ಚಿತ್ರದುರ್ಗದಲ್ಲಿ ಕರ್ನಾಟಕ ಬಂದ್‍ ಹೀಗಿತ್ತು.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಮಾ. 22 ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ಮರಾಠಿ ಪುಂಡರು ನಡೆಸುತ್ತಿರುವ ದೌರ್ಬನ್ಯ ಖಂಡಿಸಿ ಹಾಗೂ ರಾಜ್ಯದ ಹಿತಾಸಕ್ತಿ ಸಂಬಂಧಿತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಗಳು ಇಂದು ಕರ್ನಾಟಕ ಬಂದ್‍ನ ಬದಲಾಗಿ ಪ್ರತಿಭಟನೆಯನ್ನು
ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.


ಹೆಚ್ ಶಿವರಾಮೇಗೌಡರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ರೂಪೇರ್ಶ ರಾಜಣ್ಣ ನೇತೃತ್ವದ ಯುವ ಕರ್ನಾಟಕ
ವೇದಿಕೆಯೂ ಇಂದು ನಗರದಲ್ಲಿ ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ಮರಾಠಿ ಪುಂಡರು ನಡೆಸುತ್ತಿರುವ ದೌರ್ಬನ್ಯ ಖಂಡಿಸಿ
ಪ್ರತಿಭಟನೆಯನ್ನು ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾಧ ಮಂಜುನಾಥ್ ಮೊದಲಿನಿಂದಲೂ ಬೆಳಗಾವಿಯಲ್ಲಿ
ಕನ್ನಡಿಗರ ಮೇಲೆ ಮರಾಠಿ ಪುಂಡರು ದೌರ್ಜನ್ಯ ನಡೆಸುತ್ತಿದ್ದಾರೆ. ಅಲ್ಲದೆ ಇತ್ತೀಚೆಗೆ ಬಸ್ ಚಾಲಕನ ಮೇಲೆ ಬಾಲಕಿ ಮೇಲಿನ
ಅತ್ಯಚಾರ ಸುಳ್ಳು ಕೇಸು ದಾಖಲು ಮಾಡಲಾಗಿತ್ತು, ಗ್ರಾಮ ಪಂಚಾಯಿತಿ ಪಿಡಿಓ ಮರಾಠಿಯಲ್ಲಿ ಮಾತನಾಡುವಂತೆ
ಪಂಚಾಯಿತಿಯಲ್ಲಿ ಗಲಾಟೆ ನಡೆಸಿರುವುದು ಸೇರಿದಂತೆ ಇನ್ನೂ ಸಾಕಷ್ಟು ದೌರ್ಜನ್ಯಗಳು ಕನ್ನಡಿಗರ ಮೇಲೆ ನಡೆಯುತ್ತಿವೆ. ಆದರೂ
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕನ್ನಡಿಗರ ರಕ್ಷಣೆಗೆ ಮುಂದಾಗಿಲ್ಲದಿರುವುದು ಕನ್ನಡಪರ ಸಂಘಟನೆಗಳ ಆಕ್ರೋಶ ವ್ಯಕ್ತಪಡಿಸಿ
ಆ ಭಾಗದ ಚುನಾಯುತ ಪ್ರತಿನಿಧಿಗಳು ಕನ್ನಡ ಭಾಷೆಯನ್ನು ರಕ್ಷಣೆ ಮಾಡುವಲ್ಲಿ ವಿಫಲರಾಗಿದ್ಧಾರೆ ಅವರು ತಮ್ಮ ಶಾಸಕ ಸ್ಥಾನಕ್ಕೆ
ರಾಜೀನಾಮೆಯನ್ನು ನೀಡುವಂತೆ ಒತ್ತಾಯಿಸಿದರು.
ಯುವ ಕರ್ನಾಟಕ ಜಿಲ್ಲಾಧ್ಯಕ್ಷ ರವಿಕುಮಾರ್ ನಾಯ್ಕ್ ಮಾತನಾಡಿ, ಕಳೆದ 1-2 ವರ್ಷಗಳಿಂದ ಕನ್ನಡಿಗರ ಮೇಲೆ ಹಲವಾರು
ದಾಳಿಗಳು ನಡೆಯುತ್ತಿರುತ್ತವೆ. ಜೊತೆಗೆ ಹೀಗೆ ಸುಮಾರು ತಿಂಗಳುಗಳಿಂದ ರಾಜ್ಯದ ಕೆಲವು ಕಡೆ ಪುಂಡರು ಪೊಲೀಸರ ಮೇಲೆ ಹಲ್ಲೆ,
ಕಲ್ಲು ತೂರಾಟ ಮಾಡಿದ್ದಾರೆ.ಹಾಗೂ ಚಿತ್ರದುರ್ಗದಲ್ಲಿಯೂ ಸಹ ಇಂತಹ ಪ್ರಕರಣಗಳು ನಡೆದಿರುತ್ತವೆ. ಇದನ್ನೆಲ್ಲಾ ನೋಡಿದರೆ
ಸರ್ಕಾರದ ಮೇಲೆ ಸಾರ್ವಜನಿಕರಿಗೆ ಬುದ್ದಿಜೀವಿಗಳಿಗೆ, ಸಾಹಿತಿಗಳಿಗೆ ಅನುಮಾನವಾಗಿರುತ್ತದೆ. ಒಂದೇ ಕೋಮಿನ ಓಲೈಕೆಗಾಗಿ
ರಾಜ್ಯ ಸರ್ಕಾರ ಬಾಯಿಮುಚ್ಚಿ ಕುಳಿತಿರುತ್ತದೆ ಎಂದು ಸಾರ್ವಜನಿಕ ವಲಯದಲ್ಲಿ ಎದ್ದುಕಾಣುತ್ತದೆ. ಇದರ ಪ್ರಯುಕ್ತ ನಮ್ಮ
ಸಂಘಟನೆಯು ಜನಪರವಾಗಿ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದು, ಕನ್ನಡಕ್ಕಾಗಿ, ಕನ್ನಡಿಗರಿಗಾಗಿ, ರೈತರಿಗಾಗಿ,
ಮಹಿಳೆಯರಿಗಾಗಿ, ನಾಡು ನುಡಿಗಾಗಿ ನಮ್ಮ ಸಂಘಟನೆಯು ಬದ್ಧವಾಗಿರುತ್ತದೆ. ಪ್ರಯುಕ್ತ ನಮ್ಮ ಸಂಘಟನೆಯು ಇಂತಹ
ಘಟನೆಗಳನ್ನು ಖಂಡಿಸುತ್ತದೆ ಎಂದಿದ್ದಾರೆ.
ಎಂ.ಇ.ಎಸ್. ಸಂಘಟನೆಯನ್ನು ಕರ್ನಾಟಕದಲ್ಲಿ ನಿಷೇಧಿಸಬೇಕು, ಮಹದಾಯಿ ಕಳಸ ಬಂಡೂರಿ ಯೋಜನೆಗೆ ನ್ಯಾಯ ಸಿಗಬೇಕು,
ಮೇಕೆದಾಟು ಯೋಜನೆಯನ್ನು ಕಾರ್ಯಗತಗೂಳಿಸಬೇಕು, ಕರ್ನಾಟಕದಲ್ಲಿ ಕನ್ನಡಿಗರ ಮಕ್ಕಳಿಗೆ ಉದ್ಯೋಗವಕಾಶಕ್ಕೆ ಮೊದಲ

ಆದ್ಯತೆ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಈ ಬೇಡಿಕೆಗಳನ್ನು ಈಡೇರಿಸಲು ಜಿಲ್ಲಾಧಿಕಾರಿಗಳ ಮುಖಾಂತರ
ಒತ್ತಾಯಪೂರ್ವಕವಾಗಿ ಪ್ರತಿಭಟನೆ ಮೂಲಕ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಕಾರ್ಯಾಧ್ಯಕ್ಷರಾದ ಓಬಣ್ಣ.ಎನ್. ಜಿಲ್ಲಾ ಖಂಜಾಚಿ ಯಶವಂತ,
ಸಂಚಾಲಕರಾದ ನಾಗರಾಜ್, ಜಿಲ್ಲಾ ಸಮಾಜಿಕ ಜಾಲತಾಣದ ಅಧ್ಯಕ್ಷರಾದ ವೆಂಕಟೇಶ್, ಜಿಲ್ಲಾ ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ
ರಘುನಾಯ್ಕ್, ರೈತ ಘಟಕದ ಅಧ್ಯಕ್ಷ ಸಿದ್ಧೇಶ್ ಯಾದವ್ ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *