Today Horoscope,07 April: ಈ ರಾಶಿಯವರಿಗೆ ಇಂದು ಆದಾಯಕ್ಕಿಂತ ಖರ್ಚಿನ ಪ್ರಮಾಣ ಕೊಂಚ ಹೆಚ್ಚಿರಬಹುದು.

ಇಂದಿನ ದಿನವು ವ್ಯವಹಾರಗಳಲ್ಲಿ ಪಾರದರ್ಶಕತೆ, ಕಲಾತ್ಮಕ ಒಲವು ಮತ್ತು ಸತ್ಕಾರ್ಯಗಳತ್ತ ಚಿತ್ತ ಹರಿಸುವ ದಿನವಾಗಿದೆ. ಆದಾಯಕ್ಕಿಂತ ಖರ್ಚಿನ ಪ್ರಮಾಣ ಕೊಂಚ ಹೆಚ್ಚಿರಬಹುದು. ಇಂದಿನ ದಿನದ ಸಂಪೂರ್ಣ ಪಂಚಾಂಗ ಮತ್ತು ದ್ವಾದಶ ರಾಶಿಗಳ ಫಲಾಫಲಗಳ ವಿವರ ಇಲ್ಲಿದೆ.

ಇಂದಿನ ಪಂಚಾಂಗ ವಿವರ

  • ಶಕೆ ಹಾಗೂ ಸಂವತ್ಸರ: ಶಾಲಿವಾಹನ ಶಕೆ 1949, ಪರಾಭವ ನಾಮ ಸಂವತ್ಸರ
  • ಆಯನ ಹಾಗೂ ಋತು: ಉತ್ತರಾಯಣ, ವಸಂತ ಋತು
  • ಮಾಸ ಹಾಗೂ ಪಕ್ಷ: ಚೈತ್ರ ಮಾಸ, ಕೃಷ್ಣ ಪಕ್ಷ
  • ತಿಥಿ ಹಾಗೂ ವಾರ: ಷಷ್ಠೀ ತಿಥಿ, ಮಂಗಳವಾರ
  • ನಕ್ಷತ್ರ: ಮಹಾನಕ್ಷತ್ರ – ರೇವತೀ, ನಿತ್ಯನಕ್ಷತ್ರ – ಜ್ಯೇಷ್ಠಾ
  • ಯೋಗ ಹಾಗೂ ಕರಣ: ಸಿದ್ಧಿ ಯೋಗ, ಭದ್ರ ಕರಣ
  • ಸೂರ್ಯೋದಯ / ಸೂರ್ಯಾಸ್ತ: ಬೆಳಿಗ್ಗೆ 06:17 ಕ್ಕೆ / ಸಂಜೆ 06:35 ಕ್ಕೆ

ಶುಭಾಶುಭ ಸಮಯಗಳು:

  • ರಾಹು ಕಾಲ: ಮಧ್ಯಾಹ್ನ 03:31 ರಿಂದ 05:04 ರವರೆಗೆ
  • ಯಮಗಂಡ ಕಾಲ: ಬೆಳಿಗ್ಗೆ 09:22 ರಿಂದ 10:54 ರವರೆಗೆ
  • ಗುಳಿಕ ಕಾಲ: ಮಧ್ಯಾಹ್ನ 12:27 ರಿಂದ 01:59 ರವರೆಗೆ

ದ್ವಾದಶ ರಾಶಿಗಳ ಇಂದಿನ ಭವಿಷ್ಯ

ಮೇಷ ರಾಶಿ: ಕುಟುಂಬದವರ ಬೆಂಬಲದಿಂದ ನಿಮ್ಮ ವ್ಯಾಪಾರವನ್ನು ವಿಸ್ತರಿಸುವ ಪ್ರಯತ್ನಗಳು ಫಲ ನೀಡಲಿವೆ. ಆಪ್ತರ ಪ್ರೀತಿಯ ಸಹಕಾರ ದೊರೆಯಲಿದೆ. ವೃತ್ತಿ ಬದುಕಿನಲ್ಲಿ ಹೊಸ ಆಯಾಮಗಳನ್ನು ಕಂಡುಕೊಳ್ಳುವಿರಿ. ಹೂಡಿಕೆ ಮಾಡುವಾಗ ವಿವೇಚನೆ ಇರಲಿ. ಅತಿಯಾದ ಮಾನಸಿಕ ಆಯಾಸದಿಂದಾಗಿ ಪ್ರಮುಖ ಕಾರ್ಯಗಳನ್ನು ಮರೆಯುವ ಸಾಧ್ಯತೆ ಇದೆ, ಎಚ್ಚರ ವಹಿಸಿ. ಅಪರಿಚಿತರ ಮೂಲಕ ಉದ್ಯೋಗದ ಅವಕಾಶಗಳು ಒಲಿದು ಬರಬಹುದು.

ವೃಷಭ ರಾಶಿ: ಮಾನಸಿಕವಾಗಿ ಅತ್ಯಂತ ಉಲ್ಲಾಸದಿಂದ ಇರುತ್ತೀರಿ. ಕರ್ಮಕ್ಷೇತ್ರದಲ್ಲಿ ಸಹೋದ್ಯೋಗಿಗಳ ಸಂಪೂರ್ಣ ಬೆಂಬಲ ನಿಮ್ಮ ಮೇಲಿರುತ್ತದೆ. ವೃತ್ತಿಪರ ಜೀವನದ ಶುಭ ಸುದ್ದಿಯೊಂದು ಕಿವಿಗೆ ಬೀಳಲಿದೆ. ಕೆಲವು ವಿಚಾರಗಳಲ್ಲಿ ನಿರಾಸಕ್ತಿ ಅಥವಾ ವೈರಾಗ್ಯ ಕಾಡಬಹುದು. ಪರಿಚಯವಿಲ್ಲದವರಿಂದ ಕೊಂಚ ಅಂತರ ಕಾಯ್ದುಕೊಳ್ಳುವುದು ಒಳಿತು. ವಿರೋಧಿಗಳು ಮೇಲುಗೈ ಸಾಧಿಸದಂತೆ ಎಚ್ಚರಿಕೆ ವಹಿಸಿ.

ಮಿಥುನ ರಾಶಿ: ವ್ಯಾಪಾರದಲ್ಲಿ ಪ್ರಗತಿ ಮತ್ತು ಆರ್ಥಿಕ ಲಾಭದ ನಿರೀಕ್ಷೆ ಇದೆ. ಶಿಕ್ಷಣದ ಉದ್ದೇಶಕ್ಕಾಗಿ ಪ್ರಯಾಣ ಬೆಳೆಸುವ ಸಾಧ್ಯತೆಗಳಿವೆ. ಸ್ನೇಹಿತರು ಮತ್ತು ಮಕ್ಕಳಿಂದ ಆರ್ಥಿಕ ಸಹಾಯ ದೊರೆಯಲಿದೆ. ಆಡಂಬರದ ಪ್ರದರ್ಶನದಿಂದ ದೂರವಿರಿ. ಆಸ್ತಿ ಅಥವಾ ಭೂಮಿಗೆ ಸಂಬಂಧಿಸಿದ ವಿಚಾರಗಳು ಬೇಸರ ತರಿಸಬಹುದು. ಕುಟುಂಬದವರೊಂದಿಗೆ ಹಣಕಾಸಿನ ಕುರಿತು ಮಹತ್ವದ ಚರ್ಚೆ ನಡೆಸುವಿರಿ.

ಕರ್ಕಾಟಕ ರಾಶಿ: ಇಂದು ಖರ್ಚಿನ ಪ್ರಮಾಣ ಹೆಚ್ಚಾಗಿರಲಿದೆ. ಮಾತಿನ ಮೇಲೆ ಸಂಪೂರ್ಣ ಹಿಡಿತವಿರಲಿ. ಹೊಸ ಲಾಭದಾಯಕ ಅವಕಾಶಗಳು ಒದಗಿಬಂದರೂ, ಅದಕ್ಕಾಗಿ ಹೆಚ್ಚಿನ ಓಡಾಟ ಮಾಡಬೇಕಾಗುತ್ತದೆ. ದಿನಚರಿಯಲ್ಲಿ ಹಠಾತ್ ಬದಲಾವಣೆಗಳಾಗಬಹುದು. ವೃತ್ತಿ ಜೀವನದಲ್ಲಿ ಮೇಲಧಿಕಾರಿಗಳಿಂದ ಕೊಂಚ ಒತ್ತಡ ಎದುರಾಗುವ ಸಾಧ್ಯತೆ ಇದೆ. ಹಿರಿಯರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಅಗತ್ಯ. ದೊಡ್ಡ ಸಾಹಸಗಳಿಗೆ ಕೈಹಾಕದಿರುವುದು ಉತ್ತಮ.

ಸಿಂಹ ರಾಶಿ: ಸಹೋದರ-ಸಹೋದರಿಯರಿಂದ ಹಣಕಾಸಿನ ನೆರವು ಸಿಗಲಿದೆ. ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇದು ಸೂಕ್ತ ವೇದಿಕೆಯಾಗಲಿದೆ. ದಾಂಪತ್ಯದಲ್ಲಿ ಸಣ್ಣಪುಟ್ಟ ಮುನಿಸುಗಳು ಬರಬಹುದು, ತಾಳ್ಮೆ ಇರಲಿ. ಹಳೆಯ ನೋವುಗಳು ಮರುಕಳಿಸುವ ಸಾಧ್ಯತೆ ಇದೆ. ಆರ್ಥಿಕ ಮತ್ತು ಕಾನೂನು ವಿಚಾರಗಳಲ್ಲಿ ಗೊಂದಲಗಳಿರಲಿದ್ದು, ಯಾವುದೇ ಆತುರದ ತೀರ್ಮಾನಗಳನ್ನು ಕೈಗೊಳ್ಳದಿರುವುದು ಜಾಣತನ.

ಕನ್ಯಾ ರಾಶಿ: ದಾಂಪತ್ಯ ಜೀವನ ಮಧುರವಾಗಿರುತ್ತದೆ. ನಿಮ್ಮ ಕೆಲಸಗಳಿಗೆ ಇತರರ ನೆರವು ಸುಲಭವಾಗಿ ದೊರೆಯಲಿದೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತ ಸಿಗಲಿದೆ. ಹಣಕಾಸಿನ ಉಳಿತಾಯದತ್ತ ಹೆಚ್ಚು ಗಮನ ಹರಿಸುವಿರಿ. ಅನಗತ್ಯ ಮಾತುಗಳಿಗಿಂತ ಮೌನವಾಗಿ ಕೆಲಸ ಮಾಡುವುದು ಯಶಸ್ಸಿನ ಗುಟ್ಟು. ಭವಿಷ್ಯದ ದೃಷ್ಟಿಯಿಂದ ಸಂಪನ್ಮೂಲಗಳನ್ನು ಜಾಗರೂಕತೆಯಿಂದ ಬಳಸಿಕೊಳ್ಳಿ.

ತುಲಾ ರಾಶಿ: ನಿಮ್ಮ ಶಾಂತ ಮತ್ತು ಪ್ರೀತಿಯ ನಡವಳಿಕೆಯಿಂದ ಆಪ್ತರ ಮೆಚ್ಚುಗೆ ಗಳಿಸುವಿರಿ. ದೀರ್ಘಕಾಲೀನ ವ್ಯಾಪಾರ ಯೋಜನೆಗಳತ್ತ ಗಮನ ಹರಿಸುವುದು ಒಳಿತು. ತಾಯಿಯವರ ಆರೋಗ್ಯದಲ್ಲಿ ಕೊಂಚ ಏರುಪೇರಾಗಬಹುದು. ಅತಿಯಾದ ಕೋಪ ಅಥವಾ ಕಠಿಣ ನಿರ್ಧಾರಗಳಿಂದ ದೂರವಿರಿ. ಮಾನಸಿಕ ಸಮತೋಲನ ಕಾಯ್ದುಕೊಳ್ಳುವುದು ಈ ದಿನದ ಪ್ರಮುಖ ಅಗತ್ಯ.

ವೃಶ್ಚಿಕ ರಾಶಿ: ಉದ್ಯೋಗದಲ್ಲಿ ಬಡ್ತಿ ಅಥವಾ ಸ್ಥಳ ಬದಲಾವಣೆಯ ಶುಭ ಸೂಚನೆಗಳಿವೆ. ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ. ನಿಮ್ಮ ಆಲೋಚನೆಗಳು ಮತ್ತು ಸಲಹೆಗಳು ಜನರಿಗೆ ಇಷ್ಟವಾಗಲಿವೆ. ಅಂದುಕೊಂಡ ಕಾರ್ಯಗಳನ್ನು ಯಾವುದೇ ಅಂಜಿಕೆಯಿಲ್ಲದೆ ಪೂರ್ಣಗೊಳಿಸುವಿರಿ. ಮಾನಸಿಕ ನೆಮ್ಮದಿ ಇರಲಿದೆ. ಸಂಗಾತಿಯ ಆರೋಗ್ಯದ ಬಗ್ಗೆ ನಿಗಾವಿರಲಿ.

ಧನು ರಾಶಿ: ಕಚೇರಿಯಲ್ಲಿ ಮೇಲಧಿಕಾರಿಗಳ ಬೆಂಬಲವಿದ್ದರೂ, ಕೆಲಸದ ಒತ್ತಡ ಮತ್ತು ಗೊಂದಲಗಳು ಇರಲಿವೆ. ಮಾತನಾಡುವಾಗ ಶಬ್ದಗಳ ಬಗ್ಗೆ ಎಚ್ಚರವಿರಲಿ, ಕಠೋರ ಮಾತುಗಳು ಸಮಸ್ಯೆ ತಂದೊಡ್ಡಬಹುದು. ಪೋಷಕರೊಂದಿಗೆ ವೈಚಾರಿಕ ಭಿನ್ನಾಭಿಪ್ರಾಯಗಳು ಮೂಡಬಹುದು. ಜೀವನಶೈಲಿಯನ್ನು ಉತ್ತಮಪಡಿಸಿಕೊಳ್ಳಲು ಹಣ ಖರ್ಚು ಮಾಡುವಿರಿ. ಕೆಲಸದ ಸ್ಥಳದ ವಾತಾವರಣ ನಿಮ್ಮ ಮನಸ್ಥಿತಿಯ ಮೇಲೆ ಪ್ರಭಾವ ಬೀರಲಿದೆ.

ಮಕರ ರಾಶಿ: ಆಪ್ತರನ್ನು ಭೇಟಿಯಾಗುವುದರಿಂದ ಮನಸ್ಸಿಗೆ ಅತೀವ ಸಂತೋಷ ಸಿಗಲಿದೆ. ಕುಟುಂಬದಲ್ಲಿ ಸಂಭ್ರಮದ ವಾತಾವರಣ ಇರಲಿದೆ. ಆರಂಭದ ಸಣ್ಣಪುಟ್ಟ ಅಡೆತಡೆಗಳು ನಿವಾರಣೆಯಾಗಲಿವೆ. ಅನಿರೀಕ್ಷಿತವಾಗಿ ಆರ್ಥಿಕ ಲಾಭದ ಯೋಗವಿದೆ. ಆರೋಗ್ಯದ ಕಡೆಗೆ ಗಮನ ಹರಿಸಿ ಮತ್ತು ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಕಾಯ್ದುಕೊಳ್ಳಿ. ಹೊಸ ಅವಕಾಶಗಳು ನಿಮ್ಮ ಕೈಹಿಡಿಯಲಿವೆ.

ಕುಂಭ ರಾಶಿ: ಸಾಹಿತ್ಯ, ಕಲೆ ಮುಂತಾದ ಕ್ಷೇತ್ರಗಳಲ್ಲಿ ನಿಮ್ಮ ಪ್ರತಿಭೆ ಪ್ರಕಾಶಿಸಲಿದೆ. ಕುಟುಂಬದ ಸದಸ್ಯರು, ವಿಶೇಷವಾಗಿ ತಾಯಿಯೊಂದಿಗಿನ ಬಾಂಧವ್ಯ ವೃದ್ಧಿಯಾಗಲಿದೆ. ಸಣ್ಣ ಪ್ರವಾಸದ ಯೋಗವಿದೆ. ನಿಮ್ಮ ಬುದ್ಧಿವಂತಿಕೆಯಿಂದ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಿರಿ. ಮಕ್ಕಳ ಸಹಕಾರ ಸಿಗಲಿದ್ದು, ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳಲು ಕಠಿಣ ಶ್ರಮ ಅಗತ್ಯ.

ಮೀನ ರಾಶಿ: ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಉತ್ತಮ ಫಲಿತಾಂಶ ಸಿಗಲಿದೆ. ಆದರೆ, ತಾಯಿಯ ಅನಾರೋಗ್ಯದ ಚಿಂತೆ ಕಾಡಬಹುದು. ಇತರರ ವಿಷಯಗಳಲ್ಲಿ ಮೂಗು ತೂರಿಸಿ ಗೌರವ ಕಳೆದುಕೊಳ್ಳಬೇಡಿ. ವ್ಯಾಪಾರಿಗಳಿಗೆ ಇದು ಅಷ್ಟೊಂದು ಅನುಕೂಲಕರ ಸಮಯವಲ್ಲ. ಹಳೆಯ ಸಾಲಗಳು ಮಾನಸಿಕ ಒತ್ತಡ ತರಬಹುದು, ಹೀಗಾಗಿ ಹೊಸದಾಗಿ ಯಾರಿಗೂ ಹಣವನ್ನು ಸಾಲವಾಗಿ ನೀಡದಿರುವುದು ಕ್ಷೇಮ. ಮಾರ್ಗದರ್ಶನಕ್ಕಾಗಿ ಆಪ್ತರನ್ನು ಭೇಟಿಯಾಗುವಿರಿ.

Leave a Reply

Your email address will not be published. Required fields are marked *