ರೀಲ್ಸ್ ಗಳನ್ನು ನೋಡುತ್ತಿದ್ದರೆ ಸಮಯ ಹೋಗಿದ್ದೆ ಗೊತ್ತಾಗಲ್ಲ ಅನ್ನುವವರು 20-20-20 ನಿಯಮವನ್ನು ಪಾಲನೆ ಮಾಡಿ.

ಅತಿಯಾದ ಪರದೆಯ ಸಮಯ, ವಿಶೇಷವಾಗಿ ಇನ್ಸ್ಟಾಗ್ರಾಮ್, ಫೇಸ್ಬುಕ್ ಮತ್ತು ಯೂಟ್ಯೂಬ್ ನಂತಹ ಸಾಮಾಜಿಕ ಮಾಧ್ಯಮ ಗಳಲ್ಲಿ ಹೆಚ್ಚು ಹೆಚ್ಚು ರೀಲ್ಗಳನ್ನು ನೋಡುವುದರಿಂದ ಎಲ್ಲಾ ವಯಸ್ಸಿನವರಲ್ಲಿ, ಅದರಲ್ಲಿಯೂ ಮಕ್ಕಳು ಮತ್ತು ಯುವಕರಲ್ಲಿ ಕಣ್ಣಿನ ಅಸ್ವಸ್ಥತೆಗಳ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಇದರಿಂದಾಗಿ ಕಣ್ಣಿನ ಮೇಲೆ ಒತ್ತಡ ಉಂಟಾಗಿ ನಾನಾ ರೀತಿಯ ಸಮಸ್ಯೆಗಳು ಕಂಡು ಬರುತ್ತಿದ್ದು ವೈದ್ಯರು ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ನಾವು ನೋಡುವ ರೀಲ್ಸ್ ಗಳು ಚಿಕ್ಕದಾಗಿರಬಹುದು, ಆದರೆ ಕಣ್ಣಿನ ಆರೋಗ್ಯದ ಮೇಲೆ ಅವು ಬೀರುವ ಪರಿಣಾಮಗಳ ಬಗ್ಗೆ ಯೋಚಿಸುವುದು ಅನಿವಾರ್ಯವಾಗಿದೆ. ಹಾಗಾದರೆ ಇದನ್ನು ತಡೆಯುವುದು ಹೇಗೆ? ಈ ಬಗ್ಗೆ ವೈದ್ಯರು ಹೇಳುವುದೇನು ತಿಳಿದುಕೊಳ್ಳಿ.

ರೀಲ್ಸ್ ಗಳನ್ನು ನೋಡುತ್ತಿದ್ದರೆ ಸಮಯ ಹೋಗಿದ್ದೆ ಗೊತ್ತಾಗಲ್ಲ ಅನ್ನುವವರು 20-20-20 ನಿಯಮವನ್ನು ಪಾಲನೆ ಮಾಡಿ

ಚಿಕ್ಕ ಚಿಕ್ಕ ವಿಡಿಯೋಗಳು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬಿರುವುದರ ಬಗ್ಗೆ ವೈದ್ಯರು ಕಳವಳ ವ್ಯಕ್ತಪಡಿಸಿದ್ದರು. ಇದೀಗ ರೀಲ್ಸ್ (Reels) ನೋಡುವುದರಿಂದ ಉಂಟಾಗುತ್ತಿರುವ ಹೊಸ ಬಿಕ್ಕಟ್ಟಿನ ಬಗ್ಗೆ ಎಚ್ಚರಿಕೆ ನೀಡಿದ್ದು, ರೀಲ್ಸ್ ಗಳು ಈಗ ಕಣ್ಣಿನ ಅಸ್ವಸ್ಥತೆಗಳಿಗೆ ಕಾರಣವಾಗುತ್ತಿವೆ ಎಂದಿದ್ದಾರೆ. ಸೋಷಿಯಲ್ ಮೀಡಿಯಾ (Social media) ಪ್ಲಾಟ್‌ಫಾರ್ಮ್‌ಗಳಲ್ಲಿ ರೀಲ್ಸ್ ಗಳನ್ನು ನೋಡುವುದರಿಂದ, ಸ್ಕ್ರೀನ್ ಸಮಯ ಹೆಚ್ಚಾಗಿದ್ದು ಎಲ್ಲಾ ವಯಸ್ಸಿನವರಲ್ಲಿ ಕಣ್ಣಿನ ಅಸ್ವಸ್ಥತೆಗಳ ಹೆಚ್ಚಳಕ್ಕೆ ಕಾರಣವಾಗುತ್ತಿದೆ, ವಿಶೇಷವಾಗಿ ಮಕ್ಕಳು ಮತ್ತು ಯುವ ಜನತೆಯಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತಿರುವುದು ಕಳವಳ ಉಂಟು ಮಾಡಿದೆ. ಜೊತೆಗೆ ಅಧಿಕ ಕಣ್ಣಿನ ಸಿಂಡ್ರೋಮ್, ಮಯೋಪಿಯಾ ಪ್ರಗತಿ, ಕಣ್ಣಿನ ಬಿಗಿತದಂತಹ ಸಮಸ್ಯೆಗಳಲ್ಲಿ ತೀವ್ರ ಏರಿಕೆ ಕಂಡು ಬರುತ್ತಿರುವುದನ್ನು ವೈದ್ಯರು ಗಮನಿಸಿದ್ದಾರೆ. ಈ ವಿಚಾರವಾಗಿ ಏಷ್ಯಾ ಪೆಸಿಫಿಕ್ ಅಕಾಡೆಮಿ ಆಫ್ ನೇತ್ರವಿಜ್ಞಾನ (Asia Pacific Academy of Ophthalmology (APAO)) ಮತ್ತು ಅಖಿಲ ಭಾರತ ನೇತ್ರವಿಜ್ಞಾನ ಸೊಸೈಟಿಯ ಜಂಟಿ ಸಭೆಯಲ್ಲಿ ಪ್ರಮುಖ ನೇತ್ರತಜ್ಞರು ಯಶೋಭೂಮಿ – ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಮತ್ತು ಎಕ್ಸ್ಪೋ ಕೇಂದ್ರದಲ್ಲಿ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಏಷ್ಯಾ ಪೆಸಿಫಿಕ್ ಅಕಾಡೆಮಿ ಆಫ್ ನೇತ್ರವಿಜ್ಞಾನ (ಎಪಿಎಒ) 2025 ಕಾಂಗ್ರೆಸ್ ಅಧ್ಯಕ್ಷ ಡಾ. ಲಲಿತ್ ವರ್ಮಾ ಅವರು ಹೇಳುವ ಪ್ರಕಾರ, ಅತಿಯಾದ ಪರದೆಯ ಸಮಯ, ವಿಶೇಷವಾಗಿ ಇನ್ಸ್ಟಾಗ್ರಾಮ್, ಫೇಸ್ಬುಕ್ ಮತ್ತು ಯೂಟ್ಯೂಬ್ ನಂತಹ ಸಾಮಾಜಿಕ ಮಾಧ್ಯಮ ಗಳಲ್ಲಿ ಹೆಚ್ಚು ಹೆಚ್ಚು ರೀಲ್ಗಳನ್ನು ನೋಡುವುದರಿಂದ ಎಲ್ಲಾ ವಯಸ್ಸಿನವರಲ್ಲಿ, ಅದರಲ್ಲಿಯೂ ಮಕ್ಕಳು ಮತ್ತು ಯುವಕರಲ್ಲಿ ಕಣ್ಣಿನ ಅಸ್ವಸ್ಥತೆಗಳ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಇದರಿಂದಾಗಿ ಕಣ್ಣಿನ ಮೇಲೆ ಒತ್ತಡ ಉಂಟಾಗಿ ಡ್ರೈ ಐ ಸಿಂಡ್ರೋಮ್, ಮಯೋಪಿಯಾದಲ್ಲಿ ಏರಿಕೆ ಕಂಡುಬರುತ್ತಿದ್ದು ಜೊತೆಗೆ ಗಂಟೆಗಟ್ಟಲೆ ರೀಲ್ಸ್ ನೋಡುವ ಮಕ್ಕಳು ಕಣ್ಣು ಮಿಟುಕಿಸುವ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಹೇಳಿದ್ದಾರೆ.

“ಇತ್ತೀಚೆಗೆ ವಿದ್ಯಾರ್ಥಿಯೊಬ್ಬ ನಿರಂತರವಾಗಿ ಕಣ್ಣಿನಲ್ಲಿ ಉಂಟಾಗುತ್ತಿರುವ ಕಿರಿಕಿರಿ ಮತ್ತು ಮಸುಕಾದ ದೃಷ್ಟಿಯ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದ. ನಾವು ಅವನನ್ನು ಪರೀಕ್ಷಿಸಿದ ನಂತರ, ಮನೆಯಲ್ಲಿ ಆತ ರೀಲ್ಗಳನ್ನು ಹೆಚ್ಚು ನೋಡುತ್ತಿದ್ದ ಎಂಬುದು ತಿಳಿದು ಬಂದಿದೆ. ಈ ರೀತಿ ಅತಿಯಾಗಿ ರೀಲ್ಗಳನ್ನು ನೋಡಿದ ಕಾರಣ ಅವನ ಕಣ್ಣುಗಳು ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಉತ್ಪಾದಿಸುತ್ತಿರಲಿಲ್ಲ ಇದರಿಂದಾಗಿ ಆತನಿಗೆ ಕಣ್ಣಿನಲ್ಲಿ ಪದೇ ಪದೇ ಕಿರಿಕಿರಿ ಉಂಟಾಗುತ್ತಿತ್ತು ಎಂಬುದು ತಿಳಿದು ಬಂದಿದೆ. ಆತನಿಗೆ ಬೇಕಾದ ಔಷಧಗಳನ್ನು ನೀಡಿದ ಮೇಲೆ ಆತನಿಗೆ 20- 20- 20 ನಿಯಮವನ್ನು ಅನುಸರಿಸಲು ಸಲಹೆ ನೀಡಲಾಯಿತು. ಈ ನಿಯಮದ ಪ್ರಕಾರ ಪ್ರತಿ 20 ನಿಮಿಷಗಳಿಗೊಮ್ಮೆ 20 ಸೆಕೆಂಡುಗಳ ವಿರಾಮವನ್ನು ತೆಗೆದುಕೊಂಡು 20 ಅಡಿ ದೂರದಲ್ಲಿ ಇಟ್ಟು ನೋಡಲು ಸಲಹೆ ನೀಡಲಾಗಿದೆ” ಎಂದು ವೈದ್ಯರು ಹೇಳಿದ್ದಾರೆ.

ಅಧ್ಯಯನಗಳಿಂದ ಶಾಕಿಂಗ್ ಮಾಹಿತಿ:

ಇತ್ತೀಚಿನ ಅಧ್ಯಯನಗಳ ಪ್ರಕಾರ, 2050 ರ ವೇಳೆಗೆ, ವಿಶ್ವದ ಜನಸಂಖ್ಯೆಯ 50 ಪ್ರತಿಶತಕ್ಕೂ ಹೆಚ್ಚು ಜನರು ಮಯೋಪಿಕ್ ಆಗಿರುತ್ತಾರೆ. ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಕೆಲಸ ಮಾಡುವ ವೃತ್ತಿಪರರು, ಹೆಚ್ಚು ಹೊತ್ತು ಸ್ಕ್ರಿನ್ ಬಳಕೆ ಮಾಡುವುದರಿಂದ ಕಣ್ಣಿನ ಒತ್ತಡ, ಮೆಳ್ಳಗಣ್ಣು ಮತ್ತು ಹದಗೆಡುತ್ತಿರುವ ಕಣ್ಣಿನ ದೃಷ್ಟಿ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಅಧ್ಯಯನಗಳು ತೋರಿಸುತ್ತವೆ.

ಡಾ.ಲಾಲ್ ಅವರು ಹೇಳುವ ಪ್ರಕಾರ, ನಿರಂತರವಾಗಿ ಸ್ಕ್ರೀನ್ ನೋಡುವುದು ಕಣ್ಣು ಮಿಟುಕಿಸುವ ಪ್ರಮಾಣವನ್ನು 50% ರಷ್ಟು ಕಡಿಮೆ ಮಾಡುತ್ತದೆ, ಇದು ಡ್ರೈ- ಐ ಸಿಂಡ್ರೋಮ್ ಗೆ ಕಾರಣವಾಗುತ್ತದೆ ಜೊತೆಗೆ ಹತ್ತಿರದ ಮತ್ತು ದೂರದ ವಸ್ತುಗಳ ನಡುವೆ ಇರುವ ಅಂತರವನ್ನು ಗಮನಿಸುವುದು ಕೂಡ ಕಷ್ಟವಾಗುತ್ತದೆ. ಈ ರೀತಿ ಸಮಸ್ಯೆಗಳನ್ನು ನಿರ್ಲಕ್ಷಿಸಿದಲ್ಲಿ ಇದು ದೀರ್ಘಕಾಲೀನ ದೃಷ್ಟಿ ಸಮಸ್ಯೆಗಳಿಗೆ ಕಾರಣವಾಗಬಹುದು ಮತ್ತು ಶಾಶ್ವತ ಕಣ್ಣಿನ ಒತ್ತಡಕ್ಕೆ ಕಾರಣವಾಗಬಹುದು. ಜೊತೆಗೆ ಪ್ರತಿದಿನ ಗಂಟೆಗಟ್ಟಲೆ ರೀಲ್ಗಳನ್ನು ನೋಡುವ ಮಕ್ಕಳು ಆರಂಭಿಕ ಮಯೋಪಿಯಾ ಬರುವ ಅಪಾಯದಲ್ಲಿದ್ದಾರೆ, ಇದು ಹಿಂದೆಂದಿಗಿಂತಲೂ ವೇಗವಾಗಿ ಹೆಚ್ಚುತ್ತಿದೆ. ವಯಸ್ಕರು ಸಹ ಆಗಾಗ ತಲೆನೋವು, ಮೈಗ್ರೇನ್ ಮತ್ತು ನೀಲಿ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಉಂಟಾಗುವ ನಿದ್ರೆಯ ಅಸ್ವಸ್ಥತೆಗಳನ್ನು ಅನುಭವಿಸುತ್ತಿದ್ದಾರೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಎಐಒಎಸ್ ಅಧ್ಯಕ್ಷ ಮತ್ತು ಹಿರಿಯ ನೇತ್ರತಜ್ಞ ಡಾ. ಸಮರ್ ಅವರು ಹೇಳುವ ಪ್ರಕಾರ, ಜನರು ರೀಲ್ಗಳಲ್ಲಿ ಎಷ್ಟು ಮುಳುಗಿದ್ದಾರೆ ಎಂದರೆ ಅವರು ಮುಖಾಮುಖಿಯಾಗಿ ನಡೆಸುವಂತಹ ಸಂವಹನಗಳನ್ನು ನಿರ್ಲಕ್ಷಿಸುತ್ತಿದ್ದಾರೆ, ಇದರಿಂದ ಎಲ್ಲಾ ರೀತಿಯ ಸಂಬಂಧ ಹದಗೆಡುತ್ತದೆ ಜೊತೆಗೆ ಶಿಕ್ಷಣ ಮತ್ತು ಕೆಲಸದ ಮೇಲಿನ ಗಮನ ಕಡಿಮೆಯಾಗುತ್ತಿದೆ ಹಾಗಾಗಿ ಅತಿಯಾದ ರೀಲ್ ವೀಕ್ಷಣೆಯ ದುಷ್ಪರಿಣಾಮಗಳನ್ನು ತಡೆಯಲು 20-20-20 ನಿಯಮವನ್ನು ಅನುಸರಿಸಲು ಶಿಫಾರಸು ಮಾಡಲಾಗುತ್ತಿದೆ. ಅದಲ್ಲದೆ ಕಣ್ಣು ಮಿಟುಕಿಸುವ ಪ್ರಮಾಣವನ್ನು ಹೆಚ್ಚಿಸುವುದು, ಪರದೆಯ ಸಮಯವನ್ನು ಕಡಿಮೆ ಮಾಡುವುದರಿಂದ ದೀರ್ಘಕಾಲೀನ ಹಾನಿಯನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ರೀಲ್ಸ್ ಗಳು ಚಿಕ್ಕದಾಗಿರಬಹುದು, ಆದರೆ ಕಣ್ಣಿನ ಆರೋಗ್ಯದ ಮೇಲೆ ಅವು ಬೀರುವ ಪರಿಣಾಮಗಳ ಬಗ್ಗೆ ಇನ್ನಾದರೂ ಯೋಚಿಸುವುದು ಅನಿವಾರ್ಯವಾಗಿದೆ. ಈ ಅಭ್ಯಾಸವು ಮುಂದುವರಿದರೆ, ಅದು ದೃಷ್ಟಿ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾಗಿದೆ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

Source : TV9 Kannada

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *