ಅಮರಾವತಿ: ತಿರುಪತಿ ತಿಮ್ಮಪ್ಪನ ದೇಗುಲವನ್ನು ಎಂಟು ತಿಂಗಳುಗಳ ಕಾಲ ಮುಚ್ಚಲಾಗುತ್ತದೆ ಎನ್ನಲಾಗುತ್ತಿತ್ತು. ಭಕ್ತಾಧಿಗಳೆಲ್ಲಾ ಆತಂಕದಲ್ಲಿದ್ದರು. ಎಂಟು ತಿಂಗಳುಗಳ ಕಾಲ ದೇವರ ದರ್ಶನವಿಲ್ಲದೆ ಇರುವುದು ಹೇಗೆ ಎಂಬ ಗೊಂದಲದಲ್ಲಿದ್ದರು. ಆದರೆ ಇದೀಗ ದೇವಸ್ಥಾನದ ಅರ್ಚಕರೇ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಅರ್ಚಕರಾದ ವೇಣುಗೋಪಾಲ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ತಿಮ್ಮಪ್ಪನ ಮೂಲ ವಿರಾಟ ಮೂರ್ತಿಯ ದರ್ಶನ ಎಂದಿನಂತೆ ಇರಲಿದೆ. ಮಾರ್ಚ್ 1 ರಿಂದ ಚಿನ್ನದ ಲೇಪನ ಕಾರ್ಯ ಆರಂಭವಾಗಲಿದೆ. ಚಿನ್ನದ ಲೇಪನಕ್ಕೆ ಆರು ತಿಂಗಳು ಬೇಕಾಗುತ್ತದೆ. ಇದಕ್ಕೂ ಮುನ್ನ ದೇಗುಲದ ಪಕ್ಕದಲ್ಲಿಯೇ ಒಂದು ತಾತ್ಕಾಲಿಕ ದೇವಸ್ಥಾನವನ್ನು ನಿರ್ಮಿಸಿ, ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎನ್ನಲಾಗುತ್ತಿತ್ತು. ಇದೀಗ ವಿರಾಟ ಮೂರ್ತಿ ದೇವರ ದರ್ಶನ ಭಾಗ್ಯದಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಗರ್ಭಗುಡಿಯ ಬಾಗಿಲನ್ನು ಲೇಪನ ಮಾಡುವ ಸಂದರ್ಭದಲ್ಲಿ ಮುಚ್ಚಲಾಗುತ್ತದೆ. ಲೇಪನ ಕಾರ್ಯ ನಡೆಯುತ್ತಿದ್ದರು ವಿರಾಟ ಮೂರ್ತಿಯ ದರ್ಶನ ಭಾಗ್ಯ ಸಿಗಲಿದೆ ಎಂದಿದ್ದಾರೆ. ಭಕ್ತರು ಎಂದಿನಂತೆ ಬಂದು ದರ್ಶನ ಪಡೆದುಕೊಂಡು, ಪುನೀತರಾಗಬಹುದು ಎಂದಿದ್ದಾರೆ.
The post ತಿರುಪತಿ ದೇವಸ್ಥಾನದ ಬಾಗಿಲು ಹಾಕುವುದಿಲ್ಲ : ಅರ್ಚಕರ ಸ್ಪಷ್ಟನೆ first appeared on Kannada News | suddione.
from ರಾಷ್ಟ್ರೀಯ ಸುದ್ದಿ – Kannada News | suddione https://ift.tt/rzbnmB7
via IFTTT