ರಾಜ್ಯದಲ್ಲಿ ಈ ಬಾರಿ ಶೇಕಡಾ 51 ರಷ್ಟು ಮಳೆ ಕೊರತೆಯುಂಟಾಗಿದೆ. ವಾಡಿಕೆಯ ಪ್ರಕಾರ ಈ ಬಾರಿ 21.7 ಸೆಂ.ಮೀ ಮಳೆಯಾಗಬೇಕಿತ್ತು,ಆದರೆ ಜುಲೈ 2 ರ ವರೆಗೂ ರಾಜ್ಯದಲ್ಲಿ ಮಳೆ ಆಗಿದ್ದು ಶೇಕಡಾ 10.6 ಸೆಂ. ಮೀ ನಷ್ಟು ಎನ್ನಲಾಗಿದೆ.

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಶೇಕಡಾ 51 ರಷ್ಟು ಮಳೆ ಕೊರತೆಯುಂಟಾಗಿದೆ.ವಾಡಿಕೆಯ ಪ್ರಕಾರ ಈ ಬಾರಿ 21.7 ಸೆಂ.ಮೀ ಮಳೆಯಾಗಬೇಕಿತ್ತು,ಆದರೆ ಜುಲೈ 2 ರ ವರೆಗೂ ರಾಜ್ಯದಲ್ಲಿ ಮಳೆ ಆಗಿದ್ದು ಶೇಕಡಾ 10.6 ಸೆಂ. ಮೀ ನಷ್ಟು ಎನ್ನಲಾಗಿದೆ.
ಈಗ ರಾಜ್ಯದಲ್ಲಿ ಶೇ 51 ರಷ್ಟು ಮಳೆಯ ಕೊರತೆ ಉಂಟಾಗಿದೆ ಎಂದು ತಿಳಿದುಬಂದಿದೆ.
ಸಾಮಾನ್ಯವಾಗಿ ಕರಾವಳಿ ಭಾಗಗಳಲ್ಲಿ ಹೆಚ್ಚಿನ ಮಳೆ ಆಗುತ್ತಿತ್ತು,ಆದರೆ ಈ ಬಾರಿ ಈ ಪ್ರದೇಶಗಳಲ್ಲಿಯೂ ಕೂಡ ಮಳೆ ಕೊರತೆ ಉಂಟಾಗಿದೆ.ಒಟ್ಟಾಗಿ ಕರಾವಳಿ ಭಾಗದಲ್ಲಿ ಶೇ 26 ರಷ್ಟು ಮಳೆ ಕೊರತೆಯಾಗಿದೆ. ವಾಡಿಕೆ ಪ್ರಕಾರ 93.9 ಸೆಂ. ಮೀ ಮಳೆಯಾಗಬೇಕಿತ್ತು, ಆಗಿದ್ದು ಕೇವಲ 50.3 ಸೆಂ. ಮೀ ಮಾತ್ರ, ಇನ್ನೂ ಉತ್ತರ ನಾಡಿನಲ್ಲೂ ಶೇಕಡಾ 55.6 ರಷ್ಟು ಮಳೆ ಕೊರತೆ ಉಂಟಾಗಿದೆ. ಈ ಪ್ರದೇಶದಲ್ಲಿ 11.6 ಸೆಂ.ಮೀ ಮಳೆಯಾಗಬೇಕಿತ್ತು. ಆದರೆ ಜುಲೈ 2 ರವರೆಗೂ ಉತ್ತರ ಒಳನಾಡಿನಲ್ಲಿ ಮಳೆಯಾಗಿದ್ದು 5.6 ಸೆಂ. ಮೀಟರ್ ಮಾತ್ರ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ದಕ್ಷಿಣ ಒಳನಾಡಿನಲ್ಲಿ ಈ ಬಾರಿ ಶೇಕಡಾ 54 ರಷ್ಟು ಮಳೆ ಕೊರತೆ ಉಂಟಾಗಿದೆ. ಈ ಭಾಗದಲ್ಲಿ ವಾಡಿಕೆಯಂತೆ 16.9 ಸೆಂ.ಮೀ.ಮಳೆಯಾಗಬೇಕಿತ್ತು, ಆಗಿದ್ದು 7.4 ಸೆಂ. ಮೀ ಮಳೆ ಮಾತ್ರ.ಇನ್ನೂ ಬೆಂಗಳೂರು ನಗರದ ಮೇಲೂ ಈ ಬಾರಿ ವರುಣ ಮುನಿಸಿಕೊಂಡಿದ್ದಾನೆ.ಬೆಂಗಳೂರಿನಲ್ಲಿ ಶೇ 20 ರಷ್ಟು ಮಳೆ ಕೊರತೆ ಉಂಟಾಗಿದೆ.ವಾಡಿಕೆಯಂತೆ 9 ಸೆಂ.ಮೀ. ಮಳೆಯಾಗಬೇಕಿತ್ತು,ಜುಲೈ 2 ರ ವರೆಗೂ ಸಿಲಿಕಾನ್ ಸಿಟಿಯಲ್ಲಿ ಮಳೆಯಾಗಿದ್ದು 7.2 ಸೆಂ. ಮೀ. ಮಾತ್ರ ಎನ್ನಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಶೇಕಡಾ 14 ರಷ್ಟು ಮಳೆ ಕೊರತೆ ಉಂಟಾಗಿದೆ.ವಾಡಿಕೆಯಂತೆ 6.8 ಸೆಂ. ಮೀ ಮಳೆ ಆಗಬೇಕಿತ್ತು, ಆದರೆ ಆಗಿದ್ದು 5. ಸೆಂ.ಮೀ ಮಳೆ ಮಾತ್ರ. ಇನ್ನೂ ಚಿತ್ರದುರ್ಗ, ದಾವಣಗೆರೆ, ಚಾಮರಾಜನಗರ, ಕೋಲಾರ, ಮಂಡ್ಯ, ಮೈಸೂರು,ತುಮಕೂರು ಜಿಲ್ಲೆಗಳಲ್ಲಿ ವಾಡಿಕೆಯಂತೆ ಮಳೆಯಾಗಿದೆ. 9 ಜಿಲ್ಲೆಗಳಲ್ಲಿ ವಾಡಿಕೆ ಮಳೆಯಾಗಿದ್ರೆ, 15 ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.7 ಜಿಲ್ಲೆಗಳಲ್ಲಿ ಅತೀ ಕಡಿಮೆ ಪ್ರಮಾಣದಲ್ಲಿ ವರುಣನ ಸಿಂಚನವಾಗಿದೆ.ಬಾಗಲಕೋಟೆ, ಬೆಳಗಾವಿ, ಚಿಕ್ಕಮಗಳೂರು, ಶಿವಮೊಗ್ಗ,ಧಾರವಾಡ, ಹಾಸನ, ಕೊಡಗು ಜಿಲ್ಲೆಗಳಲ್ಲಿ ಅತೀ ಕಡಿಮೆ ಮಳೆಯಾಗಿದೆ.