ಚಿತ್ರ ಡಾನ್ ಬೋಸ್ಕೋ ಸಂಸ್ಥೆವತಿಯಿಂದ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ತರಬೇತಿ ಕಾರ್ಯಗಾರ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ: ತಾಲೂಕಿನ ಚಿಕ್ಕೇನಹಳ್ಳಿ ಗ್ರಾಮದಲ್ಲಿ ಇತ್ತೀಚೇಗೆ ಚಿತ್ರ ಡಾನ್ ಬೋಸ್ಕೋ ಸಂಸ್ಥೆವತಿಯಿಂದ ಮಹಿಳಾ ಸ್ವಸಹಾಯ ಸಂಘದ
ಸದಸ್ಯರಿಗೆ ಸಾಮರ್ಥ್ಯ ನಿರ್ಮಾಣದ ಬಗ್ಗೆ ತರಬೇತಿ ಕಾರ್ಯಗಾರವನ್ನು ಏರ್ಪಡಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಚಿತ್ರ ಡಾನ್ ಬೋಸ್ಕೋ ಸಂಸ್ಥೆಯ ನಿರ್ದೇಶಕರಾದ ಅಂತೋನಿ ರಾಜ್ ಮಾತನಾಡಿ
ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಬೇಕು.ಖಿನ್ನತೆಗೆ ಒಳಗಾಗದೆ ಮಾನಸಿಕವಾಗಿ ಆರೋಗ್ಯವಾಗಿ ಬದುಕಬೇಕು.ಇತ್ತೀಚಿನ
ದಿನಗಳಲ್ಲಿ ಹೆಣ್ಣು ಮಕ್ಕಳು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಒಂದು ಕುಟುಂಬದಿಂದ ಇನ್ನೊಂದು ಕುಟುಂಬಕ್ಕೆ, ಒಂದು
ಮಹಿಳೆಯಿಂದ ಇನ್ನೊಂದು ಮಹಿಳೆಗೆ ಹೋಲಿಕೆ ಮಾಡಿಕೊಳ್ಳದೆ ಇರುವ ಸೌಲಭ್ಯಗಳನ್ನ ಅನುಭವಿಸಿ ಬದುಕಬೇಕು.ಆರೋಗ್ಯವಂತ
ಕುಟುಂಬ ಮತ್ತು ಸಮಾಜವನ್ನು ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.

ಮೈಂಡ್ಸ್ ಯೋಜನೆಯ ಸಂಯೋಜಕರಾದಂತಹ ಶ್ರೇಯಾಂಕ ಮಾತನಾಡಿ, ಮಕ್ಕಳು ನೋಡಲಿಕ್ಕೆ ತುಂಬಾ ಚೆನ್ನಾಗಿರುತ್ತಾರೆ,
ಆದರೆ ದೈಹಿಕವಾಗಿ ಮಾನಸಿಕವಾಗಿ ಬಳಲಿದಂತೆ ವರ್ತಿಸುತ್ತಾರೆ. ಮೊಬೈಲ್ ಬಳಕೆಯಿಂದ ಕುಟುಂಬಗಳಲ್ಲಿ ಕುಳಿತು
ಮಾತನಾಡುವುದು ಕಡಿಮೆಯಾಗಿದೆ.ಮಾನವ ಸಂಬಂಧಗಳಲ್ಲಿ ಕೊರತೆ ಉಂಟಾಗಿದೆ ಇದನ್ನು ಮಹಿಳೆಯರು ಅರ್ಥ ಮಾಡಿಕೊಂಡು
ಮುಂದೆ ಹೋಗಬೇಕು ಎಂದು ತಿಳಿಸಿದರು.

ಮಂಜುನಾಥ್ ರವರು ಮಾತನಾಡಿ ಸ್ವ ಸಹಾಯ ಸಂಘಗಳ ಪರಿಕಲ್ಪನೆ ಬಗ್ಗೆ, ಹಣಕಾಸು ನಿರ್ವಹಣೆ ಬಗ್ಗೆ, ಮಹಿಳಾ ಸ್ವಸಹಾಯ
ಸಂಘಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವುದರ ಬಗ್ಗೆ ಮಹಿಳೆಯರಿಗೆ ಮಾಹಿತಿಯನ್ನು ನೀಡಿದರು.

ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದಂತ ಶ್ರೀಮತಿ ತ್ರಿವೇಣಿ, ಚಿತ್ರ ಡಾನ್ ಬೋಸ್ಕ ಸಂಸ್ಥೆಯ ಸಿಬ್ಬಂದಿಯಾದ
ಜಯಣ್ಣ ಹಾಗೂ ಮಹಿಳಾ ಸ್ವ ಸಹಾಯ ಸಂಘದ ಮಹಿಳೆಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *