ಚಿತ್ರದುರ್ಗ ಆ. 16
ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್
ಇಂದಿನ ದಿನಮಾನದಲ್ಲಿ ಆರೋಗ್ಯವೇ ಮಹಾ ಭಾಗ್ಯವಾಗಿದೆ, ಹಣ, ಆಸ್ತಿ, ಅಂತಸ್ಸು ಇದ್ದವರು ಶ್ರೀಮಂತರಲ್ಲ ಉತ್ತಮವಾದ ಆರೋಗ್ಯವನ್ನು ಹೊಂದಿರುವವನೆ ಇಂದಿನ ದಿನಮಾನದಲ್ಲಿ ಶ್ರೀಮಂತ ಎಂದು ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ತಿಳಿಸಿದ್ದಾರೆ.
ಚಿತ್ರದುರ್ಗ ತಾಲ್ಲೂಕು ನಿವೃತ್ತ ನೌಕರರ ಸಂಘ ಹಾಗೂ ಎಸ್.ಎಸ್.ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್ ಸಂಯುಕ್ತಾಶ್ರಯದಲ್ಲಿ ನಗರದ ಪ್ರವಾಸಿ ಮಂದಿರದ ಮುಂಭಾಗದಲ್ಲಿನ ಮದಕರಿ ನಾಯಕ ಫೌಡ್ರಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ 35 ರಿಂದ 38 ವರ್ಷಗಳ ಕಾಲ ನೀವುಗಳು ಸರ್ಕಾರಿ ನೌಕರರಾಗಿ ನಿಮ್ಮ ಆರೋಗ್ಯವನ್ನು ಸಹಾ ಲೆಕ್ಕಿಸದೆ ಕೆಲಸವನ್ನು ಮಾಡಿದ್ದಾರೆ ಈಗ ನಿವೃತ್ತಿಯಾದ ಮೇಲಾದರೂ ಸಹಾ ನಿಮ್ಮ ಆರೋಗ್ಯದ ಕಡೆಯಲ್ಲಿ ಗಮನ ನೀಡಿ, ನೀವುಗಳು ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೇ ಹೋಗುವುದಿಲ್ಲ ಎಂದು ನಿಮ್ಮ ಸಂಘದವರು ಆಸ್ಪತೆಯನ್ನೇ ನಿಮ್ಮ ಬಳಿಗೆ ತೆಗೆದುಕೊಂಡು ಬಂದಿದ್ದಾರೆ, ವಿದ್ಯಾರ್ಥಿ ಜೀವನದಲ್ಲಿ ಪರೀಕ್ಷೆಯ ನಂತರ ವಿಷಯಗಳಿಗೆ ಇಂತಿಷ್ಟು ಅಂಕಗಳನ್ನು ನೀಡಲಾಗುತ್ತಿತ್ತು ಆದರೆ ಈಗ ಇಲ್ಲಿನ ವೈದ್ಯರು ನಿಮ್ಮ ದೇಹವನ್ನು ತಪಾಸಣೆಯನ್ನು ಮಾಡಿ ನಿಮ್ಮ ದೇಹದ ಆರೋಗ್ಯದ ಸ್ಥಿತಿಗತಿಗಳ ಅಂಕಗಳನ್ನು ನೀಡುತ್ತಾರೆ. ಮುಂದಿನ ದಿನದಲ್ಲಿ ವೈದ್ಯರು ನೀಡಿದ ಸೂಚನೆಯಂತೆ ನಡೆದು ಕೊಳ್ಳಿ ಎಂದು ಕಿವಿ ಮಾತು ಹೇಳಿದರು.
ಇಂದಿನ ಒತ್ತಡದ ಬದುಕಿನಲ್ಲಿ ಮಾನಸಿಕ ಹಾಗೂ ದೈಹಿಕ ಆರೋಗ್ಯ ಮುಖ್ಯವಾಗಿದೆ. ಇವೆರಡರಲ್ಲಿ ಯಾವುದಾರೂ ಒಂದು ಕೈಕೊಟ್ಟರೆ ಮನುಷ್ಯ ಕುಸಿದು ಹೋಗುತ್ತಾನೆ. ಮಾನಸಿಕವಾಗಿ ಏನಾದರೂ ಚಿಂತೆ ಹಚ್ಚಿಕೊಂಡರೆ ಅದು ಚಿತೆಯ ಹತ್ತಿರ ಕರೆದುಕೊಂಡು ಹೋಗುತ್ತದೆ. ಚಿಂತೆಯನ್ನು ಹೊಂದಿದವರು ಚಿತೆಗೆ ಹತ್ತಿರವಾಗುತ್ತಾರೆ. ದೈಹಿಕವಾಗಿ ಆಲಸ್ಸಕ್ಕೆ ಒಳಗಾಗುತ್ತಾರೆ, ದೈಹಿಕವಾಗಿ ಸದೃಢವಾಗಿದ್ದೆರೆ ಮಾತ್ರ ಉತ್ತಮವಾದ ಆರೋಗ್ಯವನ್ನು ಹೊಂದಲು ಸಾಧ್ಯವಿದೆ. ಇತ್ತಿಚಿನ ದಿನಮಾನದಲ್ಲಿ ಯುವ ಜನಾಂಗದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಆಹಾರ, ಜೀವನ ಪದ್ದತಿ ಇಂದಿನ ಯುವ ಜನಾಂಗದ ಮೇಲೆ ದುಷ್ಪರಿಣಾಮ ಬೀರಿದೆ, ಇದಕ್ಕೆ ರಾಮ ಭಾಣ ಎಂದರೆ ನಮ್ಮನ್ನ ನಾವು ದೈಹಿಕವಾಗಿ ಆಹಾರ ಮಾನಸಿಕ ಆಲೋಚನೆಯನ್ನು ಸರಿದಾರಿಗೆ ತೆಗೆದುಕೊಂಡು ಹೋಗುವ ಆಲೋಚನೆಯನ್ನು ಮಾಡಬೇಕಿದೆ. ಇಂದಿನ ದಿನದಲ್ಲಿ ನಿವೃತ್ತಿಯಾಗಿ ಉತ್ತಮ ಆರೋಗ್ಯವನ್ನು ಹೊಂದಿರುವವರು ಯುವ ಜನಾಂಗಕ್ಕೆ ಸ್ಪೂರ್ತಿಯಾಗಿರಬೇಕಿದೆ ಇವರು ಎಲ್ಲರಿಗೂ ಸಹ ಮಾದರಿಯಾಗಿದ್ದಾರೆ ಎಂದರು.
ಈ ತಪಾಸಣೆ ಶಿಬಿರದಲ್ಲಿ ವೈದ್ಯರು ನೀಡುವ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ ನಿಮ್ಮ ನಿರ್ಧಾರವನ್ನು ತೆಗೆದುಕೊಳ್ಳ ಬೇಡಿ, ಇದರಿಂದ ಉತ್ತಮವಾದ ಆರೋಗ್ಯವನ್ನು ಹೊಂದಲು ಸಾಧ್ಯವಿದೆ, ನಿಮ್ಮ ದೇಹದ ಆರೋಗ್ಯದ ಜವಾಬ್ದಾರಿ ನಿಮ್ಮ ಕೈಯಲ್ಲಿಯೇ ಇದೆ. ಇದರ ಬಗ್ಗೆ ತಾತ್ಸಾರ ಮಾಡಬೇಡಿ, ನೀವುಗಳ ಹೆಸರಿಗೆ ಮಾತ್ರವ ನಿವೃತ್ತಿಯನ್ನು ಹೊಂದಲಾಗಿದೆ ಆದರೆ ನಿಮ್ಮಲ್ಲಿನ ಸಾಮಥ್ಯ ಶಕ್ತಿ ಸಮಾಜಕ್ಕೆ ಇನ್ನೂ ಅವಶ್ಯಕತೆ ಇದೆ ಎಂದು ನವೀನ್ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿದ್ದ ಚಿತ್ರದುರ್ಗ ತಾಲ್ಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಬಿ.ಕೆ.ಹನುಮಂತಪ್ಪ ಮಾತನಾಡಿ, ನಾವು ಸಹಾ ಹಲವಾರು ವರ್ಷಗಳ ಕಾಲ ವಿವಿಧ ಇಲಾಖೆಯಲ್ಲಿ ಸೇವೆಯನ್ನು ಮಾಡುವುದರ ಮೂಲಕ ನಿವೃತ್ತಿಯನ್ನು ಕಾಣಲಾಗಿದೆ ಕರ್ತವ್ಯ ಸಮಯದಲ್ಲಿ ಆರೋಗ್ಯವಾಗಿ ಇದ್ದ ನಾವುಗಳು ನಿವೃತ್ತಿಯಾದ ನಂತರ ವಿವಿಧ ರೀತಿಯ ಖಾಯಿಲೆಗಳು ಬರುತ್ತವೆ ಇದಕ್ಕೆ ಚಿಕಿತ್ಸೆಯನ್ನು ಪಡೆಯಲು ಆರ್ಥಿಕವಾಗಿ ನಾವುಗಳು ಸಬಲರಾಗಿಲ್ಲ, ನಮಗೆ ಬರುವ ಪಿಂಚಿಣಿಯಿಂದ ನಾವುಗಳು ನಮ್ಮ ಕುಟುಂಬವನ್ನು ಸಲಹೆ ಬೇಕಿದೆ ಇದರ ಮಧ್ಯದಲ್ಲಿ ನಮ್ಮ ಆರೋಗ್ಯವನ್ನು ಸಹಾ ಕಾಪಾಡಿಕೊಳ್ಳಬೇಕಿದೆ, ಚಿಕಿತ್ಸೆಯನ್ನು ಪಡೆಯಲು ಲಕ್ಷಾಂತರ ರೂ ವೆಚ್ಚವಾಗುತ್ತದೆ ಈ ಹಿನ್ನಲೆಯಲ್ಲಿ ನಮಗೂ ಸಹಾ ಸರ್ಕಾರಿ ನೌಕರರಿಗೆ ನೀಡಿದಂತೆ ಜ್ಯೋತಿಸಂಜೀವಿನಿ ಯೋಜನೆಯನ್ನು ಉಚಿತವಾಗಿ ಜಾರಿ ಮಾಡಿದರೆ ಅನುಕೂಲವಾಗುತ್ತದೆ ಎಂದು ಸರ್ಕಾರಕ್ಕೆ ಮನವಿ ಮಾಡಿ ನಮ್ಮ ನಿವೃತ್ತ ನೌಕರರ ಸಂಘ ಸಮಾಜ ಸೇವೆಯನ್ನು ಮಾಡುವುದರ ಮೂಲಕ ನಮ್ಮ ಬೇಡಿಕೆ ಮಾತ್ರವಲ್ಲದೆ ಸಮಾಜ ಸೇವೆಯನ್ನು ಮಾಡುವ ಕಾರ್ಯವನ್ನು ಸಹಾ ಮಾಡಲಾಗುತ್ತದೆ. ನಿವೃತ್ತ ನೌಕರರ ಯೋಗ ಕ್ಷೇಮವನ್ನು ವಿಚಾರಿಸುವುದರ ಮೂಲಕ ಅವರ ಬೇಕು ಬೇಡಗಳನ್ನು ಸಹಾ ನೋಡಿಕೊಳ್ಳಲಾಗುತ್ತಿದೆ. ಎಂದರು.
ಈ ಸಂದರ್ಭದಲ್ಲಿ ಕೆಡಿಪಿ ಸದಸ್ಯರಾದ ಕೆ.ಸಿ.ನಾಗರಾಜ್, ಚಿತ್ರದುರ್ಗ ತಾಲ್ಲೂಕು ನಿವೃತ್ತ ನೌಕರರ ಸಂಘದ ಗೌರವಾಧ್ಯಕ್ಷರಾದ ನಾಗರಾಜ್ ಸಂಗಂ, ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಪರಮೇಶ್ವರಪ್ಪ, ನಿವೃತ್ತ ಪಿಎಸ್.ಐ.ನಾಗರಾಜ್, ಎಸ್.ಎಸ್.ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್‍ನ ಕೋ-ಆಡಿನೇಟರ್ ಎಸ್.ಎ.ಗುಡ್ಡಪ್ಪ, ಮದಕರಿನಾಯಕ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ವಸಂತಕುಮಾರ್ ಡಾ.ರಾಕೇಶ್, ಗೋವಿಂದಪ್ಪ, ಶಿವಕುಮಾರ್, ಹಾಲನಾಯ್ಕ್, ತಿಮ್ಮಾರೆಡ್ಡಿ, ಪ್ರೇಮಾ, ಸೇರಿದಂತೆ ಇತರರು ಭಾಗವಹಿಸಿದ್ದರು.
ವೀರಣ್ಣ ಸ್ವಾಗತಿಸಿದರೆ ಗೀತಾ ಭರಮಸಾಗರ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಸುಮಾರು 300ಕ್ಕೂ ಹೆಚ್ಚು ನಿವೃತ್ತ ನೌಕರರ ಹೃದಯ ರೋಗ, ಕಿಡ್ನಿ ಸಮಸ್ಯೆ, ನರರೋಗ, ಮೂತ್ರಕೋಶ ಹಾಗೂ ಗ್ಯಾಸ್ಟೋ ಸೈನ್ಸಸ್ ಬಗ್ಗೆ ಆರೋಗ್ಯ ತಪಾಸಣೆಯನ್ನು ಮಾಡಲಾಯಿತು.
Views: 1