ನಾಳೆ ಭಾರತ-ನ್ಯೂಜಿಲೆಂಡ್​ ಫೈನಲ್​ ಪಂದ್ಯದ ಸಮಯ ಬದಲಾವಣೆ..?

IND VS NZ : ಭಾರತ ಮತ್ತು ನ್ಯೂಜಿಲೆಂಡ್​ ತಂಡಗಳ ನಡುವಿನ ಚಾಂಪಿಯನ್ಸ್​ ಟ್ರೋಫಿಯ ಫೈನಲ್​ ಪಂದ್ಯ ನಾಳೆ ನಡೆಯಲಿದೆ.

IND vs NZ Final: ಐಸಿಸಿ ಚಾಂಪಿಯನ್ಸ್​ ಟ್ರೋಫಿ ಭಾಗವಾಗಿ ಭಾನುವಾರ (ನಾಳೆ) ಭಾರತ ಮತ್ತು ನ್ಯೂಜಿಲೆಂಡ್​ ತಂಡಗಳ ನಡುವೆ ಫೈನಲ್​ ಪಂದ್ಯ ನಡೆಯಲಿದೆ.

ಕಳೆದ ಮೂರು ದಿನಗಳ ಹಿಂದೆ ನಡೆದಿದ್ದ ಸೆಮಿಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿರುವ ಭಾರತ ಅಜೇಯವಾಗಿ ಫೈನಲ್​ಗೆ ಪ್ರವೇಶ ಪಡೆದುಕೊಂಡಿದೆ. ಎರಡನೇ ಸೆಮಿಸ್​ನಲ್ಲಿ ದಕ್ಷಿಣ ಆಫ್ರಿಕಾ ಮಣಿಸಿದ ಕಿವೀಸ್​ ಪಡೆ ಭಾರತದ ವಿರುದ್ಧ ಅಂತಿಮ ಕಾದಾಟಕ್ಕೆ ಸಜ್ಜಾಗಿದೆ. ಎರಡೂ ತಂಡಗಳು ಬಲಿಷ್ಠವಾಗಿರುವ ಕಾರಣ ನಾಳೆಯ ಪಂದ್ಯ ರೋಚಕತೆಯಿಂದ ಕೂಡಿರಲಿದೆ.

ಸೋಲು – ಗೆಲುವು ಅಂಕಿ – ಅಂಶ: ಭಾರತ ಮತ್ತು ನ್ಯೂಜಿಲೆಂಡ್​ ತಂಡಗಳು ಏಕದಿನ ಸರಣಿಯಲ್ಲಿ 119 ಬಾರಿ ಮುಖಾಮುಖಿ ಆಗಿವೆ. ಇದರಲ್ಲಿ ಕಿವೀಸ್​ ಪಡೆ ಮೇಲೆ ಭಾರತ ಪ್ರಾಬಲ್ಯ ಸಾಧಿಸಿದೆ. ಈ ವರೆಗೂ ಭಾರತ ಒಟ್ಟು 61 ಪಂದ್ಯಗಳಲ್ಲಿ ನ್ಯೂಜಿಲೆಂಡ್​ ತಂಡವನ್ನು ಮಣಿಸಿದೆ. ಇದೇ ವೇಳೆ, ಕಿವೀಸ್​ ಪಡೆ ಕೂಡ ಭಾರತದ ವಿರುದ್ಧ 50 ಬಾರಿ ಗೆಲುವು ಸಾಧಿಸಿದೆ. ಉಭಯ ತಂಡಗಳ ನಡುವಿನ 7 ಪಂದ್ಯಗಳು ರದ್ದಾಗಿವೆ. ಒಂದು ಪಂದ್ಯ ಡ್ರಾನಲ್ಲಿ ಕೊನೆಗೊಂಡಿದೆ.

https://twitter.com/ICC/status/1898169210985234519

ಭಾರತ ತಂಡದಲ್ಲಿ ಬದಲಾವಣೆ: ನಾಳೆಯ ಪಂದ್ಯಕ್ಕಾಗಿ ತಂಡದಲ್ಲಿ ಬದಲಾವಣೆ ಸಾಧ್ಯತೆ ಇದೆ. ಬಹುತೇಕ ಹಿಂದಿನ ತಂಡವೆ ಕಣಕ್ಕಿಳಿಯಲಿದೆ. ಆದರೆ, ಎರಡನೇ ವೇಗಿ ಆಗಿ ಅರ್ಷದೀಪ್​ ಸಿಂಗ್​ ತಂಡದಲ್ಲಿ ಸ್ಥಾನ ಪಡೆಯವು ಸಾಧ್ಯತೆ ಇದೆ.

https://twitter.com/ICC/status/1898007829136454073

ಸಮಯ ಬದಲಾವಣೆ: ಭಾರತ ಮತ್ತು ನ್ಯೂಜಿಲೆಂಡ್​ ನಡುವಿನ ಪಂದ್ಯದ ಸಮಯ ಬದಲಾಗಲಿದೆ ಎಂಬ ಗೊಂದಲ ಫ್ಯಾನ್ಸ್​​ಗಳಲ್ಲಿ ಮೂಡಿದೆ. ಆದರೆ ಈ ಪಂದ್ಯದ ಸಮಯದಲ್ಲಿ ಯಾವುದೆ ಬದಲಾವಣೆ ಇರುವುದಿಲ್ಲ. ಮಳೆ ಅಡ್ಡಿ ಪಡೆಸಿದರೆ ಮಾತ್ರ ಪಂದ್ಯದ ಸಮಯ ಬದಲಾಗುವ ಸಾಧ್ಯತೆ ಇದೆ. ಮಳೆ ಆಗದಿದ್ದರೆ, ಭಾರತೀಯ ಕಾಲಮಾನದ ಪ್ರಕಾರ ಈ ಪಂದ್ಯ ಮಧ್ಯಾಹ್ನ 2:30ಕ್ಕೆ ಪ್ರಾರಭವಾಗಲಿದೆ. ಇದಕ್ಕೂ ಮೊದಲ 2 ಗಂಟೆಗೆ ಟಾಸ್​ ನಡೆಯಲಿದೆ.

ಸಂಭಾವ್ಯ ತಂಡಗಳು-ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೇಟ್​ ಕೀಪರ್​), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್ / ಅರ್ಷದೀಪ್​ ಸಿಂಗ್​, ಮೊಹಮ್ಮದ್ ಶಮಿ.

ನ್ಯೂಜಿಲೆಂಡ್​ ತಂಡ: ವಿಲ್ ಯಂಗ್, ರಚಿನ್ ರವೀಂದ್ರ, ಟಾಮ್ ಲ್ಯಾಥಮ್ (ವಿ.ಕೀ), ಡ್ಯಾರಿಲ್ ಮಿಚೆಲ್, ಕೇನ್ ವಿಲಿಯಮ್ಸನ್, ಮೈಕೆಲ್ ಬ್ರೇಸ್‌ವೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಕೈಲ್ ಜೇಮಿಸನ್, ವಿಲಿಯಂ ಒರೂರ್ಕ್, ಮ್ಯಾಟ್ ಹೆನ್ರಿ/ನಾಥನ್ ಸ್ಮಿತ್.

Source : https://www.etvbharat.com/kn/!sports/champions-trophy-india-vs-new-zealand-final-match-details-karnataka-news-kas25030803543

Leave a Reply

Your email address will not be published. Required fields are marked *