
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಮೇ. 16 : ಆಪರೇಷನ್ ಸಿಂಧೂರ ಯೋಧ ನಮನ ರಾಷ್ಟ್ರರಕ್ಷಣೆಗಾಗಿ ಚಿತ್ರದುರ್ಗದ ನಾಗರಿಕರು ತಿರಂಗ ಯಾತ್ರೆಯನ್ನು ನಾಗರೀಕರ ವೇದಿಕೆವತಿಯಿಂದ ಮೇ.17 ರಂದು ಚಿತ್ರದುರ್ಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಮುಂಖಡರಾದ ರುದ್ರೇಶ್ ತಿಳಿಸಿದ್ದಾರೆ.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಪರೇಷನ್ ಸಿಂಧೂರ-ಯೋಧ ನಮನ ನಮ್ಮ
ಜಮ್ಮು-ಕಾಶ್ಮೀರದ ಪಹಲ್ಲಾಮ್‍ನಲ್ಲಿ ಪಾಕಿಸ್ತಾನ ಪ್ರೇರಿತ ಜಿಹಾದಿ ಭಯೋತ್ಪಾದಕರಿಂದ ಅಮಾಯಕ ಹಿಂದೂಗಳ ಹತ್ಯಾಕಾಂಡದ
ನಂತರ ನಡೆದ ಭಾರತದ ಸೇನೆಯ ಅಪರೇಷನ್ ಸಿಂಧೂರ ಕಾರ್ಯಚರಣೆಯು ಉಗ್ರಗಾಮಿಗಳ ಹೆಡೆಮುರಿ ಕಟ್ಟಿದ್ದಲ್ಲದೇ, ಭ್ರಷ್ಟ
ಪಾಕಿಸ್ತಾನದ ಜಂಘಾಬಲವನ್ನೇ ಕುಸಿಯುವಂತೆ ಮಾಡಿದೆ. ಪಾಕಿಸ್ತಾನದ ಭೂಪ್ರದೇಶದೊಳಗಿನ 9 ಪ್ರಮುಖ ಭಯೋತ್ಪಾದಕ
ಶಿಬಿರಗಳು ಮತ್ತು ಮುಖ್ಯ ಕಛೇರಿಗಳನ್ನು ಸಂಪೂರ್ಣವಾಗಿ ನಾಶಮಾಡಿತು. ನಮ್ಮ ಭಾರತೀಯ ಸಧೃಡ ನಾಯಕತ್ವ ಮತ್ತು
ಸೈನಿಕರ ದಿಟ್ಟ ಉತ್ತರದ ಪರಿಣಾಮ ಭಾರತದ ಶತ್ರುಗಳಿಗೆ ನಡುಕ, ಭಯೋತ್ಪಾದಕರಿಗೆ ಭಯ ಉಂಟಾಗಿದ್ದು, ಜಾಗತಿಕ
ಮಟ್ಟದಲ್ಲಿಯೂ ಭಾರತದ ಸ್ಥಾನಮಾನ ಹೆಚ್ಚಿದೆ. ಭಾರತವು ವಿಶ್ವಕ್ಕೆ ಉಗ್ರತ್ವದ ನಿರ್ಮೂಲನೆಯ ಸ್ಪಷ್ಟ ಸಂದೇಶ ನೀಡಿದೆ ಎಂದರು.
ಪ್ರತಿಕೂಲ ಸಮಯದಲ್ಲಿ ಧೃಡ ನಿರ್ಧಾರ ಕೈಗೊಂಡು, ನಾಗರಿಕರ ರಕ್ಷಣೆಗೆ ಬದ್ದರಾಗಿರುವ ಕೇಂದ್ರ ಸರ್ಕಾರವನ್ನು, ಸೈನ್ಯವನ್ನು
ಗೌರವಿಸುತ್ತಿದೆ. ಆಪರೇಷನ್ ಸಿಂಧೂರ್, ಇದು ಕೇವಲ ಮಿಲಿಟರಿ ಯಶಸ್ಸಲ್ಲ. ಇದು ನಾಗರಿಕತೆಯ ಪ್ರತಿಕ್ರಿಯೆಯಾಗಿದೆ. ಅದು
ಸಂಘರ್ಷವನ್ನು ಬಯಸುವುದಿಲ್ಲ, ಅದರ ಆಟಕ್ಕೆ ಎಂದಿಗೂ ಹೆದರುವುದಿಲ್ಲ ಎಂಬ ಒಂದು ಹೊಸ ಭಾರತವು ಪುಟಿದೆದ್ದಿದೆ. “ಭಾರತವು
ಜಗತ್ತಿಗೆ ತನ್ನ ವಿರಾಟ ರೂಪವನ್ನು ತೋರಿಸಿದೆ. ಸಾಮರಸ್ಯದಿಂದ ಬದುಕಲಿ ಸಿದ್ದರಿರುವ ಶಾಂತಿಯುತ ರಾಷ್ಟ್ರ, ಆದರೆ ಅದರ
ಸಾರ್ವಭೌಮತ್ವವನ್ನು ಪ್ರಶ್ನಿಸಿದರೆ, ಅವರನ್ನು ಸುಟ್ಟು ಬೂದಿ ಮಾಡಲು ಸಂಪೂರ್ಣವಾಗಿ ಸಿದ್ದವಾಗಿದೆ”. ಭಾರತ ಮಾತೆಯ
ಸಿಂಧೂರ ಜಮ್ಮು-ಕಾಶ್ಮೀರವನ್ನು ಮತ್ತೊಮ್ಮೆ ಅಖಂಡವಾಗಿ ಕಣ್ಣುಂಬಿಕೊಳ್ಳುವ ದಿನಗಳು ನಮ್ಮ ಮುಂದಿದೆ. ಈ ಸಂದರ್ಭದಲ್ಲಿ
ಸಮಾಜಕ್ಕೆ ಇನ್ನಷ್ಟು ಶಕ್ತಿ, ಸೈನ್ಯಕ್ಕೆ ಧೈರ್ಯವನ್ನು, ಬೆಂಬಲವನ್ನು ನೀಡುವ ಸಂದರ್ಭ ಇದು. ನಮ್ಮ ಧಮನಿ ಧಮನಿಗಳಲ್ಲಿ
ಅಡಗಿರುವ ಭಾರತದ ಭಕ್ತಿಯನ್ನು ಪ್ರಕಟಪಡಿಸುವ ಘಳಿಗೆ ಇದಾಗಿದೆ. ಪ್ರತಿ ಮನೆ ಮನೆಯಿಂದಲೂ ತ್ರಿವರ್ಣ ಧ್ವಜಗಳನ್ನು ಹಿಡಿದು
ವಿಜಯ ಯಾತ್ರೆಯಲ್ಲಿ ಮನೆ ಮಂದಿಯೆಲ್ಲರೂ ಪಾಲ್ಗೊಳ್ಳಬೇಕಿದೆ ಎಂದು ಮನವಿ ಮಾಡಿದರು.
ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಯೋಗೇಶ್ ಸಹ್ಯಾದ್ರಿ ಮಾತನಾಡಿ, ಮೇ. 17 ರ ಬೆಳಿಗ್ಗೆ 10 ಗಂಟೆಗೆ ಶೋಭಾಯಾತ್ರೆಯು
ಹೊಳಲ್ಕೆರೆ ರಸ್ತೆಯ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ವೃತ್ತದಿಂದ ಪ್ರಾರಂಭವಾಗಿ, ಸಂಪಿಗೆ ಸಿದ್ದೇಶ್ವರ ಶಾಲೆಯ ಮೂಲಕ
ಸಂತೇಪೇಟೆ, ಬಿ.ಡಿ.ರಸ್ತೆ, ಎಸ್,ಬಿಎಂ. ವೃತ್ತ, ಮಹಾವೀರ ವೃತ್ತ, ತಾಲ್ಲೂಕು ಕಚೇರಿ ಮುಂಭಾಗ ವಾಸವಿ ವೃತ್ತದ ಮೂಲಕ ಡಿ.ಸಿ.
ಸರ್ಕಲ್‍ನ ಒನಕೆ ಓಬವ್ವ ವೃತ್ತದಲ್ಲಿ ಬೃಹತ್ ಸಾರ್ವಜನಿಕ ಸಮಾರಂಭ ನಡೆಯಲಿದೆ. ಈ ಶೋಭಾಯಾತ್ರೆಯಲ್ಲಿ ಈ ತಿರಂಗ
ಯಾತ್ರೆಯಲ್ಲಿ 1 ಕಿ.ಮೀ, ಉದ್ದದ ತ್ರಿವರ್ಣ ಧ್ವಜವನ್ನು ಪ್ರದರ್ಶನ ಮಾಡಲಾಗುವುದು. ಇಸ್ರೇಲ್ ಯುದ್ದ ವಿಮಾನಗಳ ಮಾದರಿ, ದೇಶ
ಭಕ್ತರ ವೇಷಭೂಷಣಗಳನ್ನು ತೊಟ್ಟ ಮಕ್ಕಳು ಭಾಗವಹಿಸಲಿದ್ದು, ನಗರದ ವಿವಿಧ ಸಂಘಟನೆ, ಸಂಘದ ಪದಾಧಿಕಾರಿಗಳು, ರೈತರು,
ಕಾರ್ಮಿಕರು, ಮಠಾಧೀಶರು, ನ್ಯಾಯಾವಾದಿಗಳು, ವೈದ್ಯರ ಸಂಘ ನಿವೃತ್ತ ಸೈನಿಕರ ಸಂಘ, ಕಾಲೇಜಿನ ವಿದ್ಯಾರ್ಥಿಗಳು,
ಸ್ವಸಹಾಯ ಸಂಘದ ಪದಾಧಿಕಾರಿಗಳು, ಯೋಗ ಸಮಿತಿಯವರು, ಯುವಜನಾಂಗ, ಕ್ರೀಡಾಪಟುಗಳು ನಿವೃತ್ತ ನೌಕರರ ಸಂಘದ
ಪದಾಧಿಕಾರಿಗಳು ಸೇರಿದಂತೆ ಸುಮಾರು 5000ಕ್ಕೂ ಹೆಚ್ಚು ಜನತೆ ಭಾಗವಹಿಸಲಿದ್ದಾರೆ.
ಗೋಷ್ಟಿಯಲ್ಲಿ ಸಾಹಿತಿಗಳಾದ ಪತಂಜಲಿ ಯೋಗ ಸಂಸ್ಥೆಯ ಜಿಲ್ಲಾಧ್ಯಕ್ಷ ದೇವಾನಂದ ನಾಯ್ಕ್, ಇನ್ನರ್ ವೀಲ್ ಕಬ್ಲ್‍ನ ಮಾಜಿ
ಅಧ್ಯಕ್ಷರಾದ ರೂಪ ಜನಾರ್ಧನ್, ವಾಸವಿ ಮಹಿಳಾ ಸಂಘದ ಅಧ್ಯಕ್ಷರಾದ ಸರ್ವದ ಸುರೇಶ್ ಗುಪ್ತ, ಸಂಘದ ಪರಿವಾರದ
ಪ್ರಮುಖರಾದ ನವೀನ್, ಕಲಾವಿದರಾದ ನಾಗರಾಜ್ ಬೇದ್ರೇ ಉಪಸ್ಥಿತರಿದ್ದರು.