ಮಳೆಯಿಂದ ಸತತ 3ನೇ ಪಂದ್ಯ ರದ್ದು; ಸೆಮೀಸ್​ಗೇರಿದ ಆಸ್ಟ್ರೇಲಿಯಾ, ಅಫ್ಘಾನ್​ಗೆ ಇಂದಿನ ಪಂದ್ಯವೇ ನಿರ್ಣಾಯಕ.

2025 ರ ಚಾಂಪಿಯನ್ಸ್ ಟ್ರೋಫಿಯ (Champions Trophy 2025) ಬಿ ಗುಂಪಿನಿಂದ ಆಸ್ಟ್ರೇಲಿಯಾ ಮೊದಲ ತಂಡವಾಗಿ ಸೆಮಿಫೈನಲ್​ಗೆ ಅರ್ಹತೆ ಪಡೆದುಕೊಂಡಿದೆ. ಲಾಹೋರ್‌ನಲ್ಲಿ ಇಂದು ನಡೆದ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ (Afghanistan vs Australia) ನಡುವಿನ ಪಂದ್ಯವು ಮಳೆಯಿಂದಾಗಿ ರದ್ದಾಯಿತು. ಈ ಕಾರಣದಿಂದಾಗಿ, ಆಸ್ಟ್ರೇಲಿಯಾ ಸೆಮಿಫೈನಲ್‌ಗೆ ಅರ್ಹತೆ ಪಡೆದರೆ, ಇತ್ತ ಅಫ್ಘಾನಿಸ್ತಾನ ಟೂರ್ನಿಯಿಂದ ಹೊರಹೋಗುವ ಅಂಚಿನಲ್ಲಿದೆ. ಈಗ, ಮಾರ್ಚ್ 1 ರ ಶನಿವಾರ ನಡೆಯಲ್ಲಿರವ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದ ಫಲಿತಾಂಶದ ಮೇಲೆ ಯಾವ ತಂಡ ಸೆಮಿಫೈನಲ್​ಗೇರುತ್ತದೆ ಎಂಬುದು ನಿರ್ಧಾರವಾಗಲಿದೆ. ಶನಿವಾರ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಬೃಹತ್ ಅಂತರದಿಂದ ಸೋತರೆ ಮಾತ್ರ ಅಫ್ಘಾನಿಸ್ತಾನಕ್ಕೆ ಕೊನೆಯ ಅವಕಾಶ ಸಿಗಲಿದೆ.

ಮಳೆಯಿಂದ ಸತತ 3ನೇ ಪಂದ್ಯ ರದ್ದು

ಎ ಗುಂಪಿನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಈಗಾಗಲೇ ಸೆಮಿಫೈನಲ್ ತಲುಪಿವೆ. ಆದರೆ ಬಿ ಗುಂಪಿನಿಂದ ಮಾತ್ರ ಇದುವರೆಗೆ ಯಾವ ತಂಡವೂ ಸೆಮಿಫೈನಲ್​ ತಲುಪಿರಲಿಲ್ಲ. ಇಂದು ನಡೆದ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯ ಮಳೆಯಿಂದ ರದ್ದಾದ ಕಾರಣ 4 ಅಂಕ ಸಂಪಾಧಿಸಿರುವ ಆಸ್ಟ್ರೇಲಿಯಾ ತಂಡ ನೇರವಾಗಿ ಸೆಮಿಫೈನಲ್​ಗೇರಿದೆ. ವಾಸ್ತವವಾಗಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಪಂದ್ಯವೂ ಮಳೆಯಿಂದಾಗಿ ರದ್ದಾಗಿತ್ತು. ಹೀಗಾಗಿ ಉಭಯ ತಂಡಗಳಿಗೆ ತಲಾ ಒಂದು ಅಂಕ ನೀಡಲಾಗಿತ್ತು. ಇದೀಗ ಈ ಪಂದ್ಯವೂ ರದ್ದಾದ ಕಾರಣ ಎರಡೂ ತಂಡಗಳಿಗೆ ತಲಾ ಒಂದೊಂದು ಅಂಕ ನೀಡಲಾಯಿತು. ಆ ಪ್ರಕಾರ ಆಸ್ಟ್ರೇಲಿಯಾ 4 ಅಂಕಗಳೊಂದಿಗೆ ಸೆಮಿಫೈನಲ್ ಪ್ರವೇಶಿಸಿತು.

https://twitter.com/ICC/status/1895503336335630679

ಅಫ್ಘನ್​ಗೆ ಇನ್ನು ಇದೇ ಅವಕಾಶ

ಇಂದಿನ ಪಂದ್ಯ ರದ್ದಾದ ಕಾರಣ ಅಫ್ಘಾನಿಸ್ತಾನದ ಬಳಿ ಒಟ್ಟು 3 ಅಂಕಗಳಿವೆ. ಇತ್ತ ದಕ್ಷಿಣ ಆಫ್ರಿಕಾ ತಂಡದ ಬಳಿವೂ 3 ಅಂಕಗಳಿವೆ. ಆದರೆ ದಕ್ಷಿಣ ಆಫ್ರಿಕಾ ತಂಡ ಇನ್ನೂ ತನ್ನ ಕೊನೆಯ ಪಂದ್ಯವನ್ನು ಆಡಬೇಕಾಗಿದೆ. ಈ ಪಂದ್ಯವು ಮಾರ್ಚ್ 1 ರ ಶನಿವಾರ ಇಂಗ್ಲೆಂಡ್ ವಿರುದ್ಧ ನಡೆಯಲಿದೆ. ಈ ಪಂದ್ಯವನ್ನು ದಕ್ಷಿಣ ಆಫ್ರಿಕಾ ಗೆದ್ದರೆ ಮುಂದಿನ ಸುತ್ತಿಗೆ ಪ್ರವೇಶ ಪಡೆಯುತ್ತದೆ. ಒಂದು ವೇಳೆ ಸ್ವಲ್ಪ ಅಂತರದಿಂದ ಸೋತರೂ, ಮುಂದಿನ ಸುತ್ತಿಗೆ ಆಫ್ರಿಕಾ ಸ್ಥಾನ ಪಡೆಯಲಿದೆ. ಏಕೆಂದರೆ ದಕ್ಷಿಣ ಆಫ್ರಿಕಾದ ನೆಟ್ ರನ್ ರೇಟ್ ಪ್ರಸ್ತುತ ಅಫ್ಘಾನಿಸ್ತಾನಕ್ಕಿಂತ ಹೆಚ್ಚಾಗಿದೆ. ಒಂದು ವೇಳೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ವಿರುದ್ಧ ಭಾರಿ ಅಂತರದಲ್ಲಿ ಸೋತು, ಅದರ ನೆಟ್ ರನ್​ ರೇಟ್ ಅಫ್ಘಾನಿಸ್ತಾನದ ನೆಟ್ ರನ್​ರೇಟ್​ಗಿಂತ ಕಡಿಮೆಯಾದರೆ ಮಾತ್ರ ಅಫ್ಘಾನಿಸ್ತಾನಕ್ಕೆ ಸೆಮಿಫೈನಲ್ ಟಿಕೆಟ್ ಸಿಗಲಿದೆ.

Source : https://tv9kannada.com/sports/cricket-news/champions-trophy-2025-australia-reaches-semifinals-psr-984904.html

Views: 0

Leave a Reply

Your email address will not be published. Required fields are marked *