Sridevi Statement on Divorce: ಶ್ರೀದೇವಿ ವಿದ್ಯಾಭ್ಯಾಸದ ನಿಮಿತ್ತ ವರ್ಷಗಳ ಹಿಂದೆ ಅಮೆರಿಕಾಗೆ ತೆರಳಿದ್ದಾರೆ ಎನ್ನಲಾಗಿದ್ದು, ಇದೇ ತಿಂಗಳು ವಿದೇಶದಿಂದ ವಾಪಸ್ ಬರಲಿದ್ದಾರೆ ಎಂದು ಮಾಹಿತಿ ಲಭಿಸಿದೆ. ಇನ್ನೊಂದೆಡೆ ಈ ವಿಚ್ಛೇದನ ಇಬ್ಬರ ಒಪ್ಪಿಗೆ ಮೇರೆಗೆ ಅಲ್ಲವೆಂದು ಹೇಳಲಾಗುತ್ತಿದೆ.
![](https://samagrasuddi.co.in/wp-content/uploads/2024/06/image-84.png)
- ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ವಿಚ್ಛೇದನ ಪಡೆದುಕೊಳ್ಳಲಿದ್ದಾರೆ
- ಶ್ರೀದೇವಿ ಸಂದೇಶ ಕಳುಹಿಸಿದ್ದು, ತಮ್ಮ ವಿಚ್ಛೇದನದ ಬಗ್ಗೆ ಹೀಗಂದಿದ್ದಾರೆ
- ಶ್ರೀದೇವಿ ವಿದ್ಯಾಭ್ಯಾಸದ ನಿಮಿತ್ತ ವರ್ಷಗಳ ಹಿಂದೆ ಅಮೆರಿಕಾಗೆ ತೆರಳಿದ್ದಾರೆ ಎನ್ನಲಾಗಿದೆ
Sridevi Statement on Divorce: ಚಂದನವನದ ದೊಡ್ಮನೆ ಕುಟುಂಬದಲ್ಲಿ ವಿಚ್ಛೇದನದ ಸುದ್ದಿ ಕೇಳಿಬಂದಿದ್ದು, ಸ್ಯಾಂಡಲ್ವುಡ್’ನಲ್ಲಿ ಭಾರೀ ಆಘಾತ ನೀಡಿದೆ. ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ವಿಚ್ಛೇದನ ಪಡೆದುಕೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಜೂನ್ 6ರಂದು ಫ್ಯಾಮಿಲಿ ಕೋರ್ಟ್’ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ ಎಂದು ಮಾಹಿತಿ ಲಭಿಸಿದೆ.
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಶ್ರೀದೇವಿ ಸಂದೇಶ ಕಳುಹಿಸಿದ್ದು, ತಮ್ಮ ವಿಚ್ಛೇದನದ ಬಗ್ಗೆ ಹೀಗಂದಿದ್ದಾರೆ; “ವಿಷಯ ಏನೆಂದು ಚಿತ್ರರಂಗ ಹಾಗೂ ಮಾಧ್ಯಮದಲ್ಲಿ ಅನೇಕರಿಗೆ ತಿಳಿದಿದೆ. ನಾನು ಈಗಾಗಲೇ ಲೀಗಲ್ ನೋಟಿಸ್’ಗೆ ಉತ್ತರಿಸಿದ್ದೇನೆ. ವಿಚ್ಛೇದನದ ಅರ್ಜಿ ಇನ್ನೂ ನನಗೆ ತಲುಪಿಲ್ಲ. ಸಿಕ್ಕಾಗ ನ್ಯಾಯಾಲಯಕ್ಕೆ ಉತ್ತರಿಸುತ್ತೇನೆ. ಸದ್ಯಕ್ಕೆ ನಾನು ಬೇರೇನೂ ಮಾತನಾಡುವ ಮಾನಸಿಕ ಪರಿಸ್ಥಿತಿಯಲ್ಲಿ ಇಲ್ಲ. ಈ ಸಮಯದಲ್ಲಿ ನೀವು ನನ್ನ ಮತ್ತು ನನ್ನ ಕುಟುಂಬದ ಗೌಪ್ಯತೆಯನ್ನು ಅರ್ಥಮಾಡಿಕೊಂಡು ಗೌರವಿಸುತ್ತೀರಿ ಎಂದು ಭಾವಿಸುತ್ತೇನೆ” ಎಂದಿದ್ದಾರೆ.
ಇನ್ನು ಶ್ರೀದೇವಿ ವಿದ್ಯಾಭ್ಯಾಸದ ನಿಮಿತ್ತ ವರ್ಷಗಳ ಹಿಂದೆ ಅಮೆರಿಕಾಗೆ ತೆರಳಿದ್ದಾರೆ ಎನ್ನಲಾಗಿದ್ದು, ಇದೇ ತಿಂಗಳು ವಿದೇಶದಿಂದ ವಾಪಸ್ ಬರಲಿದ್ದಾರೆ ಎಂದು ಮಾಹಿತಿ ಲಭಿಸಿದೆ. ಇನ್ನೊಂದೆಡೆ ಈ ವಿಚ್ಛೇದನ ಇಬ್ಬರ ಒಪ್ಪಿಗೆ ಮೇರೆಗೆ ಅಲ್ಲವೆಂದು ಹೇಳಲಾಗುತ್ತಿದೆ.
ಇನ್ನೊಂದೆಡೆ ಯುವ ಮತ್ತು ಶ್ರೀದೇವಿ ಡಿವೋರ್ಸ್ ಪಡೆಯುತ್ತಿರುವುದು ದೊಡ್ಮೆನಯಲ್ಲಿ ಯಾರಿಗೂ ಇಷ್ಟವಿಲ್ಲವಂತೆ. ರಾಘವೇಂದ್ರ ರಾಜ್ ಕುಮಾರ್ ಮತ್ತು ಮಂಗಳಮ್ಮ ಮಾತ್ರ ಒಪ್ಪಿಗೆ ನೀಡಿದ್ದು, ಅಶ್ವಿನಿ ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ಗೀತಾ ಸೇರಿದಂತೆ ಯಾರಿಗೂ ಇಷ್ಟವಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ.
Source : https://zeenews.india.com/kannada/entertainment/sridevi-broke-her-silence-about-the-divorce-216263