಸದಂತೆ ಎಚ್ಚರಿಕೆ ನೀಡಲಾಗಿದೆ. ಹೀಗಿರುವಾಗಲೇ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಕಾರೊಂದು ವಾಟರ್​ ಬಾಟಲ್​ನಿಂದ ಸುಟ್ಟು ಕರಕಲಾಗಿರುವ ಘಟನೆ ಬೆಳಕಿಗೆ ಬಂದಿದೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಈ ಘಟನೆ ನಡೆದಿದ್ದು, ಕಾರು ಹೊತ್ತಿ ಉರಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಆದರೆ, ಕಾರು ವಾಟರ್​ ಬಾಟಲ್​ನಿಂದ ಸುಟ್ಟು ಕರಕಲಾಯ್ತು ಎಂಬ ಸುದ್ದಿ ಕೇಳಿ ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅಧಿಕಾರಿಗಳು ನೀಡಿರುವ ವಿವರಣೆ ಹೀಗಿದೆ.

ಈ ಕುರಿತು ಮಾತನಾಡಿರುವ ಅಧಿಕಾರಿಯೊಬ್ಬರು, ಕಾರಿನ ಸೀಟ್​ ಮೇಲೆ ಇಡಲಾಗಿದ್ದ ಖಾಲಿ ನೀರಿನ ಬಾಟಲಿಗೆ ಸೂರ್ಯನ ಕಿರಣ ತಾಗಿ ಬೆಂಕಿ ಹೊತ್ತಿಕೊಂಡಿದೆ. ಕ್ಷಣಾರ್ಧದಲ್ಲೇ ಬೆಂಕಿ ಇಡೀ ಕಾರಿಗೆ ವ್ಯಾಪಿಸಿದ್ದು, ಸುಟ್ಟು ಕರಕಲಾಗಿದೆ. ಘಟನೆ ನಡೆದಾಗ ಕಾರಿನಲ್ಲಿ ಯಾರು ಇರಲಿಲ್ಲ ಎಂದು ತಿಳಿದು ಬಂದಿದೆ. ವಿಚಾರ ತಿಳಿದು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿಯನ್ನು ನಂದಿಸಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇತ್ತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಅಪ್ಲೋಡ್ ಆದ ಕೆಲವೇ ಕ್ಷಣಗಳಲ್ಲಿ ಐದು ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದೆ. ಈ ವಿಡಿಯೋ ಅನೇಕರಲ್ಲಿ ಜಾಗೃತಿ ಮೂಡಿಸುತ್ತಿದ್ದು, ಇನ್ನು ಮುಂದೆ ಕಾರಿನಲ್ಲಿ ವಾಟರ್​ ಬಾಟಲ್​ ಸೇರಿದಂತೆ ಕೆಲವು ವಸ್ತುಗಳನ್ನು ಇಡದಂತೆ ಎಚ್ಚರಿಕೆ ನೀಡಿದೆ.

Source : https://m.dailyhunt.in/news/india/kannada/vijayvani-epaper-vijaykan/vaatar+baatal+nindha+suttu+karakalaaytu+lakshaantara+ru+bele+baaluva+kaaru+kaarana+higide-newsid-n616901250?listname=topicsList&index=28&topicIndex=1&mode=pwa&action=click

Leave a Reply

Your email address will not be published. Required fields are marked *