ಸಾಗರ ತಾಲೂಕಿನ ಕಳಸವಳ್ಳಿಯ ಶರಾವತಿ ಹಿನ್ನೀರಿನಲ್ಲಿ ತೆಪ್ಪು ಮಗುಚಿ ಮೂವರು ಯುವಕರು ನಾಪತ್ತೆಯಾಗಿದ್ದಾರೆ. ಐವರು ಯುವಕರು ಪ್ರವಾಸಕ್ಕೆ ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಸದ್ಯ ನಾಪತ್ತೆಯಾಗಿರುವವರಿಗಾಗಿ ಅಗ್ನಿಶಾಮಕ ದಳ ಶೋಧ ಕಾರ್ಯ ನಡೆದಿದೆ.

ಶಿವಮೊಗ್ಗ, ನವೆಂಬರ್ 13: ತೆಪ್ಪ ಮಗುಚಿ ಮೂವರು ಯುವಕರು ನಾಪತ್ತೆ ಆಗಿರುವಂತಹ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಕಳಸವಳ್ಳಿಯ ಶರಾವತಿ ಹಿನ್ನೀರಿನಲ್ಲಿ (Sharavati Backwaters) ನಡೆದಿದೆ. ಒಟ್ಟು ಐವರ ಪೈಕಿ ರಾಜು, ಸಂದೀಪ್ ಭಟ್ ಮತ್ತು ಚೇತನ್ ನಾಪತ್ತೆಯಾಗಿದ್ದು, ನವೀನ್ ಹಾಗೂ ಯಶ್ವಂತ್ ಈಜಿಕೊಂಡು ದಡ ಸೇರಿದ್ದಾರೆ. ಮೂವರು ಯುವಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯ ಆರಂಭವಾಗಿದೆ.