IPL 2023: ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೃಷ್ಟಿಯಾಗಲ್ಲಿರುವ ಪ್ರಮುಖ 8 ದಾಖಲೆಗಳಿವು

IPL 2023: ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೃಷ್ಟಿಯಾಗಲ್ಲಿರುವ ಪ್ರಮುಖ 8 ದಾಖಲೆಗಳಿವು

ಐಪಿಎಲ್-2023ರ (IPL 2023) ಲೀಗ್ ಹಂತ ಮುಗಿದಿದೆ. ಈಗ ಪ್ಲೇಆಫ್‌ನ ಸರದಿ. ಮಂಗಳವಾರದಿಂದ ಪ್ಲೇಆಫ್‌ ಪಂದ್ಯಗಳು ಆರಂಭವಾಗಲಿವೆ. ನಾಲ್ಕು ತಂಡಗಳು ಈಗಾಗಲೇ ಪ್ಲೇ ಆಫ್​ಗೆ ತಲುಪಿದ್ದು, ಪ್ರಸ್ತುತ ವಿಜೇತ ಗುಜರಾತ್ ಟೈಟಾನ್ಸ್ ಮತ್ತು ನಾಲ್ಕು ಬಾರಿ ವಿಜೇತ ಚೆನ್ನೈ ಸೂಪರ್ ಕಿಂಗ್ಸ್ (Gujarat Titans and Chennai Super Kings) ಹೊರತುಪಡಿಸಿ, ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (Mumbai Indians and Lucknow Super Giants) ತಂಡಗಳು ಸಹ ಪ್ಲೇ ಆಫ್ ತಲುಪಿವೆ. ಮೊದಲ ಕ್ವಾಲಿಫೈಯರ್ ಪಂದ್ಯ ಚೆನ್ನೈ ಮತ್ತು ಗುಜರಾತ್ ನಡುವೆ ನಡೆಯಲಿದ್ದು, ಈ ಪಂದ್ಯದಲ್ಲಿ ಉಭಯ ತಂಡಗಳ ಕೆಲವು ಆಟಗಾರರು ದಾಖಲೆ ಬರೆಯುವ ಹೊಸ್ತಿಲಿನಲ್ಲಿದ್ದಾರೆ.

ಇನ್ನು ಕ್ವಾಲಿಫೈಯರ್-1ರಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ತಲುಪಲಿದೆ. ಅದೇ ಸಮಯದಲ್ಲಿ, ಸೋತ ತಂಡಕ್ಕೆ ಫೈನಲ್ ತಲುಪಲು ಮತ್ತೊಂದು ಅವಕಾಶ ಸಿಗುತ್ತದೆ. ಈ ತಂಡ ಕ್ವಾಲಿಫೈಯರ್-2ರಲ್ಲಿ ಎಲಿಮಿನೇಟರ್ ಪಂದ್ಯದ ವಿಜೇತ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್‌ಗೆ ತಲುಪಲಿದೆ.

IPL 2023, GT vs CSK Live Streaming: ಕ್ವಾಲಿಫೈಯರ್ 1 ಪಂದ್ಯ ಯಾವಾಗ ಎಷ್ಟು ಗಂಟೆಗೆ ಆರಂಭ? ಇಲ್ಲಿದೆ ಪೂರ್ಣ ಮಾಹಿತಿ

ದಾಖಲೆ ಬರೆಯಲ್ಲಿರುವ ಆಟಗಾರರ ಪಟ್ಟಿ ಹೀಗಿದೆ.

  1. ಗುಜರಾತ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮತ್ತೊಮ್ಮೆ ತಮ್ಮ ತಂಡವನ್ನು ಪ್ರಶಸ್ತಿ ಪಡೆಯಲು ಪ್ರಯತ್ನಿಸಲಿದ್ದಾರೆ. ಚೆನ್ನೈ ವಿರುದ್ಧದ ಕ್ವಾಲಿಫೈಯರ್ ಪಂದ್ಯದಲ್ಲಿ ಪಾಂಡ್ಯ ಇನ್ನೆರಡು ವಿಕೆಟ್ ಪಡೆದರೆ ಟಿ20ಯಲ್ಲಿ 150 ವಿಕೆಟ್ ಪೂರೈಸಲಿದ್ದಾರೆ.
  2. ಚೆನ್ನೈ ತಂಡದ ಆಲ್​ರೌಂಡರ್ ರವೀಂದ್ರ ಜಡೇಜಾ ಇನ್ನೂ ಎರಡು ಸಿಕ್ಸರ್‌ಗಳನ್ನು ಬಾರಿಸಿದರೆ, ಐಪಿಎಲ್‌ನಲ್ಲಿ 100 ಸಿಕ್ಸರ್‌ಗಳನ್ನು ಪೂರ್ಣಗೊಳಿಸಲ್ಲಿದ್ದಾರೆ.
  3. ಅಲ್ಲದೆ ಜಡೇಜಾ ಇನ್ನೂ ಒಂದು ವಿಕೆಟ್ ಪಡೆದರೆ, ಐಪಿಎಲ್‌ನಲ್ಲಿ 150 ವಿಕೆಟ್‌ಗಳನ್ನು ಪೂರೈಸಿದ ದಾಖಲೆಯನ್ನು ಬರೆಯಲ್ಲಿದ್ದಾರೆ.
  4. ಚೆನ್ನೈ ಬ್ಯಾಟ್ಸ್‌ಮನ್ ಅಂಬಟಿ ರಾಯುಡು ಟಿ20 ಕ್ರಿಕೆಟ್‌ನಲ್ಲಿ 6000 ರನ್ ಪೂರೈಸಲು ಎಂಟು ರನ್‌ಗಳ ಅಂತರದಲ್ಲಿದ್ದಾರೆ. ಇದಲ್ಲದೆ, ರಾಯುಡು ಐದು ಬೌಂಡರಿಗಳನ್ನು ಬಾರಿಸಿದರೆ, ಟಿ20 ಕ್ರಿಕೆಟ್‌ನಲ್ಲಿ 500 ಬೌಂಡರಿಗಳನ್ನು ಪೂರ್ಣಗೊಳಿಸುತ್ತಾರೆ.
  5. ಚೆನ್ನೈನ ಅಜಿಂಕ್ಯ ರಹಾನೆ ಕೂಡ ಟಿ20 ಕ್ರಿಕೆಟ್‌ನಲ್ಲಿ 6000 ರನ್ ಪೂರೈಸಲು 78 ರನ್‌ಗಳ ಅಂತರದಲ್ಲಿದ್ದಾರೆ.
  6. ಗುಜರಾತ್‌ನ ಇನ್ ಫಾರ್ಮ್ ಬ್ಯಾಟ್ಸ್‌ಮನ್ ಶುಭ್​ಮನ್ ಗಿಲ್ ಇನ್ನೂ 41 ರನ್ ಬಾರಿಸಿದರೆ ಟಿ20 ಮಾದರಿಯಲ್ಲಿ 3500 ರನ್ ಪೂರ್ಣಗೊಳಿಸುತ್ತಾರೆ. ಇನ್ನು ಎಂಟು ಬೌಂಡರಿಗಳನ್ನು ಬಾರಿಸಿದರೆ ಟಿ20 ಕ್ರಿಕೆಟ್‌ನಲ್ಲಿ 350 ಬೌಂಡರಿಗಳನ್ನು ಪೂರೈಸಲಿದ್ದಾರೆ.
  7. ಹಾಗೆಯೇ ಗುಜರಾತ್‌ನ ಅಲ್ಜಾರಿ ಜೋಸೆಫ್ ಟಿ20 ಕ್ರಿಕೆಟ್‌ನಲ್ಲಿ ಇದುವರೆಗೆ 99 ವಿಕೆಟ್‌ಗಳನ್ನು ಪಡೆದಿದ್ದು, ಇನ್ನು ಒಂದು ವಿಕೆಟ್ ಪಡೆದರೆ ವಿಕೆಟ್​ಗಳ ಶತಕ ಬಾರಿಸಲಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/ipl-2023-records-will-rain-in-the-match-of-chennai-and-gujarat-first-qualifier-match-psr-584845.html

Leave a Reply

Your email address will not be published. Required fields are marked *