
ಚಿತ್ರದುರ್ಗ: ದೇಶದಲ್ಲಿ ಚರಕ ಮಾಡುವವರ ಸಂಖ್ಯೆ ಕ್ಷೀಣಿಸುತ್ತಿದ್ದು, ಜನರು ಚರಕವನ್ನ ಕೊಂಡುಕೊಳ್ಳಲು ಅಂಗಡಿಯಿoದ ಅಂಗಡಿಗೆ, ಊರಿಂದ ಊರಿಗೆ, ಸುತ್ತಾಡುತ್ತಿರುವುದನ್ನು ನೋಡಿದರೆ, ನಮ್ಮಲ್ಲಿ ಬಡಿಗೆ ಕೆಲಸ ಗೊತ್ತಿರುವವರು, ಐಟಿಐ, ಡಿಪ್ಲೋಮೋ ಕಾಲೇಜಿನ ತಾಂತ್ರಿಕ ವಿದ್ಯಾರ್ಥಿಗಳು ಸಹ, ಚರಕ ಮಾಡುವುದರಲ್ಲಿ ಭಾಗವಹಿಸಿ, ಹೆಚ್ಚಿನ ಗುಣಮಟ್ಟದ, ಕಡಿಮೆ ವೆಚ್ಚಮಯದ ಚರಕವನ್ನು ಮಾಡಿ, ಮಾರುಕಟ್ಟೆಗೆ ಬಿಟ್ಟು, ಜನರಿಗೆ ಖಾದಿ, ಚರಕ, ಗ್ರಾಮೀಣಾಭಿವೃದ್ಧಿ, ಸ್ವಾತಂತ್ರದ ಅನುಭವವನ್ನು ತಂದುಕೊಡಲು ಸಹಕರಿಸಬೇಕು ಎಂದು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷರಾದ ಡಾ. ಎಚ್. ಕೆ. ಎಸ್. ಸ್ವಾಮಿಯವರು ವಿನಂತಿಸಿಕೊoಡಿದ್ದಾರೆ.
ಚರಕ ಮಾಡಲು ಕೇವಲ ಬಡಗಿ ಅವರಿಂದ ಮಾತ್ರ ಸಾಧ್ಯ ಅಂದುಕೊಳ್ಳದೆ, ಸ್ವಲ್ಪ ತಾಂತ್ರಿಕ ಜ್ಞಾನ ಇರುವಂತವರು, ಮರ ಮುಟ್ಟುಗಳನ್ನ ಕತ್ತರಿಸಿ ಜೋಡಿಸುವಂತಹ ಕಲೆ ಇರುವವರು, ಕಲಾವಿದರು, ಶಿಲ್ಪ ಕಲೆ ಗೊತ್ತಿರುವವರು, ಹಳೆಯ, ಮರುಬಳಕೆ ಮಾಡುವಂತಹ ಮರಮುಟ್ಟುಗಳಿಂದ, ಬಳಸಿ ಬಿಸಾಡಿದಂತ ಮರದ ತುಂಡುಗಳಿoದ, ಸಾಕಷ್ಟು ಚರಕಗಳನ್ನ ಮಾಡಿ, ಶಾಲಾ ಕಾಲೇಜುಗಳಿಗೆ ಒದಗಿಸಿ, ಮಕ್ಕಳಿಗೆ ಶಿಕ್ಷಣ ನೀಡಲು ಉಪಯೋಗಿಸಬಹುದು. ಪ್ರತಿಯೊಂದು ಚರಕಕ್ಕೂ ಸಹ, ನಾವು ಗಾಂಧೀಜಿಯವರ ಆಶ್ರಮವಾದ ಸಾಬರಮತಿ, ವಾರ್ಧಾ ಕಡೆ ಮುಖ ಮಾಡಿ ನಿಲ್ಲುವುದು ಸೂಕ್ತವಲ್ಲ. ಚರಕ ಮಾಡುವುದರಲ್ಲೂ ಸಹ ವಿಕೇಂದ್ರಿಕರಣವನ್ನು ಗಾಂಧೀಜಿಯವರು ಬಯಸಿದ್ದರು. ಈಗ ನಮ್ಮ ದೇಶದಲ್ಲಿ ಎಲ್ಲಾ ಬಡಿಗಿಯವರು, ಮನೆ ಕಟ್ಟುವುದರಲ್ಲಿ, ಮನೆಗೆ ಬೇಕಾದಂತ ಪೀಠೋಪಕರಣಗಳ ತಯಾರಿಕೆಯಲ್ಲಿ ಹೆಚ್ಚು ಕೇಂದ್ರೀಕೃತವಾಗಿದ್ದಾರೆ. ಅವರಿಗೆ ಅಲ್ಲಿ ಕೊಡುವಷ್ಟು ಸಂಬಳವನ್ನು ಸಹ ಯಾರು ಚರಕ ಮಾಡಿಸಿಕೊಳ್ಳುವರು ನೀಡುತ್ತಿಲ್ಲ. ಹಾಗಾಗಿ ಚರಕ ಮಾಡುವುದರಲ್ಲಿ ಎಲ್ಲರೂ ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ಬಡಗಿ ಕೆಲಸ ಗೊತ್ತಿರುವವರು, ಬಡಗಿಯವರು, ಸ್ವಲ್ಪ ಸಮಯ ದೇಶಕ್ಕಾಗಿ, ಸ್ವತಂತ್ರಕ್ಕಾಗಿ, ಬಿಡುವಿನ ಸಮಯದಲ್ಲಿ, ಸ್ವಲ್ಪ ತ್ಯಾಗ ಮನೋಭಾವನೆಯಿಂದ, ಚರಕ ಮಾಡಿ ಜನರಿಗೆ, ಪ್ರದರ್ಶನಕ್ಕೆ, ಉಪಯೋಗಕ್ಕೆ, ಕಲಿಕಾ ಕೇಂದ್ರಗಳಿಗೆ ಸರಬರಾಜು ಮಾಡಿದರೆ ಮತ್ತೊಮ್ಮೆ ನಮ್ಮ ದೇಶದಲ್ಲಿ ಗಾಂಧೀಜಿಯವರ ಕನಸಿನ ಖಾದಿಯನ್ನ ಬೆಳಕಿಗೆ ತರಲು ಅನುಕೂಲಕರವಾಗುತ್ತದೆ ಎಂದಿದ್ದಾರೆ.

ಚಿತ್ರದುರ್ಗದಲ್ಲಿರುವ ಒಬ್ಬರು ಎಲೆಕ್ಟಾçನಿಕ್ಸ್ ಕೆಲಸ ಮಾಡುವಂತಹ ಎಲ್. ತಿಪ್ಪೇಸ್ವಾಮಿಯವರು ದೊಡ್ಡ ಮನಸ್ಸು ಮಾಡಿ, ತ್ಯಾಗ ಮನೋಭಾವನೆಯಿಂದ ಹತ್ತರಿಂದ ಹದಿನೈದು ಚರಕಗಳನ್ನ ಮಾಡಿ ಪ್ರದರ್ಶನಕ್ಕೆ ಮತ್ತು ಕಲಿಕೆಗೆ ಒದಗಿಸಿ ಕೊಟ್ಟಿದ್ದಾರೆ. ಅವರು ತಮ್ಮ ಉದ್ಯೋಗದ ಜೊತೆ ಜೊತೆಗೆ, ಚರಕ ಮಾಡುವ ವಿದ್ಯೆಯನ್ನು ಸಹ ಅಳವಡಿಸಿಕೊಂಡು, ಜನರಿಗೆ ಸಹಾಯವಾಗಲಿ, ಸಮಾಜ ಸುಧಾರಣೆಯಲ್ಲಿ ನಾನು ಭಾಗವಹಿಸಬೇಕು, ಗಾಂಧೀಜಿಯವರ ಕನಸಿನ ಭಾರತವನ್ನು ಕಟ್ಟಲು ನಮಗೂ ಒಂದು ಅವಕಾಶ ಸಿಗಲಿ ಎಂದು ದಿನನಿತ್ಯ ಸ್ವಲ್ಪ ಸಮಯ ಚರಕ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಂತಹ ವ್ಯಕ್ತಿಗಳ ಸಂಖ್ಯೆ ಹೆಚ್ಚಾಗಬೇಕು. ಪ್ರತಿ ಊರಿನಲ್ಲಿ , ಜಿಲ್ಲೆಗಳಲ್ಲಿ, ಗ್ರಾಮಗಳಲ್ಲಿರುವಂತ ಬಡಗಿ ಕೆಲಸ ಗೊತ್ತಿರುವಂತವರು, ಕನಿಷ್ಠ ಪಕ್ಷ ಒಂದಾರ ಚರಕವನ್ನ ಮಾಡಿ, ತಮ್ಮ ಮನೆಯಲ್ಲಾದರೂ ಇಟ್ಟುಕೊಂಡು, ಬಂದವರಿಗೆ ಪ್ರದರ್ಶನ ಮಾಡಿ ತೋರಿಸಿ, ಅದರಿಂದ ದಾರ ತೆಗೆದು, ಹೇಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ಪ್ರಚಾರಕ್ಕಾದರೂ ಒಂದು ಚರಕವನ್ನು ಮಾಡಿಟ್ಟುಕೊಳ್ಳಲಿ ಎಂದು ವಿನಂತಿಸಿಕೊoಡಿದ್ದಾರೆ.
ಸಮಯದ ತ್ಯಾಗ, ಹಣದ ತ್ಯಾಗ ಮಾಡಿದಂತೆ, ಇಲ್ಲಿ ಚರಕದ ತ್ಯಾಗ ಮಾಡುವುದು ಸಹ ಉಪಯೋಗಕ್ಕೆ ಬರುತ್ತದೆ. ಜನರು ಹೆಚ್ಚಿನ ಮಟ್ಟದಲ್ಲಿ ಚರಕಗಳನ್ನ ತಯಾರು ಮಾಡಿ, ಯಾವುದೇ ಮರದ ತುಂಡುಗಳನ್ನ ವ್ಯರ್ಥ ಮಾಡದೇ, ಚರಕ ಮಾಡುವವರಿಗೆ ಒದಗಿಸಿ, ಕಡಿಮೆ ವೆಚ್ಚದಲ್ಲಿ ಚರಕ ತಯಾರಿಕೆಯ ವ್ಯವಸ್ಥೆಯಾಗಬೇಕು ಎಂದಿದ್ದಾರೆ.
ಈಗ ಜನರು ಸ್ವತಂತ್ರ ದಿನಾಚರಣೆಗೋಸ್ಕರ, ಚರಕೋತ್ಸವ ಎಂಬ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುತ್ತಿದ್ದು, ಅದಕ್ಕಾಗಿ ಚರಕಗಳನ್ನ ಪ್ರದರ್ಶನಕ್ಕೆ ಇಟ್ಟು, ದಾರ ತೆಗೆಯುವುದರ ಬಗ್ಗೆ ತರಬೇತಿ ನೀಡಲು ಸಂಘ ಸಂಸ್ಥೆಗಳು ಮುಂದಾಗುತ್ತಿವೆ, ಅಂತ ಸಂಘ-ಸಂಸ್ಥೆಗಳಿಗೆ ಚರಕ ದೊರಕದೆ ತೊಂದರೆಗಿಡಾಗುತ್ತಿದ್ದಾರೆ. ಅವರಿಗೆ ಬೇಗ ಚರಕಗಳನ್ನ ಒದಗಿಸಿ, ತಕಲಿಗಳನ್ನ ಒದಗಿಸಿ, ಅವರಿಗೆ ಬೇಕಾದಂತ ಉತ್ತಮ ಗುಣಮಟ್ಟದ ಹತ್ತಿಯನ್ನು ಒದಗಿಸಿಕೊಟ್ಟರೆ, ತಕ್ಷಣ ಅವರೆಲ್ಲರೂ ಸಹ ಈ ದೇಶ ಕಟ್ಟುವ ಕೆಲಸದಲ್ಲಿ ಭಾಗಿಯಾಗುತ್ತಾರೆ ಎಂದಿದ್ದಾರೆ.
ಸ್ವಾತoತ್ರ ಹೋರಾಟಗಾರರು, ಖಾದಿ ಮಂಡಳಿಯವರು, ಚರಕ ಉಪಯೋಗಿಸುತ್ತಿರುವ ಸಂಘ ಸಂಸ್ಥೆಗಳು, ಆದಷ್ಟು ಶೀಘ್ರವಾಗಿ ಇಂತಹ ಕಾರ್ಯಕ್ರಮ ಆಯೋಜಕರಿಗೆ ಸಹಾಯದ ಹಸ್ತವನ್ನು ಚಾಚಬೇಕು. ಇವರಿಗೆ ತೊಂದರೆಗಳು ಹೆಚ್ಚಾದರೆ, ಇಂತಹ ಚರಕೋತ್ಸವಗಳು ಮುಂದುವರಿಯುವುದು ಕಷ್ಟಕರವಾಗುತ್ತದೆ ಎಂದು ಪತ್ರಿಕಾ ಪ್ರಕಟಣೆ ಮುಖಾಂತರ ವಿನಂತಿಸಿಕೊoಡಿದ್ದಾರೆ.